Ksrtc: ಕೆಎಸ್ಆರ್ಟಿಸಿ ಬಸ್ ನಲ್ಲಿ ಕೋಳಿಗೂ ಟಿಕೇಟ್: ಹಣ ಪಾವತಿಸಿ ಪ್ರಯಾಣಿಸಿದ ಪೋಟೋ ವೈರಲ್

ಚಿಕ್ಕಬಳ್ಳಾಪುರ: ಬಸ್-ಟ್ರೇನ್ ಗಳಲ್ಲಿ ಟಿಕೇಟ್ ಪಡೆಯದೇ ಪ್ರಯಾಣಿಸುವ ಖಯಾಲಿ ಇರೋರು ಸಾಕಷ್ಟು ಜನ ಕಾಣ ಸಿಗ್ತಾರೆ. ಆದರೆ ಇಲ್ಲೊಬ್ಬ ರೈತ ಮಾತ್ರ ತನಗೆ ಮಾತ್ರವಲ್ಲದೇ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಕೋಳಿಗೂ ಟಿಕೇಟ್ ಪಡೆದು ನಿಯಮ ಪಾಲಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರದಿಂದ  ಸೋಮೇಶ್ವರ  ಗ್ರಾಮಕ್ಕೆ ರೈತನೊಬ್ಬ ಪ್ರಯಾಣಿಸಲು ಕೆಎಸ್ಆರ್ಟಿಸಿ ಬಸ್ ಹತ್ತಿದ್ದ. ರೈತ ತನ್ನೊಂದಿಗೆ ಕೋಳಿಯನ್ನು ತಂದಿದ್ದ. ಇದನ್ನು ಗಮನಿಸಿ ಬಸ್ ನಿರ್ವಾಹಕರು ಕೋಳಿಗೂ ಟಿಕೇಟ್ ಪಡೆಯಬೇಕೆಂಬ ನಿಯಮ ಹೇಳಿದ್ದಾರೆ.

ಕೂಡಲೇ ನಿಯಮ ಪಾಲಿಸಿದ ರೈತ ಕೋಳಿಗೂ ಟಿಕೇಟ್ ಪಡೆದಿದ್ದಾರೆ. ಎರಡು ಗ್ರಾಮಗಳ ನಡುವಿನ ಪ್ರಯಾಣ ವೆಚ್ಚ ವಯಸ್ಕರಿಗೆ 10 ರೂಪಾಯಿ ಆಗಿದ್ದು, ಪ್ರಾಣಿ ಸಾಗಾಣಿಕಾ ವೆಚ್ಚದ ನಿಯಮದಂತೆ ನಿರ್ವಾಹಕರು ಕೋಳಿಗೆ 5 ರೂಪಾಯಿ ಟಿಕೇಟ್ ನೀಡಿದ್ದಾರೆ.

ಬಸ್ ಸೀಟ್ ಮೇಲೆ ಕುಳಿತು 5 ರೂಪಾಯಿ ಟಿಕೇಟ್ ನಲ್ಲಿ ಪ್ರಯಾಣಿಸಿದ ಕೋಳಿ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಭೇಷ ಎನ್ನುತ್ತಿದ್ದಾರೆ.

ಇದನ್ನೂ ಓದಿ : Guinness Records : ಸೋಡಾ ಕುಡಿದು ಗಿನ್ನೆಸ್​ ರೆಕಾರ್ಡ್​ ಬರೆದ ಭೂಪ ..!!

ಇದನ್ನೂ ಓದಿ : ಸಖತ್‌ ವೈರಲ್‌ ಆಯ್ತು ವೃದ್ದದಂಪತಿಗಳ ಪೋಟೋ ಶೂಟ್‌

( hen traveled with half ticket in Chikkaballapur ksrtc bus )

Comments are closed.