ಚಿರಂಜೀವಿ ಸರ್ಜಾ (Chiranjeevi Sarja). ಸ್ಯಾಂಡಲ್ ವುಡ್ ನ ಸೈಲಿಂಗ್ ಸ್ಟಾರ್. ಬದುಕಿದ್ದರೇ ಇಂದು ಮೂವತ್ತೊಂಬತ್ತನೇ ವಸಂತ ಕ್ಕೆ ಕಾಲಿರಿಸುತ್ತಿದ್ದರು. ಆದರೆ ವಿಧಿಯಾಟ ನಗುವಿನ ಜಾಗದಲ್ಲಿ ಚಿರಶಾಂತಿ ತುಂಬಿದೆ. ಅಷ್ಟೇ ಅಲ್ಲ ಚಿರು ಜೊತೆ ಕಟ್ಟಿದ್ದ ಕನಸುಗಳು ಕನಸಾಗಿಯೇ ಉಳಿದಿದೆ. ಅದರಲ್ಲೂ ಆಕ್ಷ್ಯನ್ ಕಿಂಗ್ ಅರ್ಜುನ್ ಸರ್ಜಾ ಕನಸೊಂದು ಚಿರು ನಿಧನದ ಜೊತೆ ಅಪೂರ್ಣವಾಗಿದ್ದು , ಅಗಲಿದ ಅಳಿಯನ ನೆನೆದು ಅರ್ಜುನ್ ಸರ್ಜಾ (Arjun Sarja) ಆಗಾಗ ಕಣ್ಣೀರಾಗುತ್ತಾರೆ

ಚಿರು ಸರ್ಜಾ. ಅರ್ಜುನ್ ಸರ್ಜಾ ಕುಟುಂಬದ ಕುಡಿ. ಯಾವುದೇ ಸ್ಟಾರ್ ಗಿರಿಯ ಹಮ್ಮುಬಿಮ್ಮು ಇಲ್ಲದ ಪಕ್ಕದ ಮನೆಯ ಹುಡುಗನಂತಹ ನಾಯಕನಟ. ವಿಭಿನ್ನ ಸಿನಿಮಾಗಳು, ನೊರೆಂಟು ಕನಸುಗಳ ಜೊತೆ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ. ಮಾಡಬೇಕಿದ್ದ ಸಿನಿಮಾ,ನೋಡಬೇಕಿದ್ದ ಖುಷಿಯ ದಿನಗಳು ಸಾಕಷ್ಟಿತ್ತು.
ಆದರೆ ಯಮನ ರೂಪದಲ್ಲಿ ಬಂದ ಹೃದಯಾಘಾತ ಚಿರುವನ್ನು ಇನ್ನಿಲ್ಲವಾಗಿಸಿತು. ಇದರೊಂದಿಗೆ ಇನ್ನೇನು ತಾಯಿಯಾಗಬೇಕಿದ್ದ ಪತ್ನಿ, ಹೆತ್ತವರು, ಕುಟುಂಬಸ್ಥರು ಸಾವಿರಾರು ಅಭಿಮಾನಿಗಳು ಎಲ್ಲರನ್ನೂ ತೊರೆದು ಚಿರು ಚಿರನಿದ್ರೆಗೆ ಜಾರಿದರು. ಈಗ ಚಿರು ನೆನಪುಗಳು ಹಾಗೂ ಅವರು ನಟಿಸಿದ ಸಿನಿಮಾಗಳು ಮಾತ್ರ ಕನ್ನಡ ಸಿನಿಪ್ರೇಮಿಗಳ ಪಾಲಿಗೆ ಉಳಿದಿರೋದು.
ಇದನ್ನೂ ಓದಿ : ಸಿನಿಮಾ ಶೂಟಿಂಗ್ ಬ್ರೇಕ್ ನಲ್ಲಿ ಹೇಗಿರುತ್ತೆ ಮೇಘನಾ ರಾಜ್ ದಿನಚರಿ ? ಇಲ್ಲಿದೆ ಎಕ್ಸ್‌ಕ್ಲೂಸಿವ್ ವಿಡಿಯೋ
ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ಚಿರು ನಿಧನರಾದ ಮೂರು ವರ್ಷಗಳ ಬಳಿಕ ಮೊನ್ನೆ ಮೊನ್ನೆಯಷ್ಟೇ ಚಿರು ಅಭಿನಯದ ಕೊನೆಯ ಚಿತ್ರ ರಾಜಾ ಮಾರ್ತಾಂಡ ತೆರೆ ಕಂಡಿದೆ. ಚಿರು ನಿಧನದ ಜೊತೆ ಅವರ ಕುಟುಂಬದ ನೊರೆಂಟು ಕನಸುಗಳು ಕಮರಿ ಹೋಗಿವೆ. ಈ ಪೈಕಿ ಚಿರು ಹಾಗೂ ಧ್ರುವ್ ಸರ್ಜಾರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ತೆರೆ ಮೇಲೆ ನೋಡಬೇಕೆಂಬ ಅರ್ಜುನ್ ಸರ್ಜಾ ಕನಸು ಕೂಡ ಕನಸಾಗಿಯೇ ಉಳಿದಿದೆ.

ಚಿರು ಸರ್ಜಾ ಮೊದಲು ಸಹನಟರಾಗಿ ತಮ್ಮ ಸಿನಿಕೆರಿಯರ್ ಆರಂಭಿಸಿದರು. ಬಳಿಕ ನಾಯಕ ನಟರಾದರು. ಇವರ ಬಳಿಕ ಚಿರು ಸಹೋದರ ಧ್ರುವ್ ಸರ್ಜಾ ಕೂಡ ಸಿನಿ ಕೆರಿಯರ್ ನಲ್ಲಿ ತಮ್ಮ ಹೆಗ್ಗುರುತು ಮೂಡಿಸಿದರು. ಇಬ್ಬರೂ ಸಹೋದರರು ಸಿನಿಮಾ ಲೋಕಕ್ಕೆ ಕಾಲಿಡುತ್ತಿದ್ದಂತೆ ಅರ್ಜುನ್ ಸರ್ಜಾ ಇಬ್ಬರೂ ನಟರನ್ನು ಒಂದೇ ಸಿನಿಮಾದಲ್ಲಿ ತೆರೆಗೆ ತರೋ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಕಾಲ ಕೂಡಿ ಬಂದಿರಲಿಲ್ಲ.
ಇದನ್ನೂ ಓದಿ : ಮೇಘನಾ ರಾಜ್ ಸರ್ಜಾ ಮನಗೆದ್ದ ಮಾತು ! ಅಶ್ವಿನಿ ಪುನೀತ್ ರಾಜ್ ಕುಮಾರ್ ಕೊಟ್ಟ ಪ್ರೇರಣೆ ನೆನೆದ ಕುಟ್ಟಿಮಾ
ಮೊದಲು ಚಿರು ಹಾಗೂ ಧ್ರುವ್ ಸರ್ಜಾ ಡೇಟ್ ಹೊಂದಾಣಿಕೆಯಾಗಿರಲಿಲ್ಲ. ಬಳಿಕ ಮಹಾಮಾರಿ ಕೊರೋನಾ ಆವರಿಸಿತ್ತು. ಹೀಗಾಗಿ ಅರ್ಜುನ್ ಸರ್ಜಾ ತಮ್ಮ ಪ್ಲ್ಯಾನ್ ನ್ನು ಕೆಲ ದಿನಗಳ ಕಾಲ ಮುಂದೂಡಿದ್ದರು. ಆದರೆ 2020 ರ ಜೂನ್ ನಲ್ಲಿ ನಡೆದ ಘಟನೆ ಅರ್ಜುನ್ ಕನಸನ್ನು ಶಾಶ್ವತವಾಗಿ ಕನಸಾಗಿಯೇ ಉಳಿಸಿಬಿಟ್ಟಿತ್ತು.
ಇತ್ತೀಚಿಗೆ ತೆರೆಕಂಡ ರಾಜಾಮಾರ್ತಾಂಡ ಸಿನಿಮಾ ರಿಲೀಸ್ ವೇಳೆ ನಟ ಅರ್ಜುನ್ ಸರ್ಜಾ ತಮ್ಮ ಈ ಕನಸನ್ನು ಹಂಚಿಕೊಂಡಿದ್ದರು. ನನಗೆ ಚಿರು ಹಾಗೂ ಧ್ರುವ್ ನನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡುವ ಆಸೆ ಇತ್ತು. ಆದರೆ ವಿಧಿಯಾಟದಿಂದ ಈ ಕನಸು ಈಡೇರಲಿಲ್ಲ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್
ಆದರೆ ರಾಜಾಮಾರ್ತಾಂಡ ಸಿನಿಮಾದಲ್ಲಿ ಈ ಕನಸಿನ ಕೊಂಚ ಭಾಗ ಈಡೇರಿದಂತಿದೆ. ಕನಿಷ್ಠ ಅಣ್ಣನ ಸಿನಿಮಾದಲ್ಲಿ ತಮ್ಮನ ಧ್ವನಿ ಕೇಳುವ ಭಾಗ್ಯ ದೊರೆತಿದೆ. ಇದರಲ್ಲೇ ಸಮಾಧಾನ ಪಡಬೇಕು. ನೀವೆಲ್ಲರೂ ಸಿನಿಮಾ ನೋಡಿ ಆಶೀರ್ವದಿಸಿ ಎಂದಿದ್ದರು.
ಹಾಗೇ ನೋಡಿದರೇ ಸ್ಯಾಂಡಲ್ ವುಡ್ ನಲ್ಲಿ ಈ ಸಹೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಕನಸುಗಳೆಲ್ಲ ಕನಸಾಗಿಯೇ ಉಳಿದಂತಿದೆ. ಯಾಕೆಂದರೇ ಪುನೀತ್ ಹಾಗೂ ಸಹೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಸೆಯೂ ಈಡೇರಲೇ ಇಲ್ಲ.
Chiranjeevi Sarja with Dhruva Sarja Do you know father-in-law Arjun Sarja dream about sons-in-law