Uttarakhand :ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

Uttarakhand : ನಮಗಿಂತ ಕೆಲವರು ತುಂಬಾ ಹಿರಿಯರಿದ್ದರೆ ಪ್ರೀತಿಪೂರ್ವಕವಾಗಿ ಅವರನ್ನು ಅಂಕಲ್ ಅಥವಾ ಆಂಟಿ​ ಎಂದು ಕರೆಯೋದು ವಾಡಿಕೆ. ಆದರೆ ಬಹುತೇಕರು ಈ ರೀತಿ ಕರೆಯಿಸಿಕೊಳ್ಳೋದನ್ನು ಇಷ್ಟ ಪಡೋದಿಲ್ಲ. ಕೆಲವರಿಗೆ ಯಾರ ಬಳಿಯಾದರೂ ಅಂಕಲ್​ ಅಥವಾ ಆಂಟಿ ಎಂದು ಕರೆಸಿಕೊಂಡರೆ ಮುಜುಗರ ವಾಗೋದು ಸಹಜ. ಆದರೆ ಈ ಗ್ರಾಮದಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಂಕಲ್​ ಎಂದು ಕರೆದಿದ್ದಕ್ಕೆ ಕೋಪಗೊಂಡ ವ್ಯಕ್ತಿಯು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ..!

ಉತ್ತರಾಖಂಡ್​ನ ಉಧಮ್​ ಸಿಂಗ್​ ನಗರದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಿತಾರ್​ಗಂಜ್​ ಎಂಬ ಪ್ರದೇಶದಲ್ಲಿ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಂಗಡಿ ಮಾಲೀಕನೊಬ್ಬನಿಗೆ ಅಂಕಲ್​ ಎಂದು ಕರೆದಿದ್ದಾಳೆ. ಇಷ್ಟಕ್ಕೇ ಕೋಪಗೊಂಡ ಅಂಗಡಿಯಾತ ವಿದ್ಯಾರ್ಥಿನಿಗೆ ಮನಬಂದಂತೆ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿನಿಯ ಸ್ಥಿತಿ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅಂದರೆ ಆಕೆಗೆ ಕೃತಕ ಆಮ್ಲಜನಕವನ್ನು ಅಳವಡಿಸಲಾಗಿದೆ.

ಸಿತಾರಗಂಜ್​​ನ ಇಸ್ಲಾಂನಗರದಲ್ಲಿ ವಾಸಿಸುತ್ತಿರುವ ಬಿಎಸ್​ಸಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ನಿಶಾ ಕೆಲವು ದಿನಗಳ ಹಿಂದೆಯಷ್ಟೇ ಖತೀಮಾ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಬ್ಯಾಡ್ಮಿಂಟನ್​ ಖರೀದಿ ಮಾಡಿದ್ದಳು. ಆದರೆ ಆಕೆ ಮನೆಗೆ ಬಂದ ವೇಳೆ ಬ್ಯಾಡ್ಮಿಂಟನ್​​ ಬ್ಯಾಟ್​ನಲ್ಲಿ ಸಮಸ್ಯೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಂಗಡಿಗೆ ಮರಳಿದ ನಿಶಾ ಬ್ಯಾಡ್ಮಿಂಟನ್​ ಬ್ಯಾಟ್​ ಬದಲಾಯಿಸಿಕೊಡಿ ಅಂಕಲ್​ ಎಂದು ಕೇಳಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಅಂಗಡಿಯಾತ ನಿಶಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಅಂಗಡಿಯಾತ ಮೊದಲು ನಿಶಾಳನ್ನು ನಿಂದಿಸಿದ್ದಾನೆ. ಇದಕ್ಕೆ ನಿಶಾ ವಿರೋಧ ವ್ಯಕ್ತಪಡಿಸುವಂತೆ ಅಂಗಡಿಯವನು ನಿಶಾ ತಲೆಯನ್ನು ಕೌಂಟರ್​ಗೆ ಬಡಿದಿದ್ದಾನೆ. ಇದಾದ ಬಳಿ ನಿಶಾ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ನಿಶಾಳನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದನ್ನು ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!

ಇದನ್ನೂ ಓದಿ : Gujarat :ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!

ಇದನ್ನೂ ಓದಿ : man climbs atop electricity tower : ಸಿಹಿತಿಂಡಿ ಬೇಕೆಂದು ವಿದ್ಯುತ್​ ಕಂಬವನ್ನೇರಿ ವ್ಯಕ್ತಿಯ ಹುಚ್ಚಾಟ..!

shopkeeper brutally thrashed and 18 year old girl over being addressed as uncle in Uttarakhand

Comments are closed.