China Lockdown : ಚೀನಾಕ್ಕೆ ಕೊರೊನಾ ಶಾಕ್‌ : ಮನೆಯಿಂದ ಹೊರಬಂದ್ರೆ ಕ್ರಿಮಿನಲ್‌ ಕೇಸ್‌

ಬೀಜಿಂಗ್‌ : ಕೊರೊನಾ ವೈರಸ್‌ ಸೋಂಕು ಇದೀಗ ಚೀನಾದಲ್ಲಿ ಆರ್ಭಟಿಸೋದಕ್ಕೆ ಶುರು ಮಾಡಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಏರಿಕೆ ಯಾದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ಕಠಿಣ ರೂಲ್ಸ್‌ ಹೇರಲಾಗಿದೆ. ಲಾಕ್‌ಡೌನ್‌ ಜಾರಿಯಾದ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬಂದ್ರೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಸರಕಾರ ಎಚ್ಚರಿಕೆಯನ್ನು ನೀಡಿದೆ.

china
ಚೀನಾ

ಕೊರೊನಾ ಏಕಾಏಕಿ ಏರಿಕೆಯಾಗುತ್ತಿರೋದು ಚೀನಾ ಸರಕಾರಕ್ಕೆ ಆತಂಕ ಮೂಡಿಸಿದೆ. ಕಳೆದ ಬಾರಿ ಹುಬೆ ಪ್ರಾಂತ್ಯವನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಇದೀಗ ಚೀನಾದ ಇನ್ನರ್‌ ಮಂಗೋಲಿ ಪ್ರದೇಶದಲ್ಲಿರುವ ಎಜಿನ್‌ ಕೌಂಟಿ ಹೊಸ ಕೋವಿಡ್‌ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಗೊಂಡಿದೆ. ಚೀನಾದಲ್ಲಿನ 11 ಪ್ರಾಂತ್ಯಗಳಲ್ಲಿ ಹೊಸದಾಗಿ ಕೊರೊನಾ ವೈರಸ್‌ ಸೋಂಕು ಹಬ್ಬಿದೆ. ಅದ್ರಲ್ಲೂ ಅತೀ ಹೆಚ್ಚು ಪ್ರಕರಣ ದಾಖಲಾಗಿರುವ ಎಜಿನ್‌ ಕೌಂಟಿ ಪ್ರದೇಶದಲ್ಲಿ ಸಂಪೂರ್ಣ ವಾಗಿ ಲಾಕ್‌ಡೌನ್‌ ಹೇರಿಕೆ ಮಾಡಲಾಗಿದೆ.

china covid cases outbreak schools closed flight ban

ಮನೆಯಿಂದ ಹೊರಬಂದ್ರೆ ಕ್ರಿಮಿನಲ್‌ ಕೇಸ್‌ ದಾಖಲು ಮಾಡುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ವಿದೇಶಿ ಪ್ರವಾಸಿಗರಿಂದಾಗಿ ಚೀನಾದಲ್ಲಿ ಡೆಲ್ಟಾ ರೂಪಾಂತರಿ ಸೋಂಕು ಉಲ್ಬಣಿಸುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಸಾರ್ವಜನಿಕರಿಗೆ ಸೋಂಕು ಹರಡುವಿಕೆ ಯಾಗದಂತೆ ಎಚ್ಚರಿಕೆಯನ್ನು ವಹಿಸುವ ನಿಟ್ಟಿನಲ್ಲಿ ಈಗಾಗಲೇ ಬಸ್‌, ಟ್ಯಾಕ್ಸಿ ಸೇವೆಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ.

ಚೀನಾ ಸರಕಾರ ಈಗಾಗಲೇ ದೇಶದಲ್ಲಿರುವ ಜನರಿಗೆ ಕೊರೊನಾ ಲಸಿಕೆಯನ್ನು ನೀಡುವ ಕಾರ್ಯವನ್ನು ಮಾಡಿದೆ. ಇದೀಗ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಈ ನಡುವಲ್ಲೇ ಕೊರೊನಾ ಆರ್ಭಟ ಶುರುವಾಗಿರೋದು ಆತಂಕವನ್ನು ಮೂಡಿಸಿದೆ. ಈಗಾಗಲೇ ಚೀನಾದಲ್ಲಿ ಲಾಕ್‌ಡೌನ್‌ ಹೇರಿಕೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗಿದೆ.

ಇದನ್ನೂ ಓದಿ : ಚೀನಾವನ್ನು ಕಾಡುತ್ತಿದೆ ಮರೆವಿನ ಕಾಯಿಲೆ : 5 ವರ್ಷದಲ್ಲಿ ನಾಪತ್ತೆಯಾಗಿದ್ದಾರೆ 500 ಮಂದಿ !

ಇದನ್ನೂ ಓದಿ : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್‌, ವಿಮಾನ ಹಾರಾಟ ಸ್ಥಗಿತ

(Corona Shock to China: Outlaw Criminal Case)

Comments are closed.