ಸೋಮವಾರ, ಏಪ್ರಿಲ್ 28, 2025
HomeCinemaRayan Raj Sarja superstar : ಚಿರು- ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಸೂಪರ್...

Rayan Raj Sarja superstar : ಚಿರು- ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಸೂಪರ್ ಸ್ಟಾರ್ ಆಗ್ತಾನೆ : ಸುಂದರರಾಜ್ ಭವಿಷ್ಯ

- Advertisement -

Rayan Raj Sarja superstar : ನಟಿ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಸ್ಯಾಂಡಲ್ ವುಡ್ ಕಂಡ ಪ್ರತಿಭಾನ್ವಿತ ಸ್ಟಾರ್ ದಂಪತಿ. ಚಿರು ಅಕಾಲಿಕವಾಗಿ ಅಗಲಿ ಹೋದರೂ ಬದುಕನ್ನು ಧೈರ್ಯವಾಗಿ ಎದುರಿಸುತ್ತಿರುವ ನಟಿ ಮೇಘನಾ ಚಿರುವಿನ ತದ್ರೂಪದಂತಿರೋ ಮಗನನ್ನು ಹೆತ್ತು ರಾಯನ್ ಸರ್ಜಾ ಎಂದು ಹೆಸರಿಟ್ಟು ಮುದ್ದಾಗಿ ಬೆಳೆಸುತ್ತಿದ್ದಾರೆ. ಈ ಮಧ್ಯೆ ನಟನೆಯ ಹಿನ್ನೆಲೆಯ ಕುಟುಂಬದಲ್ಲೇ ಜನಿಸಿದ ರಾಯನ್ ರಾಜ್ ಸರ್ಜಾ ಸೂಪರ್ ಸ್ಟಾರ್ ಆಗುತ್ತಾನೆ ಎಂದು ಸುಂದರ ರಾಜ್ ಭವಿಷ್ಯ ನುಡಿದಿದ್ದಾರೆ.

ನಟಿ ಮೇಘನಾ ರಾಜ್ ಸರ್ಜಾ ನಟನೆಯನ್ನೇ ವೃತ್ತಿಯಾಗಿಸಿಕೊಂಡ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ದಂಪತಿಯ ಮಗಳು. ಚಿಕ್ಕಂದಿನಿಂದಲೂ ನಟನೆಯ ವಾತಾವರಣದಲ್ಲೇ ಬೆಳೆದ ಮೇಘನಾ ಕೂಡ ನಟನೆಯನ್ನೇ ಆಯ್ದುಕೊಂಡರು. ಮಾತ್ರವಲ್ಲ ನಟನೆಯ ಹಿನ್ನೆಲೆಯಿಂದಲೇ ಬಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅಳಿಯ ಚಿರು ಸರ್ಜಾರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿ ಪ್ರೀತಿಯಿಂದ ಆರಂಭಿಸಿದ ಹೊಸ ಬದುಕು ತಾಯ್ತನದ ಹೊಸ ಮಜಲನ್ನು ತಲುಪಿದಾಗಲೇ ತೀವ್ರ ಹೃದಯಾಘಾತದಿಂದ ಚಿರು ಎಲ್ಲರನ್ನು ಅಗಲಿದರು.

ಚಿರು ನಿಧನದ ನಾಲ್ಕು ತಿಂಗಳ ಬಳಿಕ ಮೇಘನಾ ಗಂಡುಮಗುವಿಗೆ ಜನ್ಮ‌ನೀಡಿದರು. ತನ್ನ ತಂದೆಯ ಸಾವಿನ ದುಃಖವನ್ನು ಮರೆಸಲೆಂದೇ‌ ಭುವಿಗೆ ಬಂದ ಮೇಘನಾ ಪುತ್ರ ನನ್ನು ನೋಡಿ ಎರಡು ಕುಟುಂಬ ನೋವು ಮರೆತಿದೆ. ಈ ಮಧ್ಯೆ ರಾಯನ್ ರಾಜ್ ಹುಟ್ಟಿದಾಗಲೇ ಮಗುವನ್ನು ನೋಡಲು ಬಂದ ನಟ ಅರ್ಜುನ್ ಸರ್ಜಾ, 20 ವರ್ಷದ ಹಿಂದೆ ಚಿರು ಸರ್ಜಾರನ್ನು ನಾನೇ ಲಾಂಚ್ ಮಾಡಿದ್ದೆ. ಇನ್ನು 20 ವರ್ಷ ಬಿಟ್ಟು ಚಿರು ಪುತ್ರನನ್ನು ನಾನೇ ಲಾಂಚ್ ಮಾಡ್ತಿನಿ ಎಂದಿದ್ದರು.

ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಯನ್ ಸರ್ಜಾ ಅಜ್ಜ ಸುಂದರ ರಾಜ್ ಭರ್ಜರಿ ಭವಿಷ್ಯ ನೋಡಿದ್ದಾರೆ. ನಮ್ಮ ಕುಟುಂಬದಲ್ಲಿ ಎಲ್ಲರೂ ನಟನೆಯ ಹಿನ್ನೆಲೆಯವರೇ, ಮೇಘನಾ ಪತಿ ಮನೆಯಲ್ಲೂ ನಟನೆಯ ಹಿನ್ನೆಲೆ ಇದೆ. ಹೀಗಾಗಿ ನನ್ನ ಮೊಮ್ಮಗನು ನಟನೆಗೆ ಬರುತ್ತಾನೆ. ಮಾತ್ರವಲ್ಲ ಸೂಪರ್ ಸ್ಟಾರ್ ಆಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.

ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿಗೆ ಬಂದ ನಟ ಸುನಾಮಿ ಕಿಟ್ಟಿ ಸಿನಿಮಾ ಮುಹೂರ್ತದ ವೇಳೆ ಸುಂದರ ರಾಜ್ ಮಾಧ್ಯಮಗಳ ಬಳಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಹಿಂದೆ ಪುತ್ರನ ಕುರಿತು ಮಾತನಾಡಿದ್ದ ಮೇಘನಾ ರಾಯನ್ ಓದಿ, ಶಿಕ್ಷಣ ಮುಗಿಸಿ ಆಮೇಲೆ ಬೇಕಿದ್ದರೇ ನಟನೆ ಅಯ್ದುಕೊಳ್ಳಲಿ ಎಂದಿದ್ದರು. ಈಗ ಸುಂದರ ರಾಜ್ ಮೊಮ್ಮಗನ ಬಗ್ಗೆ ನುಡಿದ ಭವಿಷ್ಯ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್

ಇದನ್ನೂ ಓದಿ : Tamil Actor Vishal : ತಮಿಳು ಖ್ಯಾತ ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ

Chiru Sarja Meghana Raj Sarja son Rayan Raj Sarja will become a superstar sary Sundarraj

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular