ಕೆಜಿಎಫ್, ಉಗ್ರಂ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೀಗ ಬಾಲಿವುಡ್ ಅಂಗಳಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ಬರುತ್ತಿರೋ ಅಂತಿಮ್ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಒಂದೇ ದಿನ ಬರೋಬ್ಬರಿ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ರವಿ ಬಸ್ರೂರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಅನ್ನೋ ಗ್ರಾಮೀಣ ಭಾಗದಲ್ಲಿ ಜನಸಿದ್ದ ರವಿ ಬಸ್ರೂರು. ಇದೀಗ ತಮ್ಮೂರಲ್ಲೇ ಮ್ಯೂಸಿಕ್ ಸ್ಟೂಡಿಯೋ ಮಾಡಿಕೊಂಡು ಸ್ಯಾಂಡಲ್‌ವುಡ್, ಮಾಲಿವುಡ್, ಕಾಲಿವುಡ್, ಟಾಲಿವುಡ್ ಮಾತ್ರವಲ್ಲ ಇದೀಗ ಬಾಲಿವುಡ್ ಸಿನಿಮಾಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ದೇಶವೇ ಇದೀಗ ಬಸ್ರೂರಿನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಉಗ್ರಂ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದ ರವಿ ಬಸ್ರೂರು, ಮೊದಲ ಸಿನಿಮಾದಲ್ಲಿಯೇ ಮೋಡಿ ಮಾಡಿದ್ದರು. ನಂತರ ಅಂಜನಿಪುತ್ರ, ಕರ್ವ ಸಿನಿಮಾಗಳು ಸಕ್ಸಸ್ ಕಂಡಿದ್ದರೂ ಕೂಡ, ರವಿ ಬಸ್ರೂರು ಅವರಿಗೆ ಪ್ಯಾನ್ ಇಂಡಿಯಾ ಖ್ಯಾತಿ ತಂದು ಕೊಟ್ಟಿದ್ದು ಕೆಜಿಎಫ್ ಸಿನಿಮಾ.

ಕೆಜಿಎಫ್ ಚಾಪ್ಟರ್ 1ಸಿನಿಮಾ ರವಿ ಬಸ್ರೂರು ಅವರಿಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿದ್ರೆ, ಕೆಜಿಎಫ್ ಚಾಪ್ಟರ್ 2 ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಹಣ ಸಂಪಾದನೆ ಯ ಬದಲು, ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಹೆಸರನ್ನು ಸಂಪಾದಿಸಿದ್ರು. ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಂಡ ರವಿ ಬಸ್ರೂರು ಇದೀಗ ಬಾಲಿವುಡ್ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ ಬಂಡವಾಳ ಹೂಡುತ್ತಿರುವ ಅಂತಿಮ್ ಸಿನಿಮಾದಲ್ಲಿ ಆಯುಷ್ ಶರ್ಮಾಗೆ ನಾಯಕಿಯಾಗಿ ಪ್ರಗ್ಯಾ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ರವಿ ಬಸ್ರೂರು ಅವರ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಅಂತಿಮ್ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ರವಿ ಬಸ್ರೂರು ಭರ್ಜರಿಯಾಗಿಯೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಟ್ರೈಲರ್‌ನಲ್ಲಿ ರವಿ ಬಸ್ರೂರು ಅವರ ಮ್ಯೂಸಿಕ್ ಸೌಂಡ್ ಮಾಡುತ್ತಿದೆ. ಕೆಜಿಎಫ್ ಸಿನಿಮಾದ ಸೂಪರ್ ಸಕ್ಸಸ್ ಬೆನ್ನಲ್ಲೇ ರವಿ ಬಸ್ರೂರು ಅವರಿಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್‌ಗಳು ಬರ್ತಿವೆ. ಅಂತಿಮ್ ಸಿನಿಮಾದ ಜೊತೆಗೆ ಸುಭಾಷ್ ಕಾಳೆ ಹಾಗೂ ಅಜಯ್ ಕಪೂರ್ ಕಾಂಬಿನೇಷನ್‌ನಲ್ಲಿ ಅಪ್ಘಾನಿಸ್ತಾನ್ ಬಿಕ್ಕಟ್ಟು ಕುರಿತ ಗರುಡ್ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಲಾರ್, ಮಲಯಾಲಂನ ಮಡ್ಡಿ, ತೆಲುಗಿನ ಮಾರ್ಷಲ್ ಹಾಗೂ ತಮಿಳು ಸಿನಿಮಾವೊಂದಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೆಜಿಎಫ್ -1ರ ಸೂಪರ್ ಸಕ್ಸಸ್ ಬೆನ್ನಲ್ಲೇ ರವಿ ಬಸ್ರೂರು ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್ ಬರ್ತಿದೆ.
ಇದನ್ನೂ ಓದಿ : ಮಲಯಾಲಂ ‘ಮಡ್ಡಿ’ಗೆ ರವಿ ಬಸ್ರೂರು ಮ್ಯೂಸಿಕ್ !
ಇದನ್ನೂ ಓದಿ : ‘ಮೊಬೈಲ್ ಕೈಗ್ ಸಿಕ್ಕಿ ಮಕ್ಳ್ ಕೆಟ್ಟೊ’ : ಸಂಗೀತ ಮಾಂತ್ರಿಕ ರವಿ ಬಸ್ರೂರು ಹೊಸ ಸಾಂಗ್ ಹೇಗಿದೆ ಗೊತ್ತಾ ?
( Ravi Basrur has composed the music for Bollywood actor Salman Khan’s Antim movie )