KGF Chapter 2 : ಸ್ಯಾಂಡಲ್ವುಡ್ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸಾಫೀಸಿನಲ್ಲಿ ತನ್ನ ದಾಖಲೆಗಳನ್ನು ಮುಂದುವರಿಸುತ್ತಲೇ ಇದೆ. ಸಿನಿಮಾ ತೆರೆ ಕಂಡ 8 ದಿನಗಳಲ್ಲಿ ಪ್ರಶಾಂತ್ ನೀಲ್ ನಿರ್ದೇನದ ಕೆಜಿಎಫ್ ಆರ್ಆರ್ಆರ್ ಹಿಂದಿ ಸಂಗ್ರಹವನ್ನು ಮೀರಿಸುವ ಮೂಲಕ 2022ನೇ ಸಾಲಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿದೆ. ಬಾಲಿವುಡ್ ತಾರೆಯರಾದ ಸಂಜಯ್ ದತ್, ರವೀನಾ ಟಂಡನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡನೇ ವಾರಕ್ಕೆ ಕಾಲಿಡಲಿದ್ದು ಈ ವಾರದಲ್ಲಿಯೂ ಯಶ್ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಬೇಟೆ ಮುಂದುವರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾವು ಜಾಗತಿಕ ಬಾಕ್ಸಾಫೀಸಿನಲ್ಲಿ 750 ಕೋಟಿ ರೂಪಾಯಿಗಳನ್ನು ಗಳಿಸಿದೆ ಹಾಗೂ 800 ಕೋಟಿ ರೂಪಾಯಿಗಳನ್ನು ಸಂಪಾದಿಸುವತ್ತ ದಾಪುಗಾಲು ಹಾಕುತ್ತಿದೆ.
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಶುಕ್ರವಾರ ಅದರ ಹಿಂದಿ ಆವೃತ್ತಿಯ ಕಾರ್ಯಕ್ಷಮತೆಯನ್ನು ‘ರೆಕಾರ್ಡ್-ಸ್ಮಾಶಿಂಗ್’ ಎಂದು ಟ್ವೀಟ್ ಮಾಡಿದ್ದಾರೆ, ಕೆಜಿಎಫ್ 2 ಸಿನಿಮಾವು ಕೊರೊನಾ ಸಾಂಕ್ರಾಮಿಕದ ಬಳಿಕ ಕೇವಲ 8 ದಿನಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿದೆ. ಈ ಬ್ಲಾಕ್ ಬಸ್ಟರ್ ಸಿನಿಮಾವು ಗುರುವಾರ 53.95 ಕೋಟಿ, ಶುಕ್ರವಾರ 46.79 ಕೋಟಿ, ಶನಿವಾರ 42.50 ಕೋಟಿ, ಭಾನುವಾರ 42.50 ಕೋಟಿ. 25.57 ಕೋಟಿ, ಮಂಗಳವಾರ 19.14 ಕೋಟಿ, ಬುಧವಾರ 16.35 ಕೋಟಿ, ಗುರು 13.58 ಕೋಟಿ ಒಟ್ಟು: ₹ 268.63 ಕೋಟಿ ಸಂಪಾದಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾವು ನಿನ್ನೆ ತೆರೆ ಕಂಡಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗಿದ್ದು ತೆಲುಗು ಸಿನಿಮಾದ ಹೆಸರನ್ನೇ ಇಡಲಾಗಿದೆ. ತೆಲುಗು ಭಾಷೆಯಲ್ಲಿ ನಾಣಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಾಕ್ಸ್ ಆಫೀಸ್ ಇಂಡಿಯಾ ರಿಪೋರ್ಟ್ನ ಪ್ರಕಾರ, ಜೆರ್ಸಿ ಸಿನಿಮಾ ತೆರೆ ಕಂಡ ಮೊದಲ ದಿನವೇ ಕಡಿಮೆ ಕಲೆಕ್ಷನ್ ಮಾಡಿದೆ. ವಾರಾಂತ್ಯದಲ್ಲಾದರೂ ಈ ಸಿನಿಮಾಗೆ ಜನರ ಸಂಖ್ಯೆ ಹೆಚ್ಚಬಹುದು ಎಂದು ಚಿತ್ರತಂಡ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಕೆಜಿಎಫ್ 2 ಹವಾದ ಮುಂದೆ ಈ ಸಿನಿಮಾವು ಮೊದಲ ದಿನದ ಕಲೆಕ್ಷನ್ನಲ್ಲಿ ನೆಲ ಕಚ್ಚಿದೆ.
ಇದನ್ನು ಓದಿ : puneeth rajkumar :ಅಪ್ಪು ಧ್ವನಿಯಲ್ಲೇ ತೆರೆಗೆ ಬಂದ ‘ಜೇಮ್ಸ್’ ಸಿನಿಮಾ :ಮುಗಿಲುಮುಟ್ಟಿದ ಅಭಿಮಾನಿಗಳ ಸಂತಸ
ಇದನ್ನೂ ಓದಿ : Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್
Box Office Report: Yash’s KGF Chapter 2 continues its magic, Shahid Kapoor’s Jersey opens low