ಉಪನ್ಯಾಸಕರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸುವಂತಿಲ್ಲ: ಡಿಡಿಪಿಯು ಆದೇಶದ ಬಗ್ಗೆ DC ಹೇಳಿದ್ದೇನು ?

ಮೈಸೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಟೀ ಶರ್ಟ್‌ ಮತ್ತು ಜೀನ್ಸ್‌ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದ್ದರು. ಆದರೆ ಇದೀಗ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.

ಈ  ಆದೇಶದ ಕುರಿತು ಪ್ರಕಟಣೆ ಹೊರಡಿಸಿರುವ ಡಿಡಿಪಿಯು ಮೈಸೂರು ಜಿಲ್ಲಾ ಅಧಿಕಾರಿ ನವೆಂಬರ್‌ 6 ರಂದು ಮೌಖಿಕವಾಗಿ ಸೂಚಿಸಿರುವಂತೆ ಕಾಲೇಜಿನಲ್ಲಿ ಕರ್ತವ್ಯದ ವೇಳೆಪಟ್ಟಿಯಲ್ಲಿ ಟೀ ಶರ್ಟ್‌ ಮತ್ತು ಜೀನ್ಸ್‌ ಪ್ಯಾಂಟ್ ಗಳನ್ನು ಧರಿಸುವಂತಿಲ್ಲಾ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ; Good News : ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್‌ : ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ

ಈ ಆದೇಶದ ಮೇರೆಗೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಸಾಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ನಿರ್ಬಂಧಿಸ ಬೇಕು. ಈ ಆದೇಶವನ್ನು ನೌಕರರ ಗಮನಕ್ಕೆ ತರಬೇಕು. ಈ ಆದೇಶದ ಕುರಿತು ಕ್ರಮ ಕೈಗೊಂಡು ನವೆಂಬರ್‌ 10ರ ವಳಗೆ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಆದರೆ ಈ ಆದೇಶದ ಕುರಿತು ಜಿಲ್ಲಾ ಅಧಿಕಾರಿ ʼನಾನು ಈ ರೀತಿ ಆದೇಶವನ್ನು ಹೊರಡಿಸುವಂತೆ ಹೇಳಿಲ್ಲ, ಈ ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಯೊಡನೆ ಮಾತಾಡಿ ಈ ಆದೇಶ ತಪ್ಪಾಗಿದೆ. ಇದನ್ನು ಹಿಂಪಡೆಯಿರಿ ಎಂದು ಹೇಳಿದ್ದೇನೆ. ನನ್ನ ಗಮನಕ್ಕೆ ಬಾರದೇ ಈ ರೀತಿಯ ಆದೇಶ ಹೊರಡಿಸಿರುವ ಬಗ್ಗೆ ಡಿಡಿಪಿಯು ಬಳಿ ಕಾರಣ ಕೇಳಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ.

ಇದನ್ನೂ ಓದಿ: ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ಹೊಸ ಶಿಷ್ಯ ವೇತನ : ರಾಜ್ಯ ಸರ್ಕಾರದ ಆದೇಶ

(DDPU orders lecturer not to wear jeans pants, t-shirts: DC said?)

Comments are closed.