ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ (Chiranjeevi Sarja) ಇನ್ನಿಲ್ಲವಾಗಿದ್ದರೂ ಚಂದನವನದಲ್ಲಿ ಚಿರು ಮೇಲೆ ಅಭಿಮಾನಿಗಳಿಗಿರೋ ಪ್ರೀತಿ ಕಡಿಮೆ ಯಾಗಿಲ್ಲ. ಹೀಗಾಗಿ ಇಂದಿಗೂ ಅಭಿಮಾನಿಗಳು ಚಿರುವನ್ನು ಕಣ್ತುಂಬಿಕೊಳ್ಳಲು ಕಾಯುತ್ತಲೇ ಇದ್ದಾರೆ. ಈಗ ಚಿರು ಅಭಿಮಾನಿಗಳ ಕಾಯುವಿಕೆಗೆ ಫಲ ಸಿಕ್ಕಿದ್ದು ಇದೇ ಸಪ್ಟೆಂಬರ್ 2 ರಂದು ಚಿರು ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ತೆರೆಗೆ ಬರಲು ಸಿದ್ಧವಾಗಿದೆ.
ಚಿರಂಜೀವಿ ಸರ್ಜಾ ತುಂಬ ಪ್ರೀತಿಯಿಂದ ಹಾಗೂ ಅಷ್ಟೇ ಇಷ್ಟಪಟ್ಟು ನಟಿಸಿದ್ದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೇ 2019 ರಲ್ಲೇ ತೆರೆಗೆ ಬರಬೇಕಿತ್ತು. ಆದರೆ ವಿಧಿಯಾಟ ದಿಂದ ಚಿರು ಸಿನಿಮಾ ತೆರೆಗೆ ಬರೋ ಮುನ್ನವೇ ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ. ಈಗ ಚಿರು ನಿಧನದ ಎರಡು ವರ್ಷದ ಬಳಿಕ ಚಿರು ನಟಿಸಿದ್ದ ಕೊನೆಯ ಸಿನಿಮಾ ರಾಜ ಮಾರ್ತಾಂಡ್ ತೆರೆಗೆ ಬರಲು ಸಿದ್ಧವಾಗಿದೆ. ಈ ವಿಚಾರವನ್ನು ಸ್ವತಃ ಚಿರು ಸಹೋದರ ಹಾಗೂ ನಟ ಧ್ರುವ್ ಸರ್ಜಾ ಖಚಿತಪಡಿಸಿದ್ದು, ಟ್ವಿಟ್ ಮೂಲಕ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಜಮಾರ್ತಾಂಡ್ ಶೂಟಿಂಗ್ ಬಹುತೇಕ ಮುಕ್ತಾಯಗೊಂಡು ಡಬ್ಬಿಂಗ್ ಹಂತದಲ್ಲಿರುವಾಗ ಚಿರು ಹೃದಯಾಘಾತದಿಂದ ಸ್ಯಾಂಡಲ್ ವುಡ್ ನ್ನು ಅಗಲಿದ್ದರು. ಈ ವೇಳೆ ಚಿತ್ರತಂಡ ಕಂಗಲಾಗಿತ್ತು. ಆದರೆ ಚಿತ್ರ ತಂಡದ ಬೆಂಬಲಕ್ಕೆ ನಿಂತಿದ್ದ ಧ್ರುವ್ ಸರ್ಜಾ ಅಣ್ಣನ ಪಾತ್ರಕ್ಕೆ ಡಬ್ ಮಾಡೋದಾಗಿ ಮಾತುಕೊಟ್ಟಿದ್ದರು. ನುಡಿದಂತೆ ನಡೆದ ಧ್ರುವ್ ಸರ್ಜಾ , ಡಬ್ಬಿಂಗ್ ಮಾಡಿಕೊಟ್ಟಿದ್ದಾರಂತೆ. ಅಲ್ಲದೇ ನಟ ದರ್ಶನ್ ಕೂಡ ಡಬ್ಬಿಂಗ್ ಮಾಡಿದ್ದಾರಂತೆ.
ಈ ಮಧ್ಯೆ ರಾಜ ಮಾರ್ತಾಂಡ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಚಾರವನ್ನು ಸ್ವತಃ ನಿರ್ಮಾಪಕ, ನಿರ್ದೇಶಕರು ಖಚಿತಪಡಿಸಿದ್ದಾರೆ. ರು ಈ ಸಿನಿಮಾವನ್ನು ಅತ್ಯಂತ ಹೆಚ್ಚು ಪ್ರೀತಿಸಿದ್ದು ಒಂದೊಂದು ಡೈಲಾಗ್ ನ್ನು ಕೂಡ ಮನೆಯಲ್ಲಿ ಆಗಾಗ ಹೇಳಿ ಸಂಭ್ರಮಿಸುತ್ತಿದ್ದರಂತೆ. ಹೀಗಾಗಿ ಈ ಸಿನಿಮಾವನ್ನು ಗೆಲ್ಲಿಸಿ ಎಂದು ಚಿರು ಹಾಗೂ ಮೇಘನಾ ಕುಟುಂಬ ಈ ಹಿಂದೆಯೇ ಮನವಿ ಮಾಡಿದೆ.
🙏 RELEASING ON 02/09/2022 🙏 pic.twitter.com/X4ixtkbai6
— Dhruva Sarja (@DhruvaSarja) June 23, 2022
ಚಿರು ಹುಟ್ಟುಹಬ್ಬದ ವೇಳೆಯೇ ರಾಜಮಾರ್ತಾಂಡ ಸಿನಿಮಾ ತೆರೆಗೆ ಬರಬೇಕಿತ್ತಾದರೂ ಕೊರೋನಾ ಹಾಗೂ ಥಿಯೇಟರ್ ಗಳತ್ತ ಜನರು ಬಾರದೇ ಇರೋ ಕಾರಣಕ್ಕೆ ರಿಲೀಸ್ ಆಗಿರಲಿಲ್ಲ. ಈಗ ಸಪ್ಟೆಂಬರ್ 2 ನೇ ತಾರೀಕು ಸಿನಿಮಾ ರಿಲೀಸ್ ಆಗಲಿದೆ. ಇದು ಚಿರು ಕೊನೆಯ ಸಿನಿಮಾ ಆಗಿರೋದರಿಂದ ಅಭಿಮಾನಿಗಳು ನೋಡಿ ಎಂಜಾಯ್ ಮಾಡಿ ಎಂದು ಚಿತ್ರತಂಡ ಮನವಿ ಮಾಡಿದೆ.
ಇದನ್ನೂ ಓದಿ : ಡ್ಯಾನ್ಸ್ ಕಿಂಗ್ ಜೊತೆ ಹ್ಯಾಟ್ರಿಕ್ ಹೀರೋ : ಶಿವರಾಜ್ ಕುಮಾರ್, ಪ್ರಭುದೇವ, ಯೋಗರಾಜ್ ಭಟ್ರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ
ಇದನ್ನೂ ಓದಿ : Digant’s health : ಪತಿ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಐಂದ್ರಿತಾ ರೇ
Chiranjeevi Sarja dream come true, Good news give Dhruva Sarja About Rajamartanda