Kuwait Supermarket : ಪ್ರವಾದಿ ಮೊಹಮ್ಮದ್​​ ವಿರುದ್ಧ ಹೇಳಿಕೆಗೆ ಹೆಚ್ಚಿದ ಆಕ್ರೋಶ : ಕುವೈತ್​ನಲ್ಲಿ ಭಾರತೀಯ ಉತ್ಪನ್ನಗಳಿಗೆ ಗೇಟ್​ಪಾಸ್​

Kuwait Supermarket : ಪ್ರವಾದಿ ಮೊಹಮ್ಮದ್​ ಕುರಿತು ಬಿಜೆಪಿ ಮಾಜಿ ವಕ್ತಾರರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಕುವೈತ್​​ನ ಸೂಪರ್​ ಮಾರ್ಕೆಟ್​ಗಳಲ್ಲಿ ಸೋಮವಾರದಿಂದ ಭಾರತೀಯ ಉತ್ಪನ್ನಗಳಿಗೆ ಗೇಟ್​ಪಾಸ್​ ನೀಡಲಾಗಿದೆ ಎಂದು ವರದಿಯಾಗಿದೆ. ಅರ್ದಿಯಾ ಕೋ ಆಪರೇಟಿವ್​ ಸೊಸೈಟಿ ಸ್ಟೋರ್​​ನ ಸಿಬ್ಬಂದಿ ಭಾರತೀಯ ಉತ್ಪನ್ನಗಳನ್ನು ತೆಗೆದು ಟ್ರಾಲಿಗಳಲ್ಲಿ ರಾಶಿ ಹಾಕುತ್ತಿರುವ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗಳ ವಿವಾದವು ಮತ್ತಷ್ಟು ಭುಗಿಲೆದ್ದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡ ಇರಾನ್​ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಸಮಾಧಾನವನ್ನು ಹೊರ ಹಾಕಿತ್ತು. ಇತ್ತ ಸೌದಿ ಅರೇಬಿಯಾ ಕೂಡ ನೂಪುರ್​​ ಶರ್ಮಾರ ಹೇಳಿಕೆಯನ್ನು ಖಂಡಿಸಿವೆ. ನೂಪುರ್​ ಶರ್ಮಾರ ಹೇಳಿಕೆಯ ವಿರುದ್ಧ ಮುಸ್ಲಿಂ ಪ್ರಾಬಲ್ಯ ರಾಷ್ಟ್ರಗಳಿಂದ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.


ಕುವೈತ್​ನ ಹೊರ ಭಾಗದಲ್ಲಿರುವ ಸೂಪರ್​ ಮಾರ್ಕೆಟ್​ಗಳಲ್ಲಿ ಅಕ್ಕಿ ಚೀಲಗಳು, ಮಸಾಲೆ ಪದಾರ್ಥಗಳು ಹಾಗೂ ಕಾರದಪುಡಿಗಳ ಮೇಲೆ ಪ್ಲಾಸ್ಟಿಕ್​ ಹಾಳೆಗಳಿಂದ ಮುಚ್ಚಲಾಗಿದೆ ಹಾಗೂ ನಾವು ಭಾರತೀಯ ಉತ್ಪನ್ನಗಳನ್ನು ತೆಗೆದು ಹಾಕಿದ್ದೇವೆ ಎಂದು ಅರೆಬಿಕ್​ ಭಾಷೆಗಳಲ್ಲಿ ಬರೆದ ಬೋರ್ಡ್​ಗಳನ್ನು ನೇತು ಹಾಕಿದ್ದಾರೆ. ಅಲ್ಲದೇ ಕುವೈತ್​​ನ ಮುಸ್ಲಿಂ ಜನರು ಪ್ರವಾದಿಯನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಸ್ಟೋರ್​ನ ಸಿಇಒ ನಾಸರ್​ ಅಲ್​ ಮುತೈರಿ ಹೇಳಿದ್ದಾರೆ.


ಏನಿದು ವಿವಾದ ?
ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​​ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗಳು ದೇಶ ಹಾಗೂ ವಿದೇಶದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ. ಕಳೆದ ವಾರ ಟಿವಿ ಸಂದರ್ಶನವೊಂದರಲ್ಲಿ ನೂಪುರ್​ ಶರ್ಮಾ ನೀಡಿದ್ದ ಹೇಳಿಕೆಯು ಉತ್ತರ ಪ್ರದೇಶದ ಕಾನ್ಪುರ ಸೇರಿದಂತೆ ವಿವಿಧೆಡೆಗಳಲ್ಲಿ ಘರ್ಷಣೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : Chiranjeevi Sarja : ಚಂದನವನದಿಂದ ಮರೆಯಾದ ಸ್ಮೈಲ್ ಪ್ರಿನ್ಸ್ : ಚಿರಂಜೀವಿ ಸರ್ಜಾ ಅಗಲಿಕೆ ಎರಡು ವರ್ಷ

ಇದನ್ನೂ ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

Kuwait Supermarket Removes Indian Products From Shelves Over Prophet Mohammed Remarks Row

Comments are closed.