ಸೋಮವಾರ, ಏಪ್ರಿಲ್ 28, 2025
HomeCinemaChota Champion : ಛೋಟಾ ಚಾಂಪಿಯನ್‌, ಅಪ್ಪನಿಗಾಗಿ ಹಂಬಲಿಸಿದ ಮಂಗಳೂರಿನ ಪ್ರನ್ವಿ

Chota Champion : ಛೋಟಾ ಚಾಂಪಿಯನ್‌, ಅಪ್ಪನಿಗಾಗಿ ಹಂಬಲಿಸಿದ ಮಂಗಳೂರಿನ ಪ್ರನ್ವಿ

- Advertisement -

ಕಿರುತರೆಯಲ್ಲೀಗ ರಿಯಾಲಿಟಿ ಶೋಗಳದ್ದೇ ಸುಗ್ಗಿ. ಒಂದು ಮುಗಿದ ನಂತರ ಮತ್ತೊಂದು ಎಂಬಂತೆ ಸಾಲು ಸಾಲು ರಿಯಾಲಿಟಿ ಶೋಗಳು ಆರಂಭಗೊಳ್ಳುತ್ತಿವೆ. ಇದೀಗ ಮಕ್ಕಳಿಗಾಗಿಯೇ ಝೀ ಕನ್ನಡ ವಾಹಿನಿ ಛೋಟಾ ಚಾಂಪಿಯನ್‌ (Chota Champion Season ) ರಿಯಾಲಿಟಿ ಶೋ ಆರಂಭಿಸಿದೆ. ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಚಿಣ್ಣರು ಸಂಭ್ರಮಿಸುತ್ತಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಛೋಟಾ ಚಾಂಪಿಯನ್‌ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಮಂಗಳೂರಿನ ಪ್ರನ್ವಿ ಮಾತು ಇಡೀ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರ ಕಣ್ಣು ಒದ್ದೆಯಾಗಿಸಿದೆ.

ಜೀ ಕನ್ನಡ ವಾಹಿನಿ ಹಂಚಿಕೊಂಡ ಪ್ರೋಮೋ ವಿಡಿಯೋದಲ್ಲಿ, “6 ತಿಂಗಳ ನಂತರ ಕಣ್ಮುಂದೆ ಬಂದ ವೀರಯೋಧ ಅಪ್ಪನ ಕಂಡು ಮಮತೆಯ ಮುತ್ತಿನ ಮಳೆಗರೆದ ಪ್ರನ್ವಿ! ” ಹೌದು ಅಪ್ಪ ಅಂದರೆ ಯಾವ ಮಕ್ಕಳಿಗೆ ಪ್ರೀತಿ ಇರಲ್ಲ ಹೇಳಿ ಅದು ಅಪ್ಪ ದೂರದ ಊರಿನಲ್ಲಿ, ಸೇನೆಯಲ್ಲಿ ಕೆಲಸ ಮಾಡುವ ತಂದೆಯನ್ನು ಪಡೆದ ಮಕ್ಕಳು ತಮ್ಮ ತಂದೆಯನ್ನು ಕಾಣುವುದು ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಆಗಿರುತ್ತದೆ. ಅದರಲ್ಲೂ ಈ ಮಗು ತನ್ನ ಅಪ್ಪನಿಗಾಗಿ ಹಂಬಲಿಸುವುದನ್ನು ಕಂಡರೆ ಎಂಥವರಿಗಾದರೂ ಮನಸ್ಸು ಕರಗುತ್ತದೆ. ಆ ಪುಟ್ಟ ಕಂದಮ್ಮ ತನ್ನ ತಂದೆ ದೇಶ ಕಾಯುವ ಸೈನಿಕ ಎನ್ನುವ ಪರಿ, ತನ್ನ ಅಪ್ಪನ ಹತ್ತಿರ ಬೇಗೆ ಬನ್ನಿ ಎಂದು ಕರೆಯುವ ತುಡಿತ ಮನ ಕರಗಿಸಿದೆ.

ಇದನ್ನೂ ಓದಿ : ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಿದ ಪಶ್ಚಿಮ ಬಂಗಾಳ ಸರಕಾರದ ಆದೇಶಕ್ಕೆ ಸುಪ್ರೀಂ ತಡೆ

ಇದನ್ನೂ ಓದಿ : ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ಟಿಕೆಟ್‌ ಒಂದು ರೂಪಾಯಿಗೆ ಲಭ್ಯ

ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ್ನು ಕೇಳಿದ ಪಶ್ಚಿಮ ಬಂಗಾಳ ಸರಕಾರ

ಇತ್ತೀಚೆಗೆ ಸರಿಗಮಪ ಲೀಟಲ್‌ ಚಾಂಪ್‌, ನಮ್ಮಮ್ಮ ಸೂಪರ್‌ ಸ್ಟಾರ್‌, ಡ್ರಾಮ ಜೂನಿಯರ್‌ ಸೇರಿದಂತೆ ಅನೇಕ ಮಕ್ಕಳ ರಿಯಾಲಿಟಿ ಶೋಗಳು ಬಂದು ಹೋಗಿದೆ. ಇದೀಗ ಇವೆಲ್ಲಾ ಕಾರ್ಯಕ್ರಮವನ್ನು ಮೀರಿಸುವಂತಹ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಸದ್ಯ ಛೋಟಾ ಚಾಂಪಿಯನ್‌ ಮೊದಲೆರಡು ವಾರದಲ್ಲಿಯೇ ಚಿಣ್ಣರ ಚಿಲಿಪಿಲಿಯಿಂದ ಕರುನಾಡ ಜನತೆಯ ಮನಸ್ಸನ್ನು ಸೊರೆಗೊಳಿಸಿದೆ. ಇನ್ನು ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಮಾಡುತ್ತಿದ್ದಾರೆ.

Chota Champion Season : Chota Champion, a boy from Mangalore who longed for his father

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular