ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಒರಟಾಗಿ ವರ್ತಿಸೋದು ಇದೇ ಮೊದಲಲ್ಲ. ಈಗ ಈ ಸಾಲಿಗೆ ಸ್ಯಾಂಡಲ್ ವುಡ್ ನವನಟ ಧನ್ವೀರ್ (Actor Dhanveer) ಹೊಸ ಸೇರ್ಪಡೆ. ತಮ್ಮ ಎರಡನೇ ಬೈ ಟೂ ಲವ್ (By Two Love) ಸಿನಿಮಾ ರಿಲೀಸ್ ವೇಳೆಯೇ ನಟ ಧನ್ವೀರ್ ಅಭಿಮಾನಿ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದಾರೆ. ಫೆ.17 ರ ತಡರಾತ್ರಿ ನಟ ಧನ್ವೀರ್ ತಮ್ಮ ಬೌನ್ಸರ್ಸ್ ಗಳ ಜೊತೆ ಸೇರಿ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಹೊಡೆದು ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾತ್ರವಲ್ಲ ಈ ಸಂಬಂಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.
ಫೆ.17 ರಂದು ನಟ ಧನ್ವೀರ್ , ಎಸ್.ಸಿ.ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಚಂದ್ರಶೇಖರ್ ಎಂಬಾತ ತನ್ನ ಸ್ನೇಹಿತ ಕಿರಣ ಜೊತೆ ರಸ್ತೆಯಲ್ಲಿ ಬರುತ್ತಿದ್ದು ಧನ್ವೀರ್ ರನ್ನು ಕಂಡು ಪೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಜೊತೆಗಿದ್ದ ಕಿರಣ್ ಪೋಟೋ ತೆಗೆಸಿಕೊಳ್ಳುತ್ತ ನಿಂತರೇ ಬಸ್ ಲೇಟಾಗುತ್ತದೆ ಎಂದು ಅವಸರಿಸಿದ್ದಾನಂತೆ. ಇದಕ್ಕೆ ಕೆರಳಿದ ನಟ ಧನ್ವೀರ್, ನೀವೆಲ್ಲ ಕನ್ನಡವನ್ನು ಬೆಳೆಸುವುದಿಲ್ಲ ಎಂದು ಆರೋಪಿಸಿ ಹಲ್ಲೆನಡೆಸಿದ್ದಾರಂತೆ.ಮಾತ್ರವಲ್ಲ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಜೊತೆಗೆ ಧನ್ವೀರ್ ಬೌನ್ಸರ್ ಕೂಡ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರಂತೆ.
ಹಲ್ಲೆಯಿಂದ ಗಾಯಗೊಂಡ ಚಂದ್ರಶೇಖರ್, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಬಳಿಕ ಉಪ್ಪಾರಪೇಟೆ ಪೋಲೀಸರಿಗೆ ದೂರು ನೀಡಿದ್ದಾನೆ. ಚಂದ್ರಶೇಖರ್ ಗೆ ಹಲ್ಲೆಯಿಂದ ಕೈ, ಬೆನ್ನು, ಮುಖ ಹಾಗೂ ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ. ಆದರೆ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರೋ ನಟ ಧನ್ವೀರ್ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾನು ಸಿನಿಮಾ ಥಿಯೇಟರ್ ಬಳಿ ನಿಂತಿದ್ದಾಗ ಚಂದ್ರಶೇಖರ್ ಎಂಬ ವ್ಯಕ್ತಿ ಬಂದು ಅಸಭ್ಯವಾಗಿ ಮಾತನಾಡಿ ಅಶ್ಲೀಲವಾಗಿ ನಿಂದಿಸಿದ. ನಾನು ಆತನನ್ನು ಸಮಾಧಾನಿಸುವ ಪ್ರಯತ್ನ ಮಾಡಿದೆ.
ಹೀಗೆಲ್ಲ ನಿಂದಿಸುವುದು ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದೆ. ಆದರೆ ಈ ರೀತಿ ಹಲ್ಲೆ ಆರೋಪಗಳೆಲ್ಲ ಯಾಕೆ ಬಂತೋ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೇ ಚಂದ್ರಶೇಖರ್ ಮದ್ಯಪಾನ ಮಾಡಿ ತನ್ನ ಬಳಿ ಬಂದು ಅಸಭ್ಯ ಭಾಷೆಯಲ್ಲಿ ಮಾತನಾಡಿದರು ಎಂದು ಧನ್ವೀರ್ ಆರೋಪಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಎರಡನೇ ಸಿನಿಮಾ ಬಿಡುಗಡೆಯ ಹೊತ್ತಿ ನಲ್ಲೇ ನಟ ಧನ್ವೀರ್ ಕಾಂಟ್ರಾವರ್ಸಿಗೆ ಆಹಾರ ವಾಗಿದ್ದು ಇದರಿಂದ ಹೇಗೆ ಹೊರಗೆ ಬರ್ತಾರೆ ಕಾದು ನೋಡಬೇಕಿದೆ. ಇಂದಷ್ಟೇ ಧನ್ವಿರ್ ನಟನೆಯ ಬೈಟ್ ಟೂ ಲವ್ ತೆರೆಗೆ ಬಂದಿದ್ದು ಆ ಖುಷಿಯ ನಡುವೆಯೇ ಈ ಆರೋಪವೂ ಧನ್ವೀರ್ ಬೆನ್ನೇರಿದೆ.
ಇದನ್ನೂ ಓದಿ : ನಿಮಗೆ ಶುಭಸುದ್ದಿ ತಿಳಿಸುವೆ ‘ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂತೆ ಮಾಡಿದ ಮೋಹಕತಾರೆ ರಮ್ಯಾ
ಇದನ್ನೂ ಓದಿ : ಬೆಂಗಳೂರಿನ ರಿಂಗ್ ರೋಡ್ ಗೆ ಪುನೀತ್ ರಾಜ್ ಕುಮಾರ್ ಹೆಸರು
( By Two Love Movie Actor Dhanveer Gowda assault fan, FIR in Upparapete Police Station Bangalore)