ಸೋಮವಾರ, ಏಪ್ರಿಲ್ 28, 2025
HomeCinemaಚಿರು ಸ್ನೇಹಿತರ ಹೊಸ ಸಾಹಸ‌ : ಒಂದೇ ಸಿನಿಮಾದಲ್ಲಿ ಪನ್ನಾಗಭರಣ, ಮೇಘನಾರಾಜ್‌ ಸರ್ಜಾ ಹಾಗೂ ಪ್ರಜ್ವಲ್...

ಚಿರು ಸ್ನೇಹಿತರ ಹೊಸ ಸಾಹಸ‌ : ಒಂದೇ ಸಿನಿಮಾದಲ್ಲಿ ಪನ್ನಾಗಭರಣ, ಮೇಘನಾರಾಜ್‌ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್

- Advertisement -

Meghana Raj Sarja new movie : ನಟಿ ಮೇಘನಾ ಸರ್ಜಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ತಮ್ಮ ಸ್ನೇಹಿತೆಯರನ್ನು(Prajwal Devaraj) ಭೇಟಿ ಮಾಡಿ ಹೊಸ ಹೊಸ ಸ್ಥಳಗಳನ್ನು ನೋಡ್ಕೊಂಡು ಎಂಜಾಯ್ ಮಾಡ್ತಿದ್ದಾರೆ. ಈ ಮಧ್ಯೆ ಇನ್ನೂ ಹೆಸರಿಡದ ಮೇಘನಾ ಮುಖ್ಯ ಪಾತ್ರದಲ್ಲಿ ನಟಿಸಿರೋ ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು ಮೇಘನಾ ಹಾಗೂ ಚಿರು (Chiru Sarja) ಅಭಿಮಾನಿಗಳು ಖುಷಿಯಾಗಿದ್ದಾರೆ.

Chiru Sarja wife Meghana Raj Sarja new movie Prajwal Devaraj and Pannag Bharan acting
ಮೇಘನಾರಾಜ್‌, ರಾಯನ್‌ ರಾಜ್‌ ಸರ್ಜಾ ಹಾಗೂ ಚಿರಂಜೀವಿ ಸರ್ಜಾ

ಹೌದು ಕಳೆದ ಎರಡು ವರ್ಷಗಳ ಹಿಂದೇ ಬದುಕನ್ನೇ ಕಳೆದುಕೊಂಡಂತೆ ಕಂಗಾಲಾಗಿದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ಸರ್ಜಾ ಸದ್ಯ ಚೇತರಿಸಿಕೊಂಡಿದ್ದಾರೆ. ವೃತ್ತಿ ಬದುಕಿಗೂ ಮರಳಿರೋ ಮೇಘನಾ ಸಿನಿಮಾ, ರಿಯಾಲಿಟಿ ಶೋ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಮೇಘನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ತೆರೆಕಂಡಿತ್ತು. ಉತ್ತಮ ಪ್ರದರ್ಶನಕಂಡ ಈ ಸಿನಿಮಾ ಕರೋನಾಗೂ ಮೊದಲೇ ರಿಲೀಸ್ ಗೆ ಸಿದ್ಧವಾಗಿತ್ತು. ಈ ಸಿನಿಮಾದಲ್ಲಿ ಮೇಘನಾ ಜೊತೆ ಸೃಜನ್ ಲೊಕೇಶ್ ಕೂಡ ನಟಿಸಿದ್ದಾರೆ ‌

Chiru Sarja wife Meghana Raj Sarja new movie Prajwal Devaraj and Pannag Bharan acting

ಇದಾದ ಬಳಿಕ ಕೆಲ ದಿನಗಳ ಹಿಂದೆಯಷ್ಟೇ ನಟಿ ಮೇಘನಾ ನಿರ್ಮಾಪಕ ಪನ್ನಗಾಭರಣ ಹೊಸ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರು. ಈ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳಿದ್ದಾರೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತವಿದೆ. ಈಗ ಸಿನಿಮಾ ತಂಡದಿಂದ ಹೊಸತೊಂದು ಅಪ್ಡೇಟ್ ಹೊರಬಿದ್ದಿದೆ. ಹೌದು ಆಕ್ಷ್ಯನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರೋ ಈ ಮೂವಿಗೆ ಮೇಘನಾ ಜೊತೆ ಪೊಲೀಸ್ ಪಾತ್ರಕ್ಕಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಬಣ್ಣ ಹಚ್ಚುತ್ತಿದ್ದಾರೆ.

ಈಗಾಗಲೇ ವಿಕ್ರಂ ಸೇರಿದಂತೆ ಹಲವು ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಮೇಘನಾ ಜೊತೆ ಪ್ರಜ್ವಲ್ ನಟಿಸುತ್ತಿದ್ದಾರೆ. ಸದ್ಯ ಪ್ರಜ್ವಲ್ ನಟನೆಯ ಭಾಗದ ಚಿತ್ರೀಕರಣ ನಡೆದಿದ್ದು, ಮೇಘನಾ ವಿದೇಶದಿಂದ ಹಿಂತಿರುಗಿದ ಬಳಿಕ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆಯಂತೆ. ಸದ್ಯ ಮೇಘನಾ ಕ್ಯಾಲಿಪೋರ್ನಿಯಾ ದಲ್ಲಿ ತಮಗೆ ಸಂದ ಪ್ರಶಸ್ತಿ ಸ್ವೀಕರಿಸಿದ್ದು, ಇದಾದ ಬಳಿಕ ಸ್ನೇಹಿತೆಯರ ಜೊತೆ ವರ್ಲ್ಡ್ ಟ್ರಿಪ್ ಹೋಗಿದ್ದಾರೆ. ಮೊನ್ನೆ ಮೊನ್ನೆ ಮೇಘನಾ ಎರಡನೇ ಮದುವೆ ವಿಚಾರಕ್ಕೆ ಸಖತ್ ಸುದ್ದಿಯಾಗಿದ್ದರು. ಬಳಿಕ ತಮ್ಮ ಕೈ ಮೇಲೆ ರಾಯನ್ ಹಾಗೂ ಚಿರು ಎಂದು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಎರಡನೇ ಮದುವೆ ವಿವಾದಗಳಿಗೆ ಸ್ಪಷ್ಟ ಉತ್ತರ ನೀಡಿದ್ದರು.

ಇದನ್ನೂ ಓದಿ : Dhruva Sarja Prerana Sarja : ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಧ್ರುವ್ ಸರ್ಜಾ ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

Chiru Sarja wife Meghana Raj Sarja new movie Prajwal Devaraj and Pannag Bharan acting

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular