Coca Cola PepsiCo : ರಷ್ಯಾದಲ್ಲಿ ಉತ್ಪಾದನೆ, ಮಾರಾಟ ನಿಲ್ಲಿಸಿದ‌ ಕೋಕೋ ಕೋಲಾ, ಪೆಪ್ಸಿಕೋ

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ವಿಶ್ವದ ಪ್ರಬಲ ರಾಷ್ಟ್ರಗಳಾದ ಅಮೇರಿಕಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ವ್ಯಾಪಾರ ವಹಿವಾಟು ಕಡಿದುಕೊಂಡಿದ್ದು, ರಷ್ಯಾದಿಂದ ಆಮದಿಗೆ ನಿರ್ಬಂಧ ಹೇರಲು ಆರಂಭಿಸಿದೆ. ಈ ಮಧ್ಯೆ ರಷ್ಯಾಕ್ಕೆ ಇನ್ನೊಂದು ಶಾಕ್ ಎದುರಾಗಿದ್ದು, ಜಾಗತಿಕ ಬ್ರ್ಯಾಂಡ್ ಹಾಗೂ ಅಮೇರಿಕಾದ ಕಾರ್ಪೋರೇಟ್ ಚಿಹ್ನೆಗಳಾದ ಪೆಪ್ಸಿಕೋ, ಕೋಕೋಕೋಲಾ ( Coca Cola PepsiCo) ಮ್ಯಾಕ್ ಡಿ, ಸ್ಟಾರ್ ಬಕ್ಸ್ ಕೂಡ ರಷ್ಯಾದಿಂದ ಹೊರಗೆಬರುವ ನಿರ್ಣಯ ಕೈಗೊಂಡಿದ್ದಾರೆ.

ಪೆಪ್ಸಿಕೋ, ಕೋಕೋಕೋಲಾ ( Coca Cola PepsiCo) ಹಾಗೂ ಮ್ಯಾಕ್ ಡೀ ಕಂಪನಿಗಳು ರಷ್ಯಾದಲ್ಲಿ ತಮ್ಮ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ನಮ್ಮ ಮೌಲ್ಯಗಳನ್ನು ಅಂದ್ರೇ ಉಕ್ರೇನ್ ನಲ್ಲಿ ರಷ್ಯಾ ನಡೆಸುತ್ತಿರುವ ಮಾನವ ಹಿಂಸೆಯನ್ನು ನಮ್ಮಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಾಗುತ್ತಿಲ್ಲ ಎಂದು ಮೆಕ್ ಡಿ ಕಂಪನಿಯ ಅಧ್ಯಕ್ಷ ಹಾಗೂ ಸಿಇಓ ಕೆಂಪ್ ಸಿನ್ಸ್ಕಿ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

ಅಮೇರಿಕಾದ ಚಿಕಾಗೋ ಮೂಲದ ದೈತ್ಯ ಕಂಪನಿ ಮ್ಯಾಕ್ ಡೀ ಬರ್ಗರ್ ಉತ್ಪಾದನೆಯ ತನ್ನ ರಷ್ಯಾದ 850 ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದೆ. ಮಾತ್ರವಲ್ಲ ರಷ್ಯಾದಲ್ಲಿರುವ ತನ್ನ 62 ಸಾವಿರ ಉದ್ಯೋಗಿಗಳಿಗೆ ವೇತನ ಪಾವತಿಸಿದೆ. ಇದರ ಬೆನ್ನಲ್ಲೇ ಕಳೆದ ಶುಕ್ರವಾರ ಸ್ಟಾರ್ ಬಕ್ಸ್ ಕೂಡ ತನ್ನ ರಷ್ಯಾದ ಸ್ಟೋರ್ ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿದೆ. ಇದಲ್ಲದೇ ಕೋಕಾಕೋಲಾ ಕಂಪನಿಯು ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಇನ್ನು ಕೋಕಾ ಕೋಲಾದ ( Coca Cola PepsiCo) ಪಾಲುದಾರ ಸಂಸ್ಥೆಯಾಗಿರುವ ಕೋಕಾಕೋಲಾ ಹೆಲೆನಿಕ್ ಬ್ಲಾಟಿಂಗ್ ಸಂಸ್ಥೆಯೂ ರಷ್ಯಾದಲ್ಲಿ 10 ಬ್ಲಾಟಿಂಗ್ ಪ್ಲ್ಯಾಂಟ್ ಗಳನ್ನು ಹೊಂದಿದ್ದು, ಈ ಸಂಸ್ಥೆಯಲ್ಲಿ ಕೋಕ್ ಶೇಕಡಾ 21 ರಷ್ಟು ಪಾಲುದಾರಿಕೆ ಹೊಂದಿದೆ.

ಪೆಪ್ಸಿಕೋ ( Coca Cola PepsiCo) ಮತ್ತು ಜನರಲ್ ಎಲೆಕ್ಟ್ರಿಕಲ್ ಸಂಸ್ಥೆಗಳು ಕೂಡ ರಷ್ಯಾದಲ್ಲಿ ರುವ ತಮ್ಮ ವ್ಯವಹಾರ, ವ್ಯಾಪಾರ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ. ಪಾನಿಯ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಆದರೆ ಈ ಕಂಪನಿಗಳು ತಮ್ಮ ಇತರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ಮುಂದುವರೆಸುವುದಾಗಿ ಹೇಳಿದ್ದು, ಇದು ರಷ್ಯಾದ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರಿಗೂ ಸಮಾಧಾನ ತಂದಿದೆ. ಈಗಾಗಲೇ ಅಮೇರಿಕಾ ಕೂಡಾ ರಷ್ಯಾದ ಮೇಲೆ ನಿರ್ಬಂಧ ಹೇರಿದ್ದು, ತೈಲ ಉತ್ಪನ್ನ ಸೇರಿದಂತೆ ರಷ್ಯಾದಿಂದ ಯಾವುದೇ ಆಮದು ಅಥವಾ ರಫ್ತು ಇಲ್ಲ ಎಂದು ಅಮೇರಿಕಾ ಘೋಷಿಸಿದೆ.

ಇದನ್ನೂ ಓದಿ : Cooking Oil Price : ಕೈ ಸುಡುತ್ತಿದೆ ಅಡುಗೆ ಎಣ್ಣೆ, 200 ರೂಪಾಯಿ ಗಡಿದಾಟಿದ ಕುಕ್ಕಿಂಗ್ ಆಯಿಲ್

ಇದನ್ನೂ ಓದಿ : Gold Rate Today : ಬಂಗಾರ ಪ್ರಿಯರಿಗೆ ಶಾಕ್‌ ; 53,000 ರೂ. ಕ್ಕೇರಿದ ಚಿನ್ನದ ದರ

( Coca Cola PepsiCo suspend sales in Russia Ukraine Crisis )

Comments are closed.