World Tallest Person: ಸತ್ತ ಮೇಲೂ ದಾಖಲೆ ಉಳಿಸಿಕೊಂಡ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಇವರೇ ನೋಡಿ: ವೈರಲ್ ಆಯ್ತು 1935ರ ಫೋಟೋ

ಅಮೆರಿಕ: World Tallest Person: ಸಾಮಾನ್ಯವಾಗಿ ಯಾವುದೇ ಕ್ಷೇತ್ರದಲ್ಲೂ ಒಬ್ಬರ ದಾಖಲೆಯನ್ನು ಮತ್ತೊಬ್ಬರು ಮುರಿಯಬಹುದು. ಕೆಲವೊಂದು ದಾಖಲೆಗಳು ಗಿನ್ನೆಸ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿದ್ದರೂ ಆ ದಾಖಲೆಯನ್ನು ಮುರಿದು ತಮ್ಮ ಸ್ಥಾನ ಗಿಟ್ಟಿಸಿಕೊಳ್ಳುವುದುಂಟು. ಆದರೆ ಅದೇ ಗಿನ್ನೆಸ್ ರೆಕಾರ್ಡ್ ನಲ್ಲಿ ವಿಶ್ವದ ಎತ್ತರದ ವ್ಯಕ್ತಿ ಎಂಬ ದಾಖಲೆಯನ್ನು ಇಲ್ಲಿಯವರೆಗೆ ಮುರಿದವರೇ ಇಲ್ಲವಂತೆ. 1955ರಲ್ಲಿ ವಿಶ್ವದ ಎತ್ತರದ ವ್ಯಕ್ತಿ ಎಂಬ ದಾಖಲೆ ಗಳಿಸಿದ್ದ ವ್ಯಕ್ತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಟ್ವಿಟರ್ ಪೇಜ್ ನಲ್ಲಿ ಸ್ಮರಿಸಿದೆ.

ಅಂದಹಾಗೆ ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಎಂದೇ ದಾಖಲೆ ಗಳಿಸಿದ್ದವರು ಅಮೆರಿಕದ ರಾಬರ್ಟ್ ವಾಡ್ಲೊ. 1955ರಲ್ಲಿ ಇವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನ ಪಟ್ಟಿಗೆ ಸೇರಿದ್ದಾರೆ. ಆದರೆ ಇಂದಿನವರೆಗೂ ಅವರ ದಾಖಲೆಯನ್ನು ಮುರಿದವರೇ ಇಲ್ಲ. ಗಿನ್ನೆಸ್ ವಿಶ್ವದಾಖಲೆಯಲ್ಲಿ ಅವರ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಸದ್ಯ 1935ರಲ್ಲಿ ತೆಗೆಯಲಾದ ರಾಬರ್ಟ್ ವಾಡ್ಲೊ ಫೋಟೊವನ್ನು ಗಿನ್ನೆಸ್ ವಿಶ್ವದಾಖಲೆ ಪ್ರಕಟಿಸಿದೆ.

ಇದನ್ನೂ ಓದಿ: Maruti Suzuki Baleno vs Tata Punch : ಅತೀ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ-ಟಾಟಾದ ಅಗ್ಗದ ಕಾರುಗಳು ಯಾವುವು ಗೊತ್ತಾ ?

1935ರಲ್ಲಿ ತೆಗೆಯಲಾದ ಬ್ಲಾಕ್ ಆಂಡ್ ವೈಟ್ ಫೋಟೋವನ್ನು ಕಲರ್ ಫೋಟೋವನ್ನಾಗಿ ಗಿನ್ನೆಸ್ ವಿಶ್ವದಾಖಲೆಯು ತನ್ನ ಟ್ವಿಟರ್ ಹ್ಯಾಂಡ್ ನಲ್ಲಿ ಪ್ರಕಟಿಸಿದೆ. ಪ್ರಸ್ತುತ ರಾಬರ್ಟ್ ಬದುಕಿಲ್ಲವಾದರೂ ಅವರನ್ನು ತನ್ನ ಟ್ವಿಟರ್ ಖಾತೆ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನೆನಪಿಸಿದೆ.

ರಾಬರ್ಟ್ ಅವರು ಹುಟ್ಟಿದಾಗ 3.8 ಕೆಜಿ ತೂಕವಿದ್ದರು. ಅವರಿಗೆ 5 ವರ್ಷವಾದಾಗ 5.4 ಇಂಚಿನಷ್ಟು ಎತ್ತರಕ್ಕೆ ಬೆಳೆದಿದ್ದರು. 8 ವರ್ಷದ ಬಾಲಕನಾಗಿದ್ದಾಗ ಅವರ ಎತ್ತರ 5.11 ಅಡಿ ಆಗಿತ್ತು. ಆ ವಯಸ್ಸಿನಲ್ಲೇ ಅವರು ತಂದೆಯ ಎತ್ತರವನ್ನು ಮೀರಿ ಬೆಳೆದಿದ್ದರು. ಆ ಬಳಿಕ 1940ರ ಜೂನ್ 27ರಂದು ರಾಬರ್ಟ್ ಅವರ ಎತ್ತರವನ್ನು ಅಳೆಯಲಾಗಿತ್ತು. ಆಗ ಅವರ ಎತ್ತರ 2.72 ಮೀಟರ್( 8 ಮೀಟರ್ 11 ಇಂಚು) ಎತ್ತರಕ್ಕೆ ಬೆಳೆದಿದ್ದರು. ಚಿಕ್ಕ ವಯಸ್ಸಿನಿಂದಲೇ ಅವರು ದೊಡ್ಡವರ ಬಟ್ಟೆಯನ್ನು ಧರಿಸಬೇಕಾಗಿತ್ತು.

ರಾಬರ್ಟ್ ಅವರು ತಮ್ಮ 22ನೇ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ವೆಬ್ ಸೈಟ್ ಪ್ರಕಾರ, ರಾಬರ್ಟ್ ವಾಡ್ಲೊ ಅವರು ಪಿಟ್ಯುಟರಿ ಗ್ರಂಥಿಯ ಹೈಪರ್ ಪ್ಲಾಸ್ಟಿಯಾ ಸಮಸ್ಯೆಗೆ ತುತ್ತಾಗಿದ್ದರು. ಈ ಕಾರಣದಿಂದಾಗಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾಗಿ ದೈಹಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಿತ್ತು, ಹೀಗಾಗಿ ದೈನಂದಿನ ಕೆಲಸ ಹಾಗೂ ಆಟ-ಪಾಠಗಳಲ್ಲಿ ತೊಡಗಲು ರಾಬರ್ಟ್ ಗೆ ಕಷ್ಟವಾಗಿತ್ತು ಎಂದು ಉಲ್ಲೇಖಿಸಲಾಗಿದೆ. ರಾಬರ್ಟ್ ಅವರ ಬಲಗಾಲಿನ ಮಂಡಿ ನೋವಿಗಾಗಿ ಅಳವಡಿಸಲಾಗಿದ್ದ ಬ್ರೇಸ್ ನಿಂದ ಉಂಟಾಗಿದ್ದ ಗುಳ್ಳೆಗಳು ಉಲ್ಬಣಗೊಂಡು 1940ರ ಜುಲೈ 15ರಂದು ಮಿಚಿಗನ್ ಮೆನಿಟ್ಟಿಯಲ್ಲಿರುವ ಹೋಟೆಲ್ ನಲ್ಲಿ ರಾಬರ್ಟ್ ವಾಡ್ಲೊ ನಿಧನರಾದರು. ಆಗ ಅವರಿಗೆ ಕೇವಲ 22 ವಯಸ್ಸಾಗಿತ್ತು.

ಇದನ್ನೂ ಓದಿ: Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

ರಾಬರ್ಟ್ ಅವರ ಸ್ಮರಣಾರ್ಥವಾಗಿ ಅವರ ಗಾತ್ರದ ಪ್ರತಿಮೆಯನ್ನು 1986ರಲ್ಲಿ ಆಲ್ಟನ್ ಮ್ಯೂಸಿಯಂ ಆಫ್ ಹಿಸ್ಟರಿ ಆಂಡ್ ಆರ್ಟ್ ಮುಂಭಾಗದಲ್ಲಿರುವ ಆಲ್ಟನ್ ನ ಕಾಲೇಜು ಅವೆನ್ಯೂದಲ್ಲಿ ನಿರ್ಮಿಸಲಾಗಿದೆ.

World Tallest Person: Robert Wadlow the tallest man ever was 8 feet 11 inches tall photo gone viral

Comments are closed.