lemon prices hike : ಗಗನಕ್ಕೇರಿದೆ ನಿಂಬೆ ಹಣ್ಣುಗಳ ದರ : ಸಂತಸದಲ್ಲಿ ಬೆಳೆಗಾರ

ವಿಜಯಪುರ : lemon prices hike :ಇಂಧನ ದರ ಏರಿಕೆ, ವಿದ್ಯುತ್​ ದರ ಏರಿಕೆ, ದಿನ ಬಳಕೆ ವಸ್ತುಗಳ ದರ ಏರಿಕೆ ಹೀಗೆ ಒಂದೊಂದರದ್ದೇ ಬೆಲೆಗಳು ಏರಿಕೆಯಾಗುತ್ತಿರುವುದು ಜನ ಸಾಮಾನ್ಯನ ನಿದ್ದೆಗೆಡಿಸಿದೆ. ಈ ಎಲ್ಲದರ ಸಾಲಿಗೆ ನಿಂಬೆ ಹಣ್ಣುಗಳು ಕೂಡ ಸೇರಿವೆ. ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದಂತೆಯೇ ನಿಂಬೆ ಹಣ್ಣಿನ ದರವು ಗಗನಕ್ಕೇರುತ್ತಿದೆ. ದಿನದಿಂದ ದಿನಕ್ಕೆ ನಿಂಬೆ ಬೆಲೆಯು ಏರಿಕೆಯಾಗುತ್ತಿರುವುದರಿಂದ ನಿಂಬು ಬೆಳೆಗಾರರು ಹಾಗೂ ಮಾರಾಟಗಾರರ ಸಂತಸ ಮುಗಿಲುಮುಟ್ಟಿದೆ.


ವಿಜಯಪುರ ಜಿಲ್ಲೆಯ ವಿವಿಧ ಸಂತೆಗಳಲ್ಲಿ ದೊಡ್ಡ ಗಾತ್ರದ ಲಿಂಬೆಗಳು 20 ರೂಪಾಯಿಗಳಿಗೆ ನಾಲ್ಕರಂತೆ ಸಿಗುತ್ತಿದೆ. ಹಾಗೂ ಸಣ್ಣ ಗಾತ್ರದ ನಿಂಬೆಗಳು 20 ರೂಪಾಯಿಗಳಿಗೆ ಆರರಂತೆ ಮಾರಾಟವಾಗುತ್ತಿದೆ. ವಿಜಯಪುರದ ಎಪಿಎಂಸಿಗಳಲ್ಲಿ ಗುಣಮಟ್ಟದ ನಿಂಬೆ ಹಣ್ಣುಗಳ ಪೂರೈಕೆಯಲ್ಲಿ ಅಭಾವ ಉಂಟಾಗಿರುವುದೇ ಈ ರೀತಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.


ಈ ವಿಚಾರವಾಗಿ ಮಾತನಾಡಿದ ವಿಜಯಪುರದ ಎಪಿಎಂಸಿ ಮಾರುಕಟ್ಟೆ ವ್ಯವಸ್ಥಾಪಕ ರಮೇಶ ಗೌಡ, ಹವಾಮಾನ ವೈಪರಿತ್ಯದಿಂದಾಗಿ ನಿಂಬೆ ಹಣ್ಣಿನ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷ 1100 ನಿಂಬೆಗಳಿದ್ದ ಒಂದು ಚೀಲ 3 ರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಒಂದು ಚೀಲ ನಿಂಬು 7 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಸಖತ್​ ಖುಷಿಯಾಗಿದೆ ಎಂದು ಹೇಳಿದರು.
ಈ ಬಾರಿ ಹೆಚ್ಚು ನಿಂಬು ಹೂವುಗಳು ಬಿಡಲೇ ಇಲ್ಲ. ಒಂದು ಎಕರೆಯಲ್ಲಿ ಸರಾಸರಿ 10 ಟನ್​ ನಿಂಬೆಗಳಷ್ಟೇ ಬಂದಿವೆ. ಇವುಗಳಲ್ಲಿ ಗುಣಮಟ್ಟದ ನಿಂಬುಗಳ ಸಂಖ್ಯೆಯಲ್ಲಿ ಕೊರತೆಯಿದೆ ಎಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ಸಂತೋಷ ಸಪ್ಪಂಡಿ ಹೇಳಿದ್ದಾರೆ.

ಇದನ್ನು ಓದಿ : Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್

ಇದನ್ನೂ ಓದಿ : Shivamogga Airport ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿಮಾನ ನಿಲ್ದಾಣ 2023 ರಿಂದ ಆರಂಭ

lemon prices hike farmers happy vijayapura special story

Comments are closed.