ಕಿರುತೆರೆಯಲ್ಲಿ ಇತ್ತೀಚೆಗೆ ರಿಯಾಲಿಟಿ ಶೋಗಳದೇ ಹಾವಳಿ ಆಗಿ ಬಿಟ್ಟಿದೆ. ಕಿರುತೆರೆಯಲ್ಲಿ ಪ್ರತಿಯೊಂದು ಚಾನೆಲ್‌ಗಳು ಹೊಸ ಹೊಸ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನು ತರುವಲ್ಲಿ ಮೂಂಚೂಣಿಯಲ್ಲಿದ್ದಾರೆ. ಈಗಾಗಲೇ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಹೊಂದಿಕೆ ಆಗುವಂತಹ ರಿಯಾಲಿಟಿ ಶೋಗಳು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಕಿರುತೆರೆಯಲ್ಲಿ ವಾರದ ಕೊನೆಯಲ್ಲಿ ಬರುವ ರಿಯಾಲಿಟಿ ಶೋಗಳಿಗೆ ವಿಶೇಷ ಪ್ರೇಕ್ಷಕರಿದ್ದಾರೆ. ವಾರವಿಡೀ ಕೆಲಸದ ಒತ್ತಡದಲ್ಲಿ ತೊಡಗಿರುವ ಪ್ರೇಕ್ಷಕರು ಈ ರಿಯಾಲಿಟಿ ಶೋಗಳಿಂದ ಸಮಯ ಕಳೆದಿದ್ದಾರೆ. ಇದೀಗ ಎಂಟು ವರ್ಷಗಳ ನಂತರ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಛೋಟಾ ಚಾಂಪಿಯನ್ (Chota Champion) ಎನ್ನುವ ಮಕ್ಕಳ ಕಾರ್ಯಕ್ರಮ ಪ್ರಸಾರವಾಗಲಿದೆ.
ಜೀ ಕನ್ನಡ ವಾಹಿನಿಯು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ,”ಇವ್ರು ಮುದ್ದು ಮುದ್ದಾಗಿ ತರ್ಲೆ ಮಾಡೋದೇ ಒಂದ್ ಈವೆಂಟು, ಇವ್ರು ಹಠ ಮಾಡೋದೇ ವೀಕೆಂಡ್ ಎಂಟರ್ಟೈನ್ಮೆಂಟು! ಛೋಟಾ ಚಾಂಪಿಯನ್, ಅತೀ ಶೀಘ್ರದಲ್ಲಿ” ಎಂದು ಪ್ರೋಮೋ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಈ ಪ್ರೋಮೋದಲ್ಲಿ ನಟ ವಿಜಯ್ ರಾಘವೇಂದ್ರ, ರಚಿತಾ ರಾಮ್, ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಪಾರ್ಲಿಮೆಂಟ್ ನಡೆಯುವ ಸಭೆಯ ರೀತಿಯಲ್ಲಿ ಚಿತ್ರೀಕರಿಸಿದ್ದು, ಅದರಲ್ಲಿ ಎಲ್ಲಾ ಪಕ್ಷದವರು ಕಿತ್ತಾಡುತ್ತಿದ್ದು, ಶ್ವೇತಾ ಚಂಗಪ್ಪ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡು ಸಭೆಯನ್ನು ಕಂಟ್ರೋಲ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆಗ ಚಿಣ್ಣರ ತಂಡವೊಂದು ಎಂಟ್ರಿ ತೆಗೆದುಕೊಂಡಿದ್ದಾರೆ.
ಇವ್ರು ಮುದ್ದು ಮುದ್ದಾಗಿ ತರ್ಲೆ ಮಾಡೋದೇ ಒಂದ್ ಈವೆಂಟು, ಇವ್ರು ಹಠ ಮಾಡೋದೇ ವೀಕೆಂಡ್ ಎಂಟರ್ಟೈನ್ಮೆಂಟು!
— Zee Kannada (@ZeeKannada) April 20, 2023
ಛೋಟಾ ಚಾಂಪಿಯನ್ | ಅತೀ ಶೀಘ್ರದಲ್ಲಿ#ChotaChampion #ComingSoon #ZeeKannada #BayasidaBaagiluTegeyona @RachitaRamDQ @mutthuvijay pic.twitter.com/xjsaiCfmoK
ಮಕ್ಕಳು ಒಂದಾದ ಮೇಲೆ ಒಂದು ಎನ್ನುವಂತೆ “ನಮ್ಮಗೆ ಹೊರಗಡೆ ಹೋಗಿ ಆಡವಾಡಲು ಇಷ್ಟವಿಲ್ಲ, ಮೊಬೈಲ್ ಗೇಮ್ ಅಂತೂ ವೆಸ್ಟ್. ನಾವು ಡ್ಯಾನ್ಸ್ ಶೋನಲ್ಲಿ ಕುಣಿಯೋ ವಯಸ್ಸು ನಮ್ಮದಲ್ಲ. ಸಿಂಗಿಂಗ್ ಕಾರ್ಯಕ್ರಮದಲ್ಲಿ ಹಾಡಲು ನಮ್ಮಗೆ ಸ್ವರವಿಲ್ಲ. ಹೀಗಾಗಿ ನಮ್ಮಗೆ ಎಂಜಾಯ್ ಮಾಡುವುದಕ್ಕೆ ನಮ್ಮಗೊಂದು ಶೋ ಬೇಕು ಚಿಣ್ಣರ ತಂಡ ಹೇಳಿದೆ. ಸಭಾಧ್ಯಕ್ಷರಾಗಿ ಶ್ವೇತಾ ಚಂಗಪ್ಪ ಜೀ ಕನ್ನಡ ವಾಹಿನಿಯಲ್ಲಿ ಛೋಟಾ ಚಾಂಪಿಯನ್ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಆದೇಶವನ್ನು ಹೊರಡಿಸಲಾಗಿದೆ” ಎನ್ನುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : IT Raids : ಪುಷ್ಪಾ ಸಿನಿಮಾ ನಿರ್ದೇಶಕ ಸುಕುಮಾರ್ ಮೇಲೆ ಐಟಿ ದಾಳಿ
ಇದನ್ನೂ ಓದಿ : ಪವಿತ್ರಾ ಲೋಕೇಶ್ -ನರೇಶ್ ಮದುವೆ ವಿವಾದ : ಮತ್ತೆ ಮದುವೆ ಟೀಸರ್ ರಿಲೀಸ್
ಈ ಪ್ರೋಮೋ ವಿಡಿಯೋ ಪ್ರಕಾರ, ಈ ಶೋ ಶೀಘ್ರದಲ್ಲೇ ಶುರುವಾಗಲಿದ್ದು, ಜಡ್ಜ್ ಸ್ಥಾನದಲ್ಲಿ ವಿಜಯ ರಾಘವೇಂದ್ರ ಹಾಗೂ ರಚಿತಾ ರಾಮ್ ಕಾಣಿಸಿಕೊಳ್ಳಬಹುದು. ಇನ್ನು ಈ ಶೋನಲ್ಲಿ ನಿರೂಪಣೆ ಹೊಣೆಯನ್ನು ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ನಿರ್ವಹಿಸುವಂತೆ ಕಾಣುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್, ರಾಜಾ ರಾಣಿ, ಜೋಡಿ ನಂ.1, ಸೂಪರ್ ಕ್ವೀನ್, ಇಸ್ಮಾರ್ಟ್ ಜೋಡಿ, ಸರಿಗಮಪ ಹೀಗೆ ಎಲ್ಲಾ ಚಾನೆಲ್‌ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಈ ಸಾಲಿಗೆ ಛೋಟಾ ಚಾಂಪಿಯನ್ ಸೇರಿಕೊಳ್ಳಲಿದೆ.
Chota Champion will charm the television again