ಸೋಮವಾರ, ಏಪ್ರಿಲ್ 28, 2025
HomeCinemaChiranjeevi Sarja : ಚಂದನವನದಿಂದ ಮರೆಯಾದ ಸ್ಮೈಲ್ ಪ್ರಿನ್ಸ್ : ಚಿರಂಜೀವಿ ಸರ್ಜಾ ಅಗಲಿಕೆ ಎರಡು...

Chiranjeevi Sarja : ಚಂದನವನದಿಂದ ಮರೆಯಾದ ಸ್ಮೈಲ್ ಪ್ರಿನ್ಸ್ : ಚಿರಂಜೀವಿ ಸರ್ಜಾ ಅಗಲಿಕೆ ಎರಡು ವರ್ಷ

- Advertisement -

ಆತ ಸದಾ ನಗುಮೊಗದ ಸರದಾರ. ಸಿನಿಮಾ ಗೆಲ್ಲಲಿ ಬಿಡಲಿ ಮುಖದ ಮೇಲಿನ ನಗು ಮಾಸುತ್ತಿರಲಿಲ್ಲ. ಅಷ್ಟೇ ಯಾವುದೇ ಸ್ಟಾರ್‌ ಗಿರಿ ಮೈಗೂಡಿಸಿಕೊಳ್ಳದ ಸ್ಮೈಲ್ ಕಿಂಗ್ ಗೆ ಗಲ್ಲಿ ಕ್ರಿಕೆಟ್ ನಿಂದ ಆರಂಭಿಸಿ ಐಫೆಲ್ ಟವರ್ ತನಕ ಎಲ್ಲವೂ ಇಷ್ಟವಾಗಿತ್ತು. ಆದರೆ ಆತನ ಈ ಅಜಾತ ಶತ್ರು ವ್ಯಕ್ತಿತ್ವ, ಮುದ್ದಾದ ಸಂಸಾರ ಇನ್ನೇನು ಅಂಗೈಯಲ್ಲಿ ಆಡಬೇಕಿದ್ದ ಮಗು ಬರುವ ಹೊತ್ತಿನಲ್ಲಿ ವಿಧಿಯಾಟಕ್ಕೆ ಬಲಿಯಾದ ನಾಯಕ ಚಿರು ಸರ್ಜಾ. ಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ನಟ ಚಿರು ಸರ್ಜಾ (Chiranjeevi Sarja) ಅಗಲಿಕೆ ಎರಡು ವರ್ಷ ಸಂದಿದ್ದು, ಕುಟುಂಬಸ್ಥರು ಕಣ್ಣೀರಿಡುತ್ತಲೇ ಸಮಾಧಿ ಪೂಜೆಗೆ ಸಿದ್ಧವಾಗಿದ್ದಾರೆ.

Chiranjeevi Sarja second Year Death anniversary
ಚಿರಂಜೀವಿ ಸರ್ಜಾ

ಇನ್ನೇನು ಕೊರೋನಾ ಕಾರ್ಮೋಡ ಸರಿಯುತ್ತಿದೆ ಎನ್ನುವಾಗ ಚಂದನವನಕ್ಕೆ ಅಪ್ಪಳಿಸಿದ್ದು ಸಾವಿನ ಸುನಾಮಿ. ರಾಜಾಮಾರ್ತಾಂಡ ಸಿನಿಮಾ ಶೂಟಿಂಗ್ ಮುಗಿಸಿದ್ದ‌ಚಿರು ಸರ್ಜಾ (Chiranjeevi Sarja) ಗರ್ಭಿಣಿ ಪತ್ನಿಯನ್ನು ತೊರೆದು ಇಹಲೋಕದ ಯಾತ್ರೆ ಮುಗಿಸಿದ್ದ. ಸಡನ್ ಆದ ಹಾರ್ಟ್ ಆಟ್ಯಾಕ್ ನಿಂದ ಚಿರು ತೀರಿಕೊಂಡಿದ್ದರು. ಜೂನ್ 7 , 2020 ರಲ್ಲಿ ನಡೆದ ಈ ಕಹಿ ಘಟನೆಗೆ ಈಗ ಎರಡು ವರ್ಷ. ಕರೋನಾದಿಂದ ಕಳೆದ ವರ್ಷ ಚಿರು ವರ್ಷದ ಪೂಜೆಗೆ ಅಭಿಮಾನಿಗಳಿಗೆ ಅವಕಾಶ ನೀಡಿರಲಿಲ್ಲ. ಪತ್ನಿ ಮೇಘನಾ ಸರ್ಜಾ, ಪುತ್ರ ರಾಯನ್ ರಾಜ್ ಸರ್ಜಾ, ಸುಂದರ ರಾಜ್ ದಂಪತಿಗಳು ಹಾಗೂ ಚಿರು ಸರ್ಜಾ ಕುಟುಂಬಸ್ಥರು ಮಾತ್ರ ಪೂಜೆ ಸಲ್ಲಿಸಿದ್ದರು.

Chiranjeevi Sarja second Year Death anniversary

ಆದರೆ ಈ ವರ್ಷ ಈಗಾಗಲೇ ಸಿದ್ಧವಾಗಿರೋ ಚಿರು ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಲು ಅಭಿಮಾನಿಗಳು ಅವಕಾಶ ಕಲ್ಪಿಸಲಾಗಿದೆಯಂತೆ. ಇದಕ್ಕಾಗಿ ಕನಕಪುರ ಮುಖ್ಯ ರಸ್ತೆಯಲ್ಲಿ ಇರೋ ಕಗ್ಗಲಿಪುರ ಬಳಿಯ ನೆಲಗುಳಿಯಲ್ಲಿ ಸರ್ವ ಸಿದ್ಧತೆ ನಡೆದಿದೆ. ಇದಕ್ಕಾಗಿ ಪ್ರಿನ್ಸ್ ಚಿರು ಸರ್ಜಾನನ್ನು ಗೌರವಿಸಲು ನೀವೆಲ್ಲರೂ ಕೈಜೋಡಿಸಿ ಎಂದು ಅಭಿಮಾನಿಗಳಿಗೆ ಚಿರು ಅಭಿಮಾನಿಗಳ ಸಂಘ ಕರೆ ಕೊಟ್ಟಿದೆ. ಚಿರು ಅಗಲಿಕೆ ಬಳಿಕ ಅವರ ನಟನೆಯ ರಾಜಾಮಾರ್ತಾಂಡ್ ಹಾಗೂ ಶಿವಾರ್ಜುನ್ ಚಿತ್ರಗಳು ತೆರೆಕಂಡಿವೆ. ಅಭಿಮಾನಿಗಳು ಅಗಲಿದ ತಮ್ಮ ನಾಯಕನ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

Chiranjeevi Sarja second Year Death anniversary

ಚಿರು ಅಗಲಿದಾಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ (meghana raj) ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ರಾಯನ್ ರಾಜ್ ಸರ್ಜಾ ಈಗ ಚಿರು (Chiranjeevi Sarja) ಪೋಟೋವನ್ನು ನೋಡಿಕೊಂಡು ಅಪ್ಪಾ ಅಪ್ಪಾ ಎಂದು ಕನವರಿಸುವಷ್ಟು ದೊಡ್ಡವನಾಗಿದ್ದಾನೆ. ಪ್ರೀತಿಸಿ ಮದುವೆಯಾದ ಚಿರುವನ್ನು ಕಳೆದುಕೊಂಡು ಕತ್ತಲಲ್ಲಿ ಮುಳುಗಿದ್ದ ಮೇಘನಾ ಸರ್ಜಾ ಈಗ ನಿಧಾನಕ್ಕೆ ಹೊರಜಗತ್ತಿಗೆ ತಮ್ಮನ್ನು ತಾವು ತೆರೆದುಕೊಂಡಿದ್ದು, ರಿಯಾಲಿಟಿ ಶೋ,ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿ ಪತಿಯ ನೆನಪು ಹಾಗೂ ಪುತ್ರನ ಬಾಲ್ಯದ ಜೊತೆ ದಿನದೂಡುತ್ತಿದ್ದಾರೆ.

ಇದನ್ನೂ ಓದಿ : Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇದನ್ನೂ ಓದಿ : Meghanaraj: ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

Chiranjeevi Sarja second Year Death anniversary

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular