ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಸಾವು ಚಿತ್ರರಂಗವನ್ನೇ ದುಃಖದ ಮಡುವಲ್ಲಿ ಮಲಗಿಸಿದೆ. ಕನ್ನಡ ಚಿತ್ರರಂಗ ಯುವ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿದ್ದ ಚಿರು ಸಾಕಷ್ಟು ಕನಸುಗಳನ್ನು ಹೊತ್ತಿದ್ರು. ಆದ್ರೆ ಚಿರಂಜೀವಿ ಸರ್ಜಾ ಕಂಡಿದ್ದ ಆ ಕನಸು ಮಾತ್ರ ಕೊನೆಗೂ ನನಸಾಗಲೇ ಇಲ್ಲ.

ಚಿರು ಸಾವಿನ ಬೆನ್ನಲ್ಲೇ ಅಭಿಮಾನಿಗಳು ಚಿರಂಜೀವಿ ಸರ್ಜಾ ನೆನಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನೆಚ್ಚಿನ ನಟನನ್ನು ಕಳೆದುಕೊಂಡು ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಚಿತ್ರರಂಗದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದ ಚಿರಂಜೀವಿ ಸರ್ಜಾ ದೊಡ್ಡೋರು ಅನ್ನೋ ಸಿನಿಮಾವನ್ನು ಮಾಡಲು ಸಾಕಷ್ಟು ಉತ್ಸುಕರಾಗಿದ್ದರು. ಮಾತ್ರವಲ್ಲ ಕಥೆ ಸಾಕಷ್ಟು ಇಷ್ಟವಾಗಿದ್ದರಿಂದಲೇ ಚಿರು ಚಿತ್ರದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು.

ಚಿತ್ರತಂಡ ಈಗಾಗಲೇ ಚಿತ್ರರ ಟ್ರೈಲರ್, ಟೈಟಲ್ ಸಾಂಗ್ ಕೂಡ ರೆಡಿಮಾಡಿತ್ತು. ರಾಪರ್ ಚಂದನ್ ಶೆಟ್ಟಿ ಧ್ವನಿಯಲ್ಲಿ ಟೈಟಲ್ ಸಾಂಗ್ ಅದ್ಬುತವಾಗಿ ಮೂಡಿಬಂದಿತ್ತು. ಇದನ್ನು ನೋಡಿದ್ದ ಚಿರು ಸಾಕಷ್ಟು ಖುಷಿಪಟ್ಟಿದ್ದರು.

ಆದ್ರೆ ದೊಡ್ಡೋರು ಸಿನಿಮಾ ಸೆಟ್ಟೇರುವ ಮೊದಲೇ ಚಿರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ದೊಡ್ಡೋರು ಸಿನಿಮಾ ನಿರ್ದೇಶಕ ಹರಿ ಸಂತೋಷ್ ಚಿರಂಜೀವಿ ಸರ್ಜಾ ಸಾವು ದುಃಖದ ಮಡುವಲ್ಲಿ ಮಲಗಿಸಿದೆ.

ಇದೀಗ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡುವ ಮೂಲಕ ಅಗಲಿದ ನಟನಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.