MS Dhoni captaincy : ವಿರಾಟ್, ರೋಹಿತ್ ನಾಯಕತ್ವಕ್ಕಿಂತ ಪಾಕಿಸ್ತಾನ ವಿರುದ್ಧ ಧೋನಿ ಕ್ಯಾಪ್ಟನ್ಸಿಯೇ ಬೆಸ್ಟ್

ಬೆಂಗಳೂರು: (MS Dhoni captaincy) ಬೆಂಗಳೂರು: ಪಾಕಿಸ್ತಾನ ವಿರುದ್ಧ ಟಿ20 ಕ್ರಿಕೆಟ್’ನಲ್ಲಿ ಅಮೋಘ ದಾಖಲೆ ಹೊಂದಿದ್ದ ಭಾರತ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಮುಗ್ಗರಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಎರಡು ಪ್ರಮುಖ ಪಂದ್ಯಗಳಲ್ಲಿ ಸೋಲು ಕಂಡಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್’ಗಳಿಂದ ಸೋತಿದ್ದ ಭಾರತ, ಈ ಬಾರಿ ಏಷ್ಯಾ ಕಪ್ ಟೂರ್ನಿಯ ಸೂಪರ್-4 (Asia Cup 2022) ಪಂದ್ಯದಲ್ಲೂ ಪಾಕ್ ವಿರುದ್ಧ ಮುಗ್ಗರಿಸಿದೆ. ಕಳೆದ ವರ್ಷ ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಸೋತಿದ್ದ ಭಾರತ, ಈ ವರ್ಷ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿದೆ.

ಎಂ.ಎಸ್ ಧೋನಿ ಟೀಮ್ ಇಂಡಿಯಾ ನಾಯಕರಾಗಿದ್ದಾಗ ಪಾಕಿಸ್ತಾನ ವಿರುದ್ಧ ಭಾರತ ಟಿ20 ಕ್ರಿಕೆಟ್’ನಲ್ಲಿ ಅಮೋಘ ದಾಖಲೆ ಹೊಂದಿತ್ತು. ಒಟ್ಟು 8 ಟಿ20 ಪಂದ್ಯಗಳಲ್ಲಿ ಪಾಕ್ ವಿರುದ್ಧ ನಾಯಕತ್ವ ವಹಿಸಿದ್ದ ಧೋನಿ, 7 ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಧೋನಿ ನಾಯಕತ್ವದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತದ್ದು ಒಂದೇ ಪಂದ್ಯ, ಅದು 2012ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯ. ಆ ಪಂದ್ಯದಲ್ಲಿ ಭಾರತ 5 ವಿಕೆಟ್’ಗಳ ಸೋಲು ಕಂಡಿತ್ತು.

ಪಾಕಿಸ್ತಾನ ವಿರುದ್ಧ ಟಿ20ಯಲ್ಲಿ ಧೋನಿ ನಾಯಕತ್ವದ (MS Dhoni captaincy) ದಾಖಲೆ

ಪಂದ್ಯ: 08
ಗೆಲುವು: 07
ಸೋಲು: 01

ಪಾಕಿಸ್ತಾನ ವಿರುದ್ಧ ಎಂ.ಎಸ್ ಧೋನಿಯವರ ನಾಯಕತ್ವದ ಪಯಣ 2007ರ ಐಸಿಸಿ ಟಿ20 ವಿಶ್ವಕಪ್ ಪಂದ್ಯದ ಮೂಲಕ ಶುರುವಾಗಿತ್ತು. ಮೊದಲ ಲೀಗ್ ಪಂದ್ಯದಲ್ಲಿ ಪಂದ್ಯ ಟೈ ಆದಾಗ ಬಾಲ್ ಔಟ್ ಮೂಲಕ ಭಾರತ ಪಂದ್ಯ ಗೆದ್ದುಕೊಂಡಿತ್ತು. ನಂತರ ಟಿ20 ವಿಶ್ವಕಪ್’ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಧೋನಿ ನಾಯಕತ್ವದ ಟೀಮ್ ಇಂಡಿಯಾ 5 ರನ್’ಗಳಿಂದ ರೋಚಕವಾಗಿ ಗೆದ್ದು ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಅಚ್ಚರಿಯ ಸಂಗತಿ ಏನಂದ್ರೆ ನಂತರ ಭಾರತ ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಒಟ್ಟು 72 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಎಂ.ಎಸ್ ಧೋನಿ, 41 ಗೆಲುವು ಹಾಗೂ 28 ಸೋಲು ಕಂಡಿದ್ದಾರೆ. ಒಂದು ಪಂದ್ಯ ಟೈ ಆಗಿದ್ರೆ, ಮತ್ತೆರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಧೋನಿ ನಾಯಕತ್ವದ ಸಾಧನೆ

ಪಂದ್ಯ: 72
ಗೆಲುವು: 41
ಸೋಲು: 28
ಟೈ: 01
ನೋ ರಿಸಲ್ಟ್: 02
ವಿನ್ನಿಂಗ್ %: 59.28

ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದ್ದ ಭಾರತ ತಂಡ, ಕಳೆದ ಭಾನುವಾರ ಅದೇ ಪಾಕಿಸ್ತಾನ ವಿರುದ್ಧ ಸೋಲು ಕಂಡಿದೆ. ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ ಸೋಲು ಭಾರತ ಫೈನಲ್ ಹಾದಿಯನ್ನು ಕಠಿಣಗೊಳಿಸಿದೆ. ಫೈನಲ್ ತಲುಪಬೇಕಾದರೆ ರೋಹಿತ್ ಶರ್ಮಾ ಬಳಗ ತನ್ನ ಮುಂದಿನ ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕು.

ಇದನ್ನೂ ಓದಿ : Asia Cup 2022 India Vs Sri Lanka: ಏಷ್ಯಾ ಕಪ್ ಸೂಪರ್-4: ಶ್ರೀಲಂಕಾ ವಿರುದ್ಧ ಗೆಲ್ಲಬೇಕಾದರೆ ಟೀಮ್ ಇಂಡಿಯಾದಲ್ಲಿ ಇದೊಂದು ಬದಲಾವಣೆ ಅನಿವಾರ್ಯ

ಇದನ್ನೂ ಓದಿ : Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

MS Dhoni captaincy against Pakistan is better than Virat and Rohit’s captaincy

Comments are closed.