ಸೋಮವಾರ, ಏಪ್ರಿಲ್ 28, 2025
HomeCinemaChallenging Star Darshan : ಬರ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ : ಅಭಿಮಾನಿಗೆ ಸಿಗಲಿದೆ...

Challenging Star Darshan : ಬರ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ : ಅಭಿಮಾನಿಗೆ ಸಿಗಲಿದೆ ಸ್ಪೆಶಲ್ ಗಿಫ್ಟ್

- Advertisement -

ಬಾಲಿವುಡ್ ಇರಲಿ, ಸ್ಯಾಂಡಲ್ ವುಡ್ ಇರಲಿ ಸ್ಟಾರ್ ಬರ್ತಡೇ ಅಂದ್ರೇ ಅದು ಅಭಿಮಾನಿಗಳಿಗೆ ದೀಪಾವಳಿ ಹಬ್ಬ ಇದ್ದಂತೆ. ಅದರಲ್ಲೂ ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್ (Challenging Star Darshan) ಅಂದ್ರೇ ಲಕ್ಷಾಂತರ ಅಭಿಮಾನಿಗಳಿಗೆ ಹುಚ್ಚು ಅಭಿಮಾನ. ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಏನಾದ್ರು ಸ್ಪೆಶಲ್ ಗಿಫ್ಟ್ ಇದ್ದೇ ಇರುತ್ತೆ. ಈ ವರ್ಷವೂ ಅಂತಹುದೇ ಬಿಗ್ ಸಪ್ರೈಸ್ ಗಿಫ್ಟ್ ವೊಂದು ದಚ್ಚು ಅಭಿಮಾನಿಗಳಿಗೆ ಕಾದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಸಿನಿಮಾ‌ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊದಲೆಲ್ಲ ಯಾವಾಗಲೋ ಒಮ್ಮೇ ಸೋಷಿಯಲ್ ಮೀಡಿಯಾಗೆ ಬರ್ತಿದ್ದ ದರ್ಶನ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಸ್ಟಾರ್ ಗಳ ಹುಟ್ಟುಹಬ್ಬ, ದೇಶಭಕ್ತರ ಜಯಂತಿ ಎಲ್ಲದಕ್ಕೂ ದರ್ಶನ್ ಟ್ವೀಟ್,ಪೋಸ್ಟ್ ನಲ್ಲಿ ವಿಶ್ ಮಾಡೋಕೆ ಮರೆಯೋದಿಲ್ಲ. ಮೊನ್ನೆ ಮೊನ್ನೆ ನಡೆದ ಕನ್ನಡ ಬಾವುಟ ಬೆಂಕಿಗೂ ದಚ್ಚು ಸೋಷಿಯಲ್ ಮೀಡಿಯಾದಲ್ಲೇ ಸಖತ್ ತಿರುಗೇಟು ನೀಡಿದ್ದರು.

ಇಂತಿಪ್ಪ ದರ್ಶನ್ ಸದ್ಯ ತಮ್ಮ 55 ನೇ ಚಿತ್ರ ಕ್ರಾಂತಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದರ್ಶನ್ ಕೆರಿಯರ್ ನ ಬಹುನೀರಿಕ್ಷಿತ ಚಿತ್ರ ಎನ್ನಿಸಿರುವ ಕ್ರಾಂತಿಯನ್ನು ಶೈಲಜಾ‌ನಾಗ್ ನಿರ್ಮಿಸುತ್ತಿದ್ದಾರೆ. ದರ್ಶನ್ ರನ್ನು ವಿಭಿನ್ನ ಗೆಟಪ್ ನಲ್ಲಿ ತೋರಿಸೋ ಪ್ರಯತ್ನ ಕೂಡ ನಡೆದಿದೆ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಚಿತಾರಾಮ್ ದರ್ಶನ್ ಗೆ ಜೋಡಿಯಾಗುತ್ತಿದ್ದಾರೆ.

ಫೆ.16 ರಂದು ದರ್ಶನ್ ಹುಟ್ಟುಹಬ್ಬವಿದೆ. ಕೊರೋನಾ ಕಾರಣಕ್ಕೆ ಈ ವರ್ಷವೂ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋದು ಅನುಮಾನ. ಹೀಗಾಗಿ ಈ ಕಾರಣಕ್ಕೆ ಬೇಸರಪಡೋ ಅಭಿಮಾನಿಗಳನ್ನು ಸಮಾಧಾನ ಪಡಿಸೋಕೆ ಕ್ರಾಂತಿ ಚಿತ್ರತಂಡ ಸಿದ್ಧತೆ ನಡೆಸಿದೆ. ದಚ್ಚು ಬರ್ತಡೆಯಂದು ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಫರ್ಸ್ಟ್ ಲುಕ್ ಗಿಫ್ಟ್ ಸಿಗಲಿದೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು, ಫೆ‌.೧೬ ರಂದು ಕ್ರಾಂತಿ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ.

ಕಳೆದ ವರ್ಷವೂ ದರ್ಶನ್ ಕೊರೋನಾ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಬದಲಾಗಿ ತಮ್ಮ ಹುಟ್ಟುಹಬ್ಬದ ವೆಚ್ಚದಲ್ಲಿ ಬಡವರಿಗೆ ,ಕೊರೋನಾದಿಂದ ಸಂತ್ರಸ್ಥ ರಾದವರಿಗೆ ನೆರವಾಗುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ವರ್ಷ ಕೊರೋನಾ ಜೊತೆ ಓಮೈಕ್ರಾನ್ ಭೀತಿಯೂ ಇರೋದರಿಂದ ದರ್ಶನ್ ಈ ವರ್ಷದ ಹುಟ್ಟುಹಬ್ಬ ವೂ ಅಭಿಮಾನಿಗಳ ಅನುಪಸ್ಥಿತಿಯಲ್ಲಿ ಸರಳವಾಗಿಯೇ ನಡೆಯೋದು ಗ್ಯಾರಂಟಿ. ಆದರೆ ದರ್ಶನ್ ಹುಟ್ಟುಹಬ್ಬದ ಮೆರುಗು ಹೆಚ್ಚಿಸಲು ಕ್ರಾಂತಿ ಫರ್ಸ್ಟ್ ಲುಕ್ ಬರೋದು ಅಭಿಮಾನಿಗಳಿಗೆ ಬೇಸರದ ನಡುವೆಯೂ ಸಮಾಧಾನದ ಸಂಗತಿಯಾಗಿದೆ.

ಇದನ್ನೂ ಓದಿ : D BOSS ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : “ಕ್ರಾಂತಿ” ಮೊಳಗಿಸೋಕೆ ರೆಡಿಯಾದ್ರು ನಟ ದರ್ಶನ್‌

ಇದನ್ನೂ ಓದಿ : ಕೊಲ್ಲೂರಿನಲ್ಲಿ ನವಚಂಡಿಕಾಯಾಗ ನೆರವೇರಿಸಿದ ನಟ ದರ್ಶನ್‌

(Challenging star Darshan Birthday Special gift for fans)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular