ಭಾನುವಾರ, ಜೂನ್ 15, 2025
HomeCinemaಲಕ್ಷ-ಕೋಟಿಗೆ ಬಿಕರಿಯಾಯ್ತು ಸಲ್ಮಾನ್ ಟವೆಲ್, ಮಾಧುರಿ ಲಂಗ: ಇದು ಅಭಿಮಾನದ ದುನಿಯಾ

ಲಕ್ಷ-ಕೋಟಿಗೆ ಬಿಕರಿಯಾಯ್ತು ಸಲ್ಮಾನ್ ಟವೆಲ್, ಮಾಧುರಿ ಲಂಗ: ಇದು ಅಭಿಮಾನದ ದುನಿಯಾ

- Advertisement -

ನಟ-ನಟಿಯರ ಬಗ್ಗೆ ಅಭಿಮಾನ ತೋರೋ ಜನರು ಅವರು ಬಳಸಿದ ವಸ್ತುಗಳನ್ನು ಖರೀದಿಸೋದಿಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಹೀಗಾಗೇ ಸಲ್ಮಾನ್ ಹಾಡಿನಲ್ಲಿ ಬಳಸಿದ ಟವೆಲ್ ಲಕ್ಷಕ್ಕೆ ಸೇಲಾದ್ರೇ, ಮಾಧುರಿ ಹಾಡೊಂದರಲ್ಲಿ ಬಳಸಿದ ಲಂಗಕ್ಕೆ ಕೋಟಿ ಬೆಲೆ ಕಟ್ಟಲಾಗಿದೆ.

ಸಲ್ಮಾನ್, ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕಾ ಚೋಫ್ರಾ ನಟನೆಯ ಮುಝ್ ಸೇ ಶಾದಿ ಕರೋಗಿ ಸಿನಿಮಾದಲ್ಲಿ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಜೀನೇ ಕೇ ಹೇ ಚಾರ್ ದಿನ್ ಹಾಡಿಗಾಗಿ ಟವೆಲ್ ವೊಂದನ್ನು ಬಳಸಿ ನೃತ್ಯ ಮಾಡಿದ್ದರು.

ಈ ಹಾಡು ಹಾಗೂ ನೃತ್ಯ ಸಖತ್ ಫೇಮಸ್ ಆಗಿತ್ತು.   ಈ ಹಾಡಿನಲ್ಲಿ ಡ್ಯಾನ್ಸ್ ಮಾಡೋಕೆ ಬಳಸಿದ ಟವೆಲ್ ಹರಾಜಿನಲ್ಲಿ ಬರೋಬ್ಬರಿ 1.42 ಲಕ್ಷ ರೂಪಾಯಿಗೆ ಹರಾಜಾಗಿದ್ದು, ಸಲ್ಮಾನ್ ಖಾನ್ ಅಭಿಮಾನಿಯೊಬ್ಬರು ಈ ಟವೆಲ್ ಖರೀದಿಸಿದ್ದಾರೆ.

ಅಮೀರ್ ಖಾನ್ ಗೆ ಖ್ಯಾತಿ ತಂದುಕೊಟ್ಟ ಲಗಾನ್ ಸಿನಿಮಾದಲ್ಲಿ ಅಮೀರ್ ಖಾನ್ ಬಳಸಿದ ಬ್ಯಾಟ್ ಗೂ ಸಖತ್ ಬೇಡಿಕೆ ಬಂದಿದ್ದು, ಈ ಬ್ಯಾಟ್ ಹರಾಜಿನಲ್ಲಿ 1.56 ಲಕ್ಷ ರೂಪಾಯಿ ಮಾರಾಟವಾಗಿದೆ.

ಇನ್ನು ಬಾಲಿವುಡ್ ನ ಎವರ್ ಗ್ರೀನ್ ಚೆಲುವೆ ಮಾಧುರಿ ದೀಕ್ಷಿತ್ ದೇವ ದಾಸ್ ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ. ಈ ಸಿನಿಮಾದ ಮಾಧುರಿ ಧರಿಸಿದ ಹೆವಿ ಎಂಬ್ರಾಯ್ಡರಿ ಲಂಗಾಕ್ಕೆ 3 ಕೋಟಿ ಬೆಲೆ ಬಂದಿದ್ದು, ಮಾಧುರಿ ಅಭಿಮಾನಿಯೊಬ್ಬರು ಕೇವಲ ಅಭಿಮಾನಕ್ಕೆ 3 ಕೋಟಿ ಪಾವತಿಸಿ ಖರೀದಿಸಿದ್ದಾರೆ.

ನಟ-ನಟಿಯರು ಹೀಗೆ ತಾವು ಬಳಸಿದ ವಸ್ತುವನ್ನು ಹರಾಜಾಕೋದು ಇದೇ ಮೊದಲಲ್ಲ. ಇತ್ತೀಚಿಗಷ್ಟೇ ನಟಿ ಅನುಷ್ಕಾ ಶರ್ಮಾ ತಾವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಧರಿಸಿದ್ದ ಡ್ರೆಸ್ ಗಳನ್ನು ಹರಾಜಾಕಿದ್ದು, ದೀಪಿಕಾ ವಿವಿಧ ಗಣ್ಯರ ನಿಧನದ ಅವರ ನಿವಾಸಕ್ಕೆ ಭೇಟಿ ನೀಡುವ ವೇಳೆ ಧರಿಸಿದ ಬಟ್ಟೆ ಹರಾಜಿಗೆ ಮುಂದಾಗಿ  ಟೀಕೆಗೆ ಗುರಿಯಾಗಿದ್ದರು.

Salman khan,Amer khan and madhuri dixith used cloths and bat sold in sale.

RELATED ARTICLES

Most Popular