ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ಸಿನಿಮಾ ಪುಷ್ಪಾ( Pushpa: The Rise) ಇದೇ ತಿಂಗಳ 17ರಂದು ಸೆಟ್ಟೇರಲು ಸಜ್ಜಾಗಿದೆ. ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಿನಿಮಾ ವಿವಾದವೊಂದರದಲ್ಲಿ ಸಿಲುಕಿಕೊಂಡಿದೆ. ವರದಿಗಳ ಪ್ರಕಾರ ಈ ಸಿನಿಮಾದಲ್ಲಿ ಊ ಅಂಥಾವಾ ಎಂಬ ಹಾಡಿಗೆ ಸಮಂತಾ ( Samantha dance )ಹೆಜ್ಜೆ ಹಾಕಿದ್ದರು. ಆದರೆ ಈ ಹಾಡಿನ ವಿರುದ್ಧ ಪುರುಷರ ಸಂಘವು ದೂರು ನೀಡಿದೆ ಎನ್ನಲಾಗಿದೆ. ಹಾಡಿನ ಸಾಹಿತ್ಯ ಹಾಗೂ ದೃಶ್ಯಾವಳಿಗಳಲ್ಲಿ ಪುರುಷನನ್ನು ಕಾಮಪ್ರಚೋದಕನಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿ ಪುರುಷರ ಸಂಘವು ಕಾನೂನು ಹೋರಾಟಕ್ಕೆ ಮುಂದಾಗಿದೆ.
ಪುಷ್ಪಾ ಸಿನಿಮಾದ ಈ ವಿಶೇಷ ಹಾಡನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿ ಪುರುಷರ ಸಂಘವು ಆಂಧ್ರ ಪ್ರದೇಶ ಕೋರ್ಟ್ನ ಮೆಟ್ಟಿಲೇರಿದೆ.ಅಂದಹಾಗೆ ಇದು ನಟಿ ಸಮಂತಾ ಪ್ರಭು ಅವರ ಮೊದಲ ಐಟೆಂ ಸಾಂಗ್ ಆಗಿದೆ. ಆದರೆ ಮೊದಲ ಐಟಂ ಸಾಂಗ್ ಇದೀಗ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿದೆ. ವಿವಿಧ ಭಾಷೆಗಳಲ್ಲಿ ರಿಲೀಸ್ ಆದ ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿವೇಕ ಹಾಗೂ ಚಂದ್ರ ಬೋಸ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ಮೂಡಿ ಬಂದಿರುವ ಪುಷ್ಪಾ ಸಿನಿಮಾ ತಮಿಳು, ತೆಲಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೀನುಗಾರ ಮಹಿಳೆಯಾಗಿ ನಟಿಸಿದ್ದರೆ ಅಲ್ಲು ಅರ್ಜುನ್ ಸ್ಮಗ್ಲರ್ ಆಗಿ ಬಣ್ಣ ಹಚ್ಚಿದ್ದಾರೆ.
ಪುಷ್ಪ ಸಿನಿಮಾ ರಂಗೇರಿಸಿದ ಸಮಂತಾ: ಐಟಂ ಸಾಂಗ್ ಲುಕ್ ಗೆ ಫ್ಯಾನ್ಸ್ ಫಿದಾ
ಕಳೆದ ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ನಟಿ ಸಮಂತಾ ಡಿವೋರ್ಸ್ ಸುದ್ದಿ.ಮೊದಲು ಡಿವೋರ್ಸ್ ಆಗುತ್ತೆ ಅನ್ನೋ ಕಾರಣಕ್ಕೆ ಸುದ್ದಿಯಾದ ನಟಿ, ವಿಚ್ಛೇಧನ ಘೋಷಣೆ ಬಳಿಕ ಡಿವೋರ್ಸ್ ನ ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಈಗ ಮತ್ತೊಮ್ಮೆ ಸಮಂತಾ ತಮ್ಮ ಹಾಟ್ ಪೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.
ನಾಗಚೈತನ್ಯರಿಂದ ವಿಚ್ಛೇಧನ ಪಡೆಯುತ್ತಿದ್ದಂತೆ ಸಮಂತಾ ಸಿನಿಮಾ ಕೆರಿಯರ್ ನಲ್ಲಿ ತುಂಬಾ ಸಿರಿಯಸ್ಸಾಗಿ ತೊಡಗಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಸಮಂತಾ ತೆಲುಗಿನ ಪುಷ್ಪ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸುವ ಮೂಲಕ ಸದ್ದು ಮಾಡಿದ್ದಾರೆ. ಡಿಸೆಂಬರ್ 16 ರಂದು ರಿಲೀಸ್ ಆಗಲಿರೋ ಅಲ್ಲು ಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ನಟನೆಯ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಐಟಂ ಸಾಂಗ್ ವೊಂದಕ್ಕೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಪಕ್ಕಾ ಟಪೋರಿ ಹಾಡೊಂದಕ್ಕೆ ಸಮಂತಾ ಹಾಟ್ ಡ್ರೆಸ್ ನಲ್ಲಿ ಹೆಜ್ಜೆ ಹಾಕಿರೋ ಪೋಟೋವನ್ನು ಪುಷ್ಪ ಸಿನಿತಂಡ ಹಂಚಿಕೊಂಡಿದೆ. ಮಾತ್ರವಲ್ಲ ಸ್ಪೆಶಲ್ ಡಿಪಿ ಡಿಸೈನ್ ಎಂದು ಟ್ಯಾಗ್ ಲೈನ್ ನೀಡಿದೆ. ಅಕ್ಕಿನೇನಿ ಕುಟುಂಬದಿಂದ ವಿಚ್ಛೇಧನದ ಬಳಿಕ ಹೊರಬಂದ ಸಮಂತಾ ಒಪ್ಪಿಕೊಂಡಿರೋ ಮೊದಲ ಬೋಲ್ಡ್ ಹಾಗೂ ಐಟಂ ಸಾಂಗ್ ಇದಾಗಿರೋದರಿಂದ ಈ ಐಟಂ ಸಾಂಗ್ ಸಖತ್ ಕುತೂಹಲಮೂಡಿಸಿದೆ. ಸಮಂತಾ ಈ ಒಂದು ಹಾಡಿಗೆ ಬರೋಬ್ಬರಿ 1.5 ಕೋಟಿ ಸಂಭಾವನೆ ಪಡೆದಿದ್ದಾರಂತೆ.
ಇದನ್ನು ಓದಿ: SBI customers alert: ಎಸ್ಬಿಐ ಗ್ರಾಹಕರ ಗಮನಕ್ಕೆ: ಈ ಎರಡು ದಿನಗಳು ಬ್ಯಾಂಕ್ ಸೇವೆಯಲ್ಲಿ ಇರಲಿದೆ ವ್ಯತ್ಯಯ
ಇದನ್ನೂ ಓದಿ : 777 Charlie : 777 ಚಾರ್ಲಿ ರಿಲೀಸ್ ಕುರಿತು ತಾಜಾ ಮಾಹಿತಿ; ರಕ್ಷಿತ್ ಶೆಟ್ಟಿ ಅಭಿಮಾನಿಗಳ ಆಸೆ ಈಡೇರುವ ದಿನದ ಬಗ್ಗೆ ಏನಂದ್ರು?
Case filed against Samantha dance number in Pushpa: The Rise