ಸೋಮವಾರ, ಏಪ್ರಿಲ್ 28, 2025
HomeCinemaBox Office : 100 ಕೋಟಿ ಮೂಲಕ ದಾಖಲೆ ಬರೆದ ಗಂಗೂಬಾಯಿ ಕಾಠಿಯಾವಾಡಿ

Box Office : 100 ಕೋಟಿ ಮೂಲಕ ದಾಖಲೆ ಬರೆದ ಗಂಗೂಬಾಯಿ ಕಾಠಿಯಾವಾಡಿ

- Advertisement -

ಸಾಕಷ್ಟು ವಿವಾದಗಳ ಬಳಿಕವೂ ಯಶಸ್ವಿಯಾಗಿ ತೆರೆಕಂಡ‌ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಬಾಕ್ಸಾಫಿಸ್ ನಲ್ಲೂ (Box Office) ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿದ್ದು, ಸಿನಿಮಾ ರಿಲೀಸ್ ಆದ ಎರಡನೇ ವಾರಕ್ಕೆ ಗಂಗೂಬಾಯಿ ಗಳಿಕೆ 100 ಕೋಟಿ ಮೀರಿದೆ. ಸದ್ಯ ಗಂಗೂಬಾಯಿ ಕಾಠಿಯಾವಾಡಿ ಗಳಿಕೆ ಉತ್ತಮವಾಗಿದ್ದು ಸಿನಿಮಾ ಕೂಡಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 11 ರಂದು ರಾಧೇ ಶ್ಯಾಮ್ ರಿಲೀಸ್ ಆಗಲಿದ್ದು ಆ ಬಳಿಕ ಗಂಗೂಬಾಯಿ ಪ್ರದರ್ಶನದ ಮೇಲೆ ಪರಿಣಾಮ ಬೀರೋ ಸಾಧ್ಯತೆಗಳಿದ್ದು, ಇದಾದ ಬಳಿಕ ಗಂಗೂಬಾಯಿ ಒಟ್ಟಾರೆ ಗಳಿಕೆ ಸ್ಪಷ್ಟವಾಗಲಿದೆ.

ಗಂಗೂಬಾಯಿ ಕಾಠಿಯಾವಾಡಿ ಚಿತ್ರಪ್ರದರ್ಶನ ಆರಂಭವಾದಾಗಿನಿಂದಲೂ ಉತ್ತಮ ಗಳಿಕೆಯನ್ನೇ ದಾಖಲಿಸಿದ್ದು, ಮೊದಲ ಮೂರು ದಿನದಲ್ಲೇ ಸಿನಿಮಾ 10 ಕೋಟಿ ಗಡಿ ದಾಟಿದೆ. ಒಟ್ಟಾರೆ ಭಾರತದ ಬಾಕ್ಸಾಫೀಸ್ ನಲ್ಲಿ ಸಿನಿಮಾ 92.22 ಕೋಟಿ ರೂಪಾಯಿ ಹಣ ಗಳಿಕೆ‌ಮಾಡಿದ್ದು, ಒಟ್ಟಾರೆ ಗಳಿಕೆ 100 ಕೋಟಿ ಗಡಿದಾಟಿದೆ‌ ಎನ್ನಲಾಗುತ್ತಿದೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಆರಂಭದಿಂದಲೂ ವಿವಾದಕ್ಕೆ ಗುರಿಯಾಗಿತ್ತು. ನನ್ನ ತಾಯಿ ಸಮಾಜಸೇವಕಿಯಾಗಿದ್ದು, ನನ್ನ ತಾಯಿಯನ್ನು ವೇಶ್ಯೆಯಂತೆ ಚಿತ್ರಿಸಲಾಗಿದೆ ಎಂದು ಗಂಗೂಬಾಯಿ ಕಾಠಿಯಾವಾಡಿ ಪುತ್ರ ಕೋರ್ಟ್ ಮೊರೆ ಹೋಗಿದ್ದರು.

ಇದಲ್ಲದೇ ಮಹಾರಾಷ್ಟ್ರದ ಕಾಂಗ್ರೆಸ್ ಸಂಸದರು ಕೂಡಾ ಗಂಗೂಬಾಯಿ ರಿಲೀಸ್ ಮೇಲೆ ನಿರ್ಬಂಧ ಹೇರುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸಿನಿಮಾ ರಿಲೀಸ್ ಗೆ ಎರಡು ದಿನಗಳಿರುವಾಗಲೂ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಟೈಟಲ್ ಹಾಗೂ ಚಿತ್ರಕತೆ ಸುಪ್ರೀಂ ಕೋರ್ಟ್ ಅಂಗಳದಲ್ಲಿತ್ತು. ಮಾತ್ರವಲ್ಲ ಸಿನಿಮಾದ ಟೈಟಲ್ ಬದಲಾಯಿಸುವುದು ಸೂಕ್ತ ಎಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಈ ಮಧ್ಯೆಯೂ ಸಿನಿಮಾ ರಿಲೀಸ್ ಬಳಿಕ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಬಾಲಿವುಡ್ ನಟ-ನಟಿಯರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ತಮ್ಮ ನಟನೆಯ ಉತ್ತುಂಗವನ್ನು ತೋರಿದ್ದು, ಈ ಸಿನಿಮಾದ ನಟನೆಯಿಂದ ಆಲಿಯಾಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆಯಂತೆ. ಅಷ್ಟೇ ಅಲ್ಲ ಗಂಗೂಬಾಯಿ ಕಾಠಿಯಾವಾಡಿ ಬಳಿಕ ಆಲಿಯಾ ಭಟ್ ಹಾಲಿವುಡ್ ಗೆ ಹಾರಿದ್ದು, ಹಾರ್ಟ್ ಆಫ್ ಸ್ಟೋನ್ ಪತ್ತೆದಾರಿ ಸಸ್ಪೆನ್ಸ್ ಸಿನಿಮಾ ಮೂಲಕ ಹಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : KGF Chapter 2 : ಮಹಿಳೆಯರಿಗೆ ಬಿಗ್‌ ಸಪ್ರೈಸ್ ಕೊಟ್ಟ ಕೆಜಿಎಫ್‌‌

ಇದನ್ನೂ ಓದಿ : ಸಂಭಾವನೆ ತಾರತಮ್ಯದ ವಿರುದ್ಧ ಸ್ಯಾಂಡಲ್ ವುಡ್ ನಟಿಮಣಿಯರ ಸಮರ

( Box Office Gangubai Kathiawadi The Batman Radhe Shyam storm)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular