ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಸಿನಿಮಾಗಳು ಟ್ರೋಲ್ ಸಖತ್ ಟ್ರೋಲ್ ಆಗುತ್ತಿದೆ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅಭಿನಯದ ಮರಾಠಿ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಶೌರ್ಯವನ್ನು ಸಾರುವ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಅದುವೇ ‘ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್’. ಈ ಸಿನಿಮಾ ಶೂಟಿಂಗ್ ಆರಂಭ ಆಗಿದೆ ಎಂದು ಅಕ್ಷಯ್ ಕುಮಾರ್ ಅನೌನ್ಸ್ ಮಾಡಿದ್ದಷ್ಟೇ. ನೆಟ್ಟಿಗರು ಈ ಸಿನಿಮಾವನ್ನು ಸಾಕಷ್ಟು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್’ ಸಿನಿಮಾದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದರು. ಅದೇ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ನೆಟ್ಟಿಗರು ಈ ಸಿನಿಮಾದ ಫಸ್ಟ್ ಲುಕ್ ಅನ್ನು ಟ್ರೋಲ್ ಮಾಡುತ್ತಿರುವುದು ಯಾಕೆಂದು ತಿಳಿಯಬೇಕೇ ? ಅದನ್ನು ಈ ಕೆಳಗೆ ತಿಳಿಸಲಾಗಿದೆ. ಅಕ್ಷಯ್ ಕುಮಾರ್ ಶಿವಾಜಿ ಗೆಟಪ್ ಹೇಗಿದೆ ಎನ್ನುವುದನ್ನು ಮಂಗಳವಾರ ‘ವೇದಾಂತ್ ಮರಾಠೆ ವೀರ್ ದೌಡ್ಲೆ ಸಾತ್’ ಶೂಟಿಂಗ್ ಪ್ರಾರಂಭವಾಗಿದ್ದನ್ನು ಅನೌನ್ಸ್ ಮಾಡಿದ್ದರು. ಸಿನಿತಂಡ ಹಂಚಿಕೊಂಡ ಫಸ್ಟ್ ಲುಕ್ ನೋಡಿ ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಸಿನಿತಂಡ ಹಂಚಿಕೊಂಡ ಫಸ್ಟ್ ಲುಕ್‌ನಲ್ಲಿ ಬಲ್ಬ್.. ಹೆವೀ ಟ್ರೋಲ್ ಆಗಿದೆ. ಅಕ್ಷಯ್ ಕುಮಾರ್ ಶಿವಾಜಿ ಅವತಾರದ ಫಸ್ಟ್ ಲುಕ್ ರಿವೀಲ್ ಆಗುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಅದಕ್ಕೆ ಬಲವಾದ ಕಾರಣವೂ ಇದೆ. ಈ ಸಿನಿಮಾ ಫಸ್ಟ್ ಲುಕ್‌ನಲ್ಲಿ ಅಕ್ಷಯ್ ಕುಮಾರ್ ನಡೆದು ಬರುತ್ತಿದ್ದಂತೆ ಕೊನೆಯಲ್ಲಿ ಲೈಟ್ ಬಲ್ಬ್‌ಗಳು ಕಾಣಿಸುತ್ತವೆ. ಇದನ್ನೇ ಮಾರ್ಕ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ‘ಶಿವಾಜಿ ಮಹಾರಾಜ್ 1674 to 1680ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದರು. ಥಾಮಸ್ ಎಡಿಸನ್ 1880ರಲ್ಲಿ ಬಲ್ಬ್ ಕಂಡು ಹಿಡಿದಿದ್ದಾನೆ. ಇದು ಅಕ್ಷಯ್ ಕುಮಾರ್ ನಟಿಸುತ್ತಿರುವ ಶಿವಾಜಿ.’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಶಿವಾಜಿ ಕಾಲದಲ್ಲಿ ಬಲ್ಬ್ ಇತ್ತಾ ಎನ್ನುವುದು ನೆಟ್ಟಿಗರ ಪ್ರಶ್ನೆ ಆಗಿದೆ. ಛತ್ರಪತಿ ಶಿವಾಜಿ ಚರಿತ್ರೆಯನ್ನಾಧರಿಸಿದ ಸಿನಿಮಾದ ಫಸ್ಟ್ ಲುಕ್‌ನಲ್ಲಿ ಲೈಟ್ ಬಲ್ಬ್ ಕಾಣಿಸಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ‘ ಛತ್ರಪತಿ ಶಿವಾಜಿ ಮಹಾರಾಜ್ ಕಾಲಘಟ್ಟದಲ್ಲಿ ಥಾಮಸ್ ಎಡಿಸನ್ ಬಲ್ಬ್ ಕಂಡುಹಿಡಿದಿದ್ದ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಕ್ರಿಯಾತ್ಮಕ ಸ್ವಾತಂತ್ರವನ್ನು ಸ್ವಲ್ಪ ಹೆಚ್ಚಾಗಿಯೇ ಬಳಸಿಕೊಂಡಿದ್ದಾರೆ’ ಎಂದು ಮತ್ತೊಬ್ಬ ನೆಟ್ಟಗರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್ ಡೇಟ್ಸ್ ಫಿಕ್ಸ್ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ
ಇದನ್ನೂ ಓದಿ : Padavi Poorva Release Date : ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ ಯೋಗರಾಜ್ ಭಟ್ ನಿರ್ಮಾಣದ “ಪದವಿ ಪೂರ್ವ” ಸಿನಿಮಾ
ಇದನ್ನೂ ಓದಿ : Shah Rukh Khan’s son Aryan : ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿರುವುದೂ ಕೂಡ ನೆಟ್ಟಿಗರಿಗೆ ಸಮಾಧಾನವಿಲ್ಲ. ಅಕ್ಷಯ್ ಕುಮಾರ್‌ಗಿಂತ ಮರಾಠಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಶರದ್ ಕೆಲ್ಕರ್ ಉತ್ತಮ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಪಾತ್ರಕ್ಕೆ ನ್ಯಾಯ ವದಗಿಸುತ್ತಾರೆಂದು ನಂಬಿದ್ದೇನೆ. ಶರದ್ ಕೆಲ್ಕರ್ ಈ ಪಾತ್ರಕ್ಕೆ ಸೂಕ್ತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಮೊದಲ ಹಂತದಲ್ಲೇ ಅಕ್ಷಯ್ ಕುಮಾರ್ ಸಿನಿಮಾಗೆ ಹಿನ್ನೆಡೆಯಾಗಿದೆ.
Chhatrapati Shivaji found the light bulb in his time? Akshay Kumar vs netizens