ಸ್ಯಾಂಡಲ್ ವುಡ್ ನಟ ಚಿರಂಜಿವಿ ಸರ್ಜಾ ಅವರ ಹೆಸರನ್ನು ಡ್ರಗ್ಸ್ ಮಾಫಿಯಾದಲ್ಲಿ ಪ್ರಸ್ತಾಪವಾಗುತ್ತಿರುವ ಕುರಿತು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಚಿರು ಸರ್ಜಾ ನನಗೆ ಬೇಕಾದ ಹುಡುಗ, ನನ್ನ ತಮ್ಮನ ಹಾಗೆ. ಸರ್ಜಾ ಇಂದು ನಮ್ಮೊಂದಿಗಿಲ್ಲ. ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ದುಖಃದಿಂದ ಅವರ ಕುಟುಂಬ ಹೊರಬಂದಿಲ್ಲ. ಪತ್ನಿ, ತಮ್ಮ ಮನೆಯವರು ದುಖಃದಲ್ಲಿದ್ದಾರೆ. ಹೀಗಾಗಿ ಸರ್ಜಾ ವಿಚಾರವನ್ನು ಕೆದಕುವುದು ಬೇಡಾ ಅಂತ ಅಭಿನಯ ಚಕ್ರವರ್ತಿ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

ತನ್ನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಸುದೀಪ್ ಮಾಧ್ಯಮದವರೊಂದಿಗೆ ಮಾತನಾಡಿದ್ರು. ನನಗೆ ಡ್ರಗ್ಸ್ ಮಾಫಿಯಾದ ಬಗ್ಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಬಾರದು. ಹೀಗಾಗಿ ಡ್ರಗ್ಸ್ ಮಾಫಿಯಾ ವಿಚಾರವಾಗಿ ಮಾತನಾಡುವುದಿಲ್ಲ.

ನನಗೆ ಪೊಲಿಟಿಕಲ್ ಪಾರ್ಟಿಯ ಬಗ್ಗೆ ಗೊತ್ತಿದೆ. ಬೇರೆ ಪಾರ್ಟಿಯ ಬಗ್ಗೆ ಗೊತ್ತಿಲ್ಲ. ಪೊಲಿಟಿಕಲ್ ಪಾರ್ಟಿಯಿಂದ ನನಗೆ ಆಫರ್ ಬಂದಿದೆ. ನಾನೀಗ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ನಾನು 1 ಹೆಜ್ಜೆ ಮುಂದಿಟ್ಟಿರೆ ನನ್ನ ಬೆಂಬಲಿಗರು 10 ಹೆಜ್ಜೆ ಮುಂದಿಡುತ್ತಿದ್ದಾರೆ. ನನ್ನ ಜೊತೆಗೆ ಬೆಂಬಲಿಗರು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಇನ್ನು ಇಂದ್ರಜಿತ್ ಲಂಕೇಶ್ ಹಾಗೂ ನನ್ನ ಸ್ನೇಹದ ಬಗ್ಗೆ ಯಾರೂ ಕೂಡ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಇಂದ್ರಜಿತ್ ಲಂಕೇಶ್ ಅವರಿಗಾಗಲಿ, ಇಂದ್ರಜಿತ್ ಲಂಕೇಶ್ ನನಗೆ ಆಗಲಿ ಡಿಫೆಂಡ್ ಆಗಿಲ್ಲ. ಒಮ್ಮೊಮ್ಮೆ ಹೆಂಡತಿ ಹೇಳಿದ ಮಾತನ್ನೇ ಕೇಳುವುದಿಲ್ಲ. ಹೀಗಾಗಿ ಯಾರೂ ಕೂಡ ಇಂದ್ರಜಿತ್ ಸ್ನೇಹದ ಬಗ್ಗೆ ತಪ್ಪಾಗಿ ತಿಳಿಯುವುದು ಬೇಡಾ ಅಂದಿದ್ದಾರೆ.

ನಾನು ಕೂಡ ಚಿತ್ರರಂಗದವನೇ ಆದರೂ ನಾನು ಡ್ರಗ್ ಸ್ಟಾರ್ ಬಗ್ಗೆ ಮಾತನಾಡುವುದಿಲ್ಲ. ಮನುಷ್ಯನ ಮುಖದಲ್ಲಿ ರಿಂಕಲ್ ಕಾಣಿಸಿಕೊಳ್ಳುತ್ತದೆ. ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಿದ್ದ ಮೇಲೆ ಬೇರೆ ವಿಚಾರಗಳೆಲ್ಲಾ ಯಾಕೆ ಎಂದಿದ್ದಾರೆ ಎಂದು ಬಿಗ್ ಸ್ಟಾರ್ ನಟನಿಗೆ ಸುದೀಪ್ ಟಾಂಗ್ ಕೊಟ್ಟಿದ್ದಾರೆ.

ಇನ್ನು ಜೂಜು ವಿಚಾರವಾಗಿ ನಟ ಚೇತನ್ ಗೆ ಟಾಂಗ್ ಕೊಟ್ಟಿರುವ ಸುದೀಪ್, ಚೇತನ್ ಮೋದಿ ಅವರಿಗೆ ಹೇಳಿರಬೇಕು. ಹೇಳುವವರು ಡೈರೆಕ್ಟ್ ಆಗಿ ಹೇಳಬೇಕು. ಯಾರೇ ಆಗಲಿ ಹೇಳುವುದನ್ನ ನೇರವಾಗಿ ಹೇಳಿ. ಜೂಜು ಆ್ಯಡ್ಸ್ ನಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿಕೊಂಡಿದ್ದೇನೆ ಎಂದಿದ್ದಾರೆ.