ಇಂದು ಫ್ರೆಂಡ್‍ಶಿಪ್ ಡೇ. ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರುವನ್ನು ನೆನೆದಿದ್ದಾರೆ. ಅಲ್ಲದೇ ಫ್ರೆಂಡ್‍ಶಿಪ್ ಡೇಗೆ ವಿಶೇಷ ಫೋಟೋವನ್ನು ಶೇರ್ ಮಾಡಿ ಚಿರು ಸ್ನೇಹದ ಭಾವನಾತ್ಮಕ ಬರಹಗಳನ್ನೂ ಬರೆದಿದ್ದಾರೆ.

ಮೇಘನಾ ರಾಜ್ ಸರ್ಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫ್ರೆಂಡ್‌ಶಿಪ್ ಡೇಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಸ್ನೇಹಿತರಾಇದ್ದರು. ನಂತರ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದು ಮದುವೆಯಾಗಿದ್ದರು. ಮದುವೆಯಾದ ನಂತರವೂ ಸ್ನೇಹಿ, ಪ್ರೀತಿಯ ಸಮ್ಮಿಲನದೊಂದಿಗೆ ಮೇಡ್ ಫಾರ್ ಈಚ್ ಅದರ್ ಅನ್ನೋ ಪದಕ್ಕೆ ಅರ್ಥವನ್ನು ಕೊಟ್ಟಿದ್ದಾರೆ.
ಚಿರು ಬದುಕ್ಕಿದ್ದಾಗಲೂ ಸ್ನೇಹಿತರ ದಿನಕ್ಕೆ ವಿಶಿಷ್ಟವಾಗಿ ಶುಭಾಶಯವನ್ನು ಕೋರುತ್ತಿದ್ದ ಮೇಘನಾರಾಜ್ ಇಂದು ಕೂಡ ಸ್ನೇಹಿತರ ದಿನದಂದು ಚಿರುವನ್ನು ನೆನೆದಿದ್ದಾರೆ. ಚಿರಂಜೀವಿ ಸರ್ಜಾ ಜತೆ ಇರುವ ಫೋಟೋವನ್ನು ಮೇಘನಾ ಪೋಸ್ಟ್ ಮಾಡಿದ್ದಾರೆ. ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ಮೇಘನಾ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಚಿರು ಯಾವಾಗಲೂ ನಮ್ಮ ಜೊತೆ ಇರುತ್ತೀರಿ ಎಂದು ಬರೆದುಕೊಂಡಿದ್ದಾರೆ.
ಚಿರು ಇಂದು ನಮ್ಮ ಜೊತೆಗಿಲ್ಲ. ಆದರೂ ಮೇಘನಾ ರಾಜ್ ಚಿರುವಿನ ನೆನಪಲ್ಲೇ ದಿನವನ್ನು ಕಳೆಯುತ್ತಿದ್ದಾರೆ. ಒಂದಿಲ್ಲೊಂದು ವಿಶೇಷ ದಿನಗಳಂದು ಚಿರುವನ್ನು ನೆನೆಪು ಪೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಸದ್ಯದಲ್ಲಿಯೇ ಚಿತ್ರರಂಗಕ್ಕೆ ಮರಳುತ್ತೇನೆ ಎನ್ನುವ ಮೂಲಕ ಮೇಘನಾ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದರು. ಇದೀಗ ಫ್ರೆಂಡ್ ಶಿಪ್ ಡೇ ಗೆ ವಿಶೇಷವಾಗಿ ಚಿರುವಿಗೆ ಶುಭಾಶಯ ಕೋರಿದ್ದಾರೆ.