ಮಂಗಳವಾರ, ಜೂನ್ 17, 2025
HomeCinemaಬಹುದಿನಗಳ ಬಳಿಕ ಮೌನಮುರಿದ ಶಿಲ್ಪಾ ಶೆಟ್ಟಿ: ವಿಡಿಯೋದಲ್ಲಿ ಕುಂದ್ರಾ ಪತ್ನಿ ಹೇಳಿದ್ದೇನು ಗೊತ್ತಾ?!

ಬಹುದಿನಗಳ ಬಳಿಕ ಮೌನಮುರಿದ ಶಿಲ್ಪಾ ಶೆಟ್ಟಿ: ವಿಡಿಯೋದಲ್ಲಿ ಕುಂದ್ರಾ ಪತ್ನಿ ಹೇಳಿದ್ದೇನು ಗೊತ್ತಾ?!

- Advertisement -

ಅಶ್ಲೀಲಚಿತ್ರಗಳ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇಲೆ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿ ಒಂದು ತಿಂಗಳು ಸಮೀಪಿಸುತ್ತಿದೆ. ಈ ಮಧ್ಯೆ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ.

Shilpa Shetty3 1

ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದನ್ನು ಹೊರತುಪಡಿಸಿದರೇ ಬಹುತೇಕ ಮೌನವನ್ನು ಕಾಯ್ದುಕೊಂಡಿದ್ದರು. ಆದರೆ ಈಗ ವಿಡಿಯೋವೊಂದರಲ್ಲಿ ಶಿಲ್ಪಾ ತಮ್ಮ ಭಾವನೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಇದ್ಯಾವುದು ರಾಜ್ ಕುಂದ್ರಾ ವಿಚಾರಕ್ಕೆ ಸಂಬಂಧಿಸಿದಲ್ಲ.

Shilpa1

ಕೋವಿಡ್ 19 ನಿಧಿ ಸಂಗ್ರಹ ಅಭಿಯಾನಕ್ಕಾಗಿ ಕೈಜೋಡಿಸಿರುವ ಶಿಲ್ಪಾ ಶೆಟ್ಟಿ ಈ ಅಭಿಯಾನ ಆರಂಭಿಸಿರುವ ವಿ ಫಾರ್ ಇಂಡಿಯಾಕ್ಕಾಗಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾನಸಿಕ, ದೈಹಿಕ ಆರೋಗ್ಯ, ಪ್ರಾಣಾಯಾಮ, ಯೋಗ ಹಾಗೂ ವಾಕ್ಸಿನ್ ವಿಚಾರದ ಬಗ್ಗೆ ಶಿಲ್ಪಾ ಶೆಟ್ಟಿ ಮಾತನಾಡಿದ್ದಾರೆ.

Shilpa Shetty Hot Sexy Bikni Photos 650x365 1

ನಾವಿಂದು ಬಹಳ ಕಷ್ಟದ ಸಮಯದಲ್ಲಿ ಬದುಕುತ್ತಿದ್ದೇವೆ. ನಾವು ಹೇಗೆ ಉಸಿರಾಡುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಒಳ್ಳೆಯ ಉಸಿರಾಟದಿಂದ ನಾವು ಆರೋಗ್ಯ ಗಳಿಸಿಕೊಳ್ಳಬಹುದು. ಅದಕ್ಕಾಗಿ ಎಲ್ಲರೂ ಯೋಗ ಹಾಗೂ ಪ್ರಾಣಾಯಾಮ ಅಳವಡಿಸಿಕೊಳ್ಳಿ. ನಿಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳನ್ನು ಹೊರಹಾಕಲು ನೀವು ಉಚ್ಛಾಸ-ನಿಚ್ವಾಸದ ಪ್ರಾಣಾಯಾಮ ಅಳವಡಿಸಿಕೊಳ್ಳಿ ಎಂದು ಶಿಲ್ಪಾ ಶೆಟ್ಟಿ ಸಲಹೆ ನೀಡಿದ್ದಾರೆ.

Shilpa Shetty 3

ಅಲ್ಲದೇ ಕೊರೋನಾ ವಾಕ್ಸಿನ್ ನೀವು ಹಾಕಿಸಿಕೊಳ್ಳಿ ಮತ್ತು ನಿಮ್ಮ ಕುಟುಂಬದವರಿಗೂ ಹಾಕಿಸಿ ಎಂದು ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದಾರೆ. ಸ್ವತಃ ಯೋಗಪಟುವಾಗಿರುವ ಶಿಲ್ಪಾ ಶೆಟ್ಟಿ ಹಲವು ಕಾರ್ಯಕ್ರಗಳಲ್ಲಿ ಭಾಗಿಯಾಗಿದ್ದು, ಫಿಟನೆಸ್ ಸಿಡಿಯನ್ನು ತಯಾರಿಸಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದು, ಅಶ್ಲೀಲ್ ಸಿಡಿ ತಯಾರಿಸಿ ಅದನ್ನು ಆಪ್ ಗಳ ಮೂಲಕ ಪ್ರಸಾರ ಮಾಡಿಸಿದ ಆರೋಪ ರಾಜ್ ಕುಂದ್ರಾ ಮೇಲಿದ್ದು, ಇದಲ್ಲದೇ ಹಲವು ನಟಿಯರು ತಮಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕುಂದ್ರಾ ವಿರುದ್ಧ ಆರೋಪಿಸಿದ್ದಾರೆ.

ಇದನ್ನೂ ಓದಿ : ಬಗೆದಷ್ಟು ಬಯಲಾಗ್ತಿದೆ ಕುಂದ್ರಾ ರಹಸ್ಯ : 121 ಅಶ್ಲೀಲ ವೀಡಿಯೊ, 1.2 ಮಿ. ಡಾಲರ್‌ಗೆ ಮಾರಾಟಕ್ಕೆ ಪ್ಲ್ಯಾನ್‌..!

ಇದನ್ನೂ ಓದಿ : ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ರು…! ಶಿಲ್ಪಾ ಪತಿ ರಾಜ್ ವಿರುದ್ಧ ಗಂಭೀರ ಆರೋಪ…!!

RELATED ARTICLES

Most Popular