ಭಾನುವಾರ, ಏಪ್ರಿಲ್ 27, 2025
HomeCinemaBoycott Liger Vijay Deverakonda : ಲೈಗರ್ ಗೂ ಬಾಯ್ಕಾಟ್ ಬಿಸಿ : ಅಮೀರ್ ಖಾನ್...

Boycott Liger Vijay Deverakonda : ಲೈಗರ್ ಗೂ ಬಾಯ್ಕಾಟ್ ಬಿಸಿ : ಅಮೀರ್ ಖಾನ್ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ ವಿಜಯ್ ದೇವರಕೊಂಡ

- Advertisement -

Boycott Liger Vijay Deverakonda : ಟಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಸಿನಿಮಾಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಕಳೆದ ಎರಡು ವಾರದಿಂದ ಚಿತ್ರರಂಗದಲ್ಲಿ ಬರಿ ಬಾಯ್ಕಾಟ್ ನದ್ದೇ ಸದ್ದು. ಅಮೀರ್ ಖಾನ್ ಸಿನಿಮಾಕ್ಕೆ ಬಾಯ್ಕಾಟ್ ಬಿಸಿ ತಟ್ಟಿದ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಗೂ ಬಾಯ್ಕಾಟ್ ಭಯ ಎದುರಾಗಿದೆ. ಇದೇ ಮೊದಲ ಬಾರಿಗೆ ಸೌತ್ ಸಿನಿಮಾವೊಂದಕ್ಕೆ ಬಾಯ್ ಕಾಟ್ ಭೂತ ಕಾಡಲಾರಂಭಿಸಿದೆ.

ಬಾಕ್ಸಿಂಗ್ ಕತೆಯನ್ನು ಆಧರಿಸಿದ ಸಿನಿಮಾ ಲೈಗರ್ ತನ್ನ ಟ್ರೇಲರ್, ಪೋಸ್ಟರ್ ಗಳಿಂದಲೇ ಸದ್ದು ಮಾಡುತ್ತಿದೆ. ಇದರ‌ ಜೊತೆಗೆ ಸಿನಿಮಾದ ಪ್ರಮೋಶನ್ ಗೂ ನಟ ವಿಜಯ್ ದೇವರಕೊಂಡ ಸಖತ್ ಸರ್ಕಸ್ ನಡೆಸಿದ್ದಾರೆ. ಈಗಾಗಲೇ ಸಿನಿಮಾದ ಗೆಲುವಿಗಾಗಿ ವಿಜಯ್ ದೇವರುಕೊಂಡ ನಿವಾಸದಲ್ಲಿ ವಿಶೇಷ ಪೂಜೆ ಕೂಡ ನಡೆದಿದೆ. ಈ ಮಧ್ಯೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಲೈಗರ್ ಟ್ರೆಂಡ್ ಆರಂಭವಾಗಿದ್ದು ಅಭಿಮಾನಿಗಳು ಕಂಗೆಟ್ಟಿದ್ದಾರೆ.

ಬಾಲಿವುಡ್ ನ ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಹಲವರು ಬಾಯ್ಕಾಟ್ ಮಾಡಿದ್ದರು. ಅಲ್ಲದೇ ದೇಶ ವಿರೋಧಿ ಅಮೀರ್ ಖಾನ್ ಸಿನಿಮಾ ವೀಕ್ಷಿಸದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಕೂಡ ನಡೆದಿತ್ತು. ಹೀಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೀರಿಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣಲಿಲ್ಲ. ಈ ಮಧ್ಯೆ ಲೈಗರ್ ಸಿನಿಮಾದ ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ ಲಾಲ್ ಸಿಂಗ್ ಛಡ್ಡಾವನ್ನು ಬೆಂಬಲಿಸಿ ಮಾತನಾಡಿದ್ದು ಈಗ ಬಾಯ್ಕಾಟ್ ಲೈಗರ್ ಅಭಿಯಾನಕ್ಕೆ ಕಾರಣವಾಗಿದೆ.

ಅಮೀರ್ ಖಾನ್ ಸಿನಿಮಾ ಬಾಯ್ಕಾಟ್ ಬಗ್ಗೆ ಮಾತನಾಡಿದ್ದ ವಿಜಯ್ ದೇವರಕೊಂಡ, ನನ್ನ ಪ್ರಕಾರ ಸಿನಿಮಾದಲ್ಲಿ ಕಲಾವಿದರು, ನಿರ್ದೇಶಕರನ್ನು ಹೊರತುಪಡಿಸಿ ಸೆಟ್ ಗಳಲ್ಲಿ ದುಡಿಯುವ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ನಿತ್ಯ 200-300 ಜನ ಸೆಟ್ ನಲ್ಲಿ ದುಡಿಯುತ್ತಾರೆ. ಲಾಲ್ ಸಿಂಗ್ ಚಡ್ಡಾದಂತಹ ಸಿನಿಮಾ 2000-3000 ಕುಟುಂಬದೊಂದಿಗೆ ಸಂಬಂಧ ಹೊಂದಿದೆ. ಸಿನಿಮಾ ಓಡದೇ ಇರೋದು ಆ ಕುಟುಂಬದ ದುಡಿಯುವ ಕೈಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದಿದ್ದರು.

ಇದೇ ವಿಚಾರಕ್ಕೆ ಈಗ ಲೈಗರ್ ಬಾಯ್ಕಾಟ್ ಅಭಿಯಾನ ಜೋರಾಗಿದೆ. ಮಾತ್ರವಲ್ಲದೇ ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು, ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಲೈಗರ್ ನಿಷೇಧಿಸುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿನಿಮಾಗಾಗಿ ಸಾಕಷ್ಟು ಪರದದಾಡಿದ್ದ ವಿಜಯ್ ದೇವರಕೊಂಡ ರಿಲೀಸ್ ಹೊತ್ತಿನಲ್ಲಿ ಬೇಡವಾಗಿದ್ದ ವಿಚಾರ ಮಾತನಾಡಿ ಸಿನಿಮಾವನ್ನು ತಾವೇ ಸಂಕಷ್ಟಕ್ಕೆ ನೂಕಿದ್ದಾರೆ.

ಇದನ್ನೂ ಓದಿ : Ravichandran son Manoranjan wedding : ಕ್ರೇಜಿಸ್ಟಾರ್ ಮನೆಯಲ್ಲಿ ಮಂಗಳವಾದ್ಯ : ಮನೋರಂಜನ್ ಬದುಕಿನಲ್ಲಿ “ಸಂಗೀತ” ಸುಧೆ

ಇದನ್ನೂ ಓದಿ : Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್‌ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಕುಟ್ಟಿಮಾ

Boycott Liger Vijay Deverakonda who got in trouble for supporting Aamir Khan Laal Sing Chaddha

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular