Omicron Death : ಬ್ರಿಟನ್​​ನಲ್ಲಿ ವರದಿಯಾಯ್ತು ಮೊದಲ ಒಮಿಕ್ರಾನ್​ ಸಾವು..!

ಸಂಭವನೀಯ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾದ ಒಮಿಕ್ರಾನ್​ ರೂಪಾಂತರಿಯಿಂದ (Omicron Death ) ಮೊದಲ ಸಾವು ಉಂಟಾಗಿದೆ ಎಂದು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ( PM Boris Johnson )ಹೇಳಿದ್ದಾರೆ. ಓಮಿಕ್ರಾನ್​ ರೂಪಾಂತರಿಯಿಂದ ಆಸ್ಪತ್ರೆಯಲ್ಲಿ ದಾಖಲಾತಿ ಹೆಚ್ಚಾಗುತ್ತಿದೆ ಹೀಗಾಗಿ ಜನರು ಬೂಸ್ಟರ್​ ಶಾಟ್​ ಪಡೆಯಬೇಕು ಎಂದು ಮನವಿ ಮಾಡಿದರು.

ಒಮಿಕ್ರಾನ್​​ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ . ದುರಾದೃಷ್ಟಕರ ಎಂಬಂತೆ ಓರ್ವ ಓಮಿಕ್ರಾನ್​ ಸೋಂಕಿತರು ಸಾವನ್ನಪ್ಪಿದ್ದಾರೆ. ನಾವು ಓಮಿಕ್ರಾನ್​ ಗಂಭೀರತೆಯನ್ನು ಅರಿಯಬೇಕಿದೆ. ಹೀಗಾಗಿ ನಾವು ಬೂಸ್ಟರ್​ ಡೋಸ್​​​ನ್ನು ಪಡೆಯಲೇಬೇಕು ಎಂದು ಬೋರಿಸ್​ ಜಾನ್ಸನ್​ ಹೇಳಿದ್ದಾರೆ.

ಲಂಡನ್​​ನಲ್ಲಿರುವ ಪ್ರಸ್ತುತ ಕೊರೊನಾ ಪ್ರಕರಣಗಳಲ್ಲಿ 40 ಪ್ರತಿಶತ ಓಮಿಕ್ರಾನ್​​ ಪ್ರಕರಣವೇ ಆಗಿದೆ.ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಬ್ರಿಟನ್​ನಲ್ಲಿ ಅತ್ಯಂತ ವೇಗವಾಗಿ ಓಮಿಕ್ರಾನ್​​ ಹರಡುತ್ತಿದೆ. ಇಂಗ್ಲೆಂಡ್​ನಲ್ಲಿರುವ ಎಲ್ಲಾ ವಯಸ್ಕರಿಗೆ ಡಿಸೆಂಬರ್​ ಅಂತ್ಯದ ವೇಳೆಗೆ ಬೂಸ್ಟರ್​ ಡೋಸ್​ ನೀಡುವ ಗುರಿಯನ್ನು ಹೊಂದಲಾಗಿದೆ. ಓಮಿಕ್ರಾನ್​ ಅತ್ಯಂತ ವೇಗವಾಗಿ ಹರಡುವ ರೂಪಾಂತರಿಯಾಗಿದ್ದು ಕೇವಲ 2 ಡೋಸ್​ ಲಸಿಕೆಯು ಓಮಿಕ್ರಾನ್​​ ತಡೆಗಟ್ಟಲು ಸಹಕಾರಿಯಾಗದು ಎಂದು ಹೇಳಿದ್ದಾರೆ.

ಒಮಿಕ್ರಾನ್​ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸೆಕ್ಷನ್​ 144 ಜಾರಿ

ಮುಂಬೈ : ದೇಶದಲ್ಲಿ ಕೊರೊನಾ ಒಮಿಕ್ರಾನ್​ ರೂಪಾಂತರಿ (Omicron threat) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆತಂಕಕಾರಿ ವಿಚಾರವಾಗಿದೆ. ಸಂಭವನೀಯ ಕೊರೊನಾ ಮೂರನೇ ಅಲೆ ಸಮೀಪಿಸುತ್ತಿದೆ ಎಂಬ ಆತಂಕ ಹೆಚ್ಚಾಗುತ್ತಿದ್ದು ವಿವಿಧ ರಾಜ್ಯಗಳು ಒಮಿಕ್ರಾನ್​ ಭೂತವನ್ನು ಎದುರಿಸಲು ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೀಗ ಮುಂಬೈನಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ

ಮಹಾರಾಷ್ಟ್ರದಲ್ಲಿ ಪ್ರಸ್ತುತ ಒಟ್ಟು 17 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಒಮಿಕ್ರಾನ್​ ಪ್ರಕರಣ ಹೊಂದಿರುವ ರಾಜ್ಯ ಎನಿಸಿದೆ. ಒಮಿಕ್ರಾನ್​ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಇಂದು ಹಾಗೂ ನಾಳೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಒಮಿಕ್ರಾನ್​ ಮತ್ತಷ್ಟು ಹರಡದಂತೆ ತಡೆಯುವ ಸಲುವಾಗಿ ರ್ಯಾಲಿಗಳು, ಮೆರವಣಿಗೆ ಹಾಗೂ ವಾಹನಗಳ ಸಂಚಾರ ಸೇರಿದಂತೆ ಜನದಟ್ಟಣೆಗೆ ಕಾರಣವಾಗಬಲ್ಲ ಎಲ್ಲಾ ಕಾರ್ಯಕ್ರಮ ಗಳಿಗೆ ಮುಂಬೈನಲ್ಲಿ ನಿಷೇಧ ಹೇರಲಾಗಿದೆ. ಈ ಆದೇಶದ ವಿರುದ್ಧ ನಡೆದುಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಬಿಎಂಸಿ ಹೇಳಿದೆ. ಎರಡು ಕಾರಣಗಳಿಗಾಗಿ ಮುಂಬೈನಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಎಐಎಂಐಎಂ ಪಕ್ಷವು ಮುಂಬೈಲ್ಲಿ ರ್ಯಾಲಿಯನ್ನು ಆಯೋಜಿಸಿದ್ದು ಈಗಾಗಲೇ ಸಾಕಷ್ಟು ಕಾರ್ಯಕರ್ತರು ಮುಂಬೈ ಬಂದು ತಲುಪಿದ್ದಾರೆ ಇತ್ತ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕೂಡ ಈ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಸಾಧ್ಯತೆ ಇದೆ. ಆದರೆ ಒಮಿಕ್ರಾನ್​ ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಅನುಮತಿಯನ್ನು ನೀಡಿಲ್ಲ. ಇದು ನಿಷೇಧಾಜ್ಞೆಯನ್ನು ಜಾರಿಗೆ ತರಲು ಮೊದಲ ಕಾರಣವಾಗಿದ್ದರೆ. ಸಂಜಯ್​ ರಾವತ್​ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಆಯೋಜಿಸಿರುವ ಪ್ರತಿಭಟನೆಯನ್ನು ತಪ್ಪಿಸುವುದು 2ನೇ ಕಾರಣವಾಗಿದೆ.

ಇದನ್ನು ಓದಿ: ​ workplace accident : ವರ್ಕ್​ ಫ್ರಮ್​​ ಹೋಮ್​​ನಲ್ಲಿದ್ದರೂ ಉದ್ಯೋಗಿಯ ಜವಾಬ್ದಾರಿ ಕಂಪನಿಯದ್ದೇ : ಕೋರ್ಟ್ ಮಹತ್ವದ ಆದೇಶ

ಇದನ್ನೂ ಓದಿ: World first digital country Dubai : ವಿಶ್ವದ ಮೊದಲ ಸಂಪೂರ್ಣ ಡಿಜಿಟಲ್ ದೇಶವಾದ ದುಬೈ

first Omicron Death Covid-19 Variant Recorded in UK, Informs PM Boris Johnson

Comments are closed.