Titanic Theatrical Release : 2023 ರ ಪ್ರೇಮಿಗಳದಿನದಂದು ಮತ್ತೆ ತೆರೆಗೆ ಬರಲಿದೆ ಟೈಟಾನಿಕ್

ಟೈಟಾನಿಕ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ ಭಾಷೆ ಬಾರದೇ ಇದ್ದವರೂ ಸಿನಿಮಾವನ್ನು ನೋಡಿ ಅದರ ಶ್ರೀಮಂತಿಕೆಗೆ ತಲೆದೂಗಿದ್ದರು. ಟೈಟಾನಿಕ್ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿದ್ದರೂ ಈಗಲೂ ಜನರು ಆ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ. ಹೀಗೆ ಟೈಟಾನಿಕ್ ಸಿನಿಮಾವನ್ನು ಪ್ರೀತಿಸುವ ಪ್ರೇಮಿಗಳಿಗಾಗಿ ಸಿಹಿಸುದ್ದಿ ಯೊಂದು ಕಾದಿದೆ. ಹೌದು ಪ್ರೇಮಿಗಳ ಮನಸೊರೆಗೊಂಡ ಈ ಸಿನಿಮಾ 2023 (Titanic Theatrical Release) ರ ಪ್ರೇಮಿಗಳ ದಿನಾಚರಣೆಯ ಹೊತ್ತಿಗೆ ಹೊಸ ರೂಪದಲ್ಲಿ ತೆರೆಗೆ ಬರಲಿದೆ.

1997 ರಲ್ಲಿ ತೆರೆಗೆ ಬಂದ ಟೈಟಾನಿಕ್ ಮೇಕಿಂಗ್ ಸೇರಿದಂತೆ ನಾನಾ ಕಾರಣಕ್ಕೆ ಚಿತ್ರರಸಿಕರ ಮನಗೆದ್ದಿತ್ತು. ಐಕಾನಿಕ್ ಸಿನಿಮಾಗಳ ಸಾಲಿಗೆ ಸೇರಿದ ಈ ಸಿನಿಮಾ ಈಗ ಮತ್ತೊಮ್ಮೆ ರಿಲೀಸ್ ಆಗಲಿದೆ. ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಮೂಡಿ ಬಂದ‌ ಈ ಸಿನಿಮಾ, ಹಲವು ಬದಲಾವಣೆಗಳೊಂದಿಗೆ ಮುಂದಿನ ವರ್ಷದ ಪ್ರೇಮಿಗಳ ದಿನಾಚರಣೆಗೆ ತೆರೆಗೆ ಬರಲಿದೆ. ರೋಸ್ ಹಾಗೂ ಜ್ಯಾಕ್ ಎಂಬ ಪ್ರೇಮಿಗಳ ಪ್ರೇಮ ಕತೆಯನ್ನು ಆಧರಿಸಿದ ಈ ಸಿನಿಮಾ ಪ್ರೇಮಿಗಳ ಕತೆಯ ಜೊತೆ ವಿಶ್ವದ ಅದ್ಭುತವಾದ ಹಡಗು ಟೈಟಾನಿಕ್ ಹೇಗೆ ನಾಶವಾಯಿತು ಎಂಬುದನ್ನು ಈ ಸಿನಿಮಾ ಹೇಳಿತ್ತು.

ಈ ಸಿನಿಮಾ ರಿಲೀಸ್ ಆಗಿದ್ದು 1997 ರಲ್ಲಿ. ಆಗ ತಂತ್ರಜ್ಞಾನ ಇಷ್ಟು ಮುಂದುವರಿದಿರಲಿಲ್ಲ. ಹೀಗಾಗಿ ಈಗ ಈ ಸಿನಿಮಾದ ಸಂಗೀತ ಸೇರಿದಂತೆ ಎಲ್ಲವನ್ನು ಉನ್ನತ ದರ್ಜೆಗೇರಿಸಿ ರೀ ರಿಲೀಸ್ ಮಾಡಲಾಗುತ್ತಿದೆ. ಇದಕ್ಕೆ ರೀ ಮಾಸ್ಟರ್ಡ್ ಎನ್ನಲಾಗುತ್ತದೆ. ರೀ ಮಾಸ್ಟರ್ಡ್ ಟೈಟಾನಿಕ್ ಸಿನಿಮಾವನ್ನು ಆಧುನಿಕ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಮಾಡಿ, ಟೈಟಾನಿಕ್ ನನ್ನು ತ್ರೀ ಡಿ,4ಕೆ ಹಾಗೂ ಎಚ್.ಡಿ.ಆರ್ ಅವತರಣಿಕೆಯಲ್ಲಿ ರೀಲಿಸ್ ಆಗಲಿದೆ.

ಟೈಟಾನಿಕ್ ಸಿನಿಮಾ ರೀ ರೀಲಿಸ್ ಆಗ್ತಿರೋದು ಇದೇ ಮೊದಲಲ್ಲ. 2012 ರಲ್ಲಿ ಮೊದಲ ಬಾರಿಗೆ ಈ ಸಿನಿಮಾ ತ್ರೀಡಿ ತಂತ್ರಜ್ಞಾನದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಇದುವರೆಗೂ ಬರೋಬ್ಬರಿ 17,226 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರಕ್ಕೆ ಇದುವರೆಗೂ ಬರೋಬ್ಬರಿ 11 ಆಸ್ಕರ್ ಅವಾರ್ಡ್ ಬಂದಿದೆ. ಹಾಗೇ ನೋಡಿದ್ರೇ ಹಳೆ ಸಿನಿಮಾಗಳು ರೀ ರೀಲಿಸ್ ಅಗ್ತಿರೋದು ಇದೇ ಮೊದಲಲ್ಲ.‌ಕನ್ನಡದಲ್ಲೂ ಇಂಥಹ ತಂತ್ರಜ್ಞಾನದ ಬಳಕೆಯಾಗಿದ್ದು, ನಾಗರಹಾವು ಸಿನಿಮಾವನ್ನು ರೀ ಮಾಸ್ಟರ್ಡ್ ಮಾಡಲಾಗಿದೆ.‌ ವರನಟ ಡಾ.ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಕೂಡ ರೀ ಮಾಸ್ಟರ್ಡ್ ತಂತ್ರಜ್ಞಾನದಲ್ಲಿ ತೆರೆ ಕಂಡಿದೆ.

ಇದನ್ನೂ ಓದಿ : ಡ್ಯಾನ್ಸ್ ಕಿಂಗ್ ಜೊತೆ ಹ್ಯಾಟ್ರಿಕ್ ಹೀರೋ : ಶಿವರಾಜ್‌ ಕುಮಾರ್‌, ಪ್ರಭುದೇವ, ಯೋಗರಾಜ್‌ ಭಟ್ರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ

ಇದನ್ನೂ ಓದಿ : Chiranjeevi Sarja : ಕೊನೆಗೂ ನನಸಾಯ್ತು ಚಿರಂಜೀವಿ ಸರ್ಜಾ ಕನಸು : ಧ್ರುವ ಸರ್ಜಾ ಕೊಟ್ರು ಸಿಹಿಸುದ್ದಿ

Titanic Theatrical Release Remastered version Valentines Day 2023

Comments are closed.