ದೇಶದ ಪ್ರಖ್ಯಾತ ಸೆಲೆಬ್ರಿಟಿಗಳ ಸಾಲಿನಲ್ಲಿ ಮಂಗಳೂರು ಎಂದಾಕ್ಷಣ ನೆನಪಿಗೆ ಬರೋದು ತುಳುನಾಡ ಬೆಡಗಿ ಅನುಷ್ಕಾ ಶೆಟ್ಟಿ. ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅನುಷ್ಠಾ ನೋಡಿದ್ರೆ ಸಾಕು ಆಹಾ ಎಂದು ಹೇಳದೆ ಇರರು. ಸಿನಿಮಾ ಬಿಟ್ಟು ಬೇರೆಲ್ಲಾ ಕಾರ್ಯಕ್ರಮಗಳಲ್ಲಿ ಸೀರೆಯಲ್ಲೇ ಕಾಣಿಸಿಕೊಳ್ಳೋ ಅನುಷ್ಕಾ ಶೆಟ್ಟಿ ಇದೀಗ 40ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಅನುಷ್ಕಾ ಶೆಟ್ಟಿ 1981 ರ ನವೆಂಬರ್ 7 ರಂದು ಮಂಗಳೂರಿನ ಭಂಟ ಸಮುದಾಯದಲ್ಲಿ ಜನಿಸಿದರು. ಮನೆಯಲ್ಲಿ ಮುದ್ದಿನ ಮಗಳಾಗಿ ಬೆಳೆದ ಸ್ವಿಟೀ ತಮ್ಮ ಪ್ರತಿಭೆಯನ್ನು ಸಿನಿಮಾ ಜಗತ್ತಿಗೆ ಪರಚಯಿಸಿದರು. ತೆಲುಗು ಚಿತ್ರರಂಗದ ನಂಬರ್ ಒನ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಅನುಷ್ಕಾ ಶೆಟ್ಟಿ, ತೆಲುಗು ಮಾತ್ರವಲ್ಲದೇ ದಕ್ಷಿಣ ಭಾರತದ ಜನರ ಮನ ಗೆದ್ದಿದ್ದಾರೆ.
ಇದನ್ನೂ ಓದಿ: Sooryavanshi : ಅಕ್ಷಯ್ ಕುಮಾರ್ ನಟನೆಯ “ಸೂರ್ಯವಂಶಿ” ಚಿತ್ರದ 1 ದಿನದ ಕಲೆಕ್ಷನ್ 26 ಕೋಟಿ !
ತೆಲಗು ಮತ್ತು ತಮಿಳು ಚಲನಚಿತ್ರದಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತಿರುವ ಅನುಷ್ಕಾ ಅವರನ್ನು ದಕ್ಷಿಣ ಭಾರತೀಯ ಸಿನೆಮಾದ ಲೇಡಿ ಸೂಪರ್ ಸ್ಟಾರ್ ಎಂದೇ ಜನಪ್ರಿಯರಾಗಿದ್ದಾರೆ. ನಂದಿ ಪ್ರಶಸ್ತಿ, ಟಿಎನ್ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎಂಟು ನಾಮನಿರ್ದೇಶನಗಳಿಂದ ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಭಾರತೀಯ ಸಿನಿಮಾ ರಂಗದಲ್ಲಿಯೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿಯರಲ್ಲಿ ಒಬ್ಬರು. ಬಾಹುಬಲಿ ಸಿನಿಮಾದ ವಿಭಿನ್ನ ಪ್ರಾತ್ರದಿಂದ ತಾನು ಎಂತಹ ಪಾತ್ರವನ್ನಾದರೂ ಮಾಡಬಲ್ಲೇ ಅನ್ನೋದನ್ನು ಅನುಷ್ಕಾ ಪ್ರಪಂಚಕ್ಕೆ ತೋರಿಸಿದ್ದಾರೆ. ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಟ್ವಿಟರ್ ನಲ್ಲಿ ಶುಭಾಷಯದ ಮಹಾಪುರವೇ ಹರಿದುಬಂದಿದೆ.
(For reprint rights: Times Syndication Ation Anushka Shetty enters 40th spring)