ಬೆಂಗಳೂರು : ಕೊನೆಗೂ ರಾಜ್ಯ ಸರಕಾರ ಸಿನಿಮಾ ರಂಗದ ಒತ್ತಡಕ್ಕೆ ಮಣಿದಿದ್ದು, ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಥಿಯೇಟರ್ ಗಳನ್ನು ತೆರೆಯಲು ರಾಜ್ಯ ಸರಕಾರ ಅನುಮತಿಯನ್ನು ನೀಡಿದ್ದರೂ ಕೂಡ ಶೇ.50 ರಷ್ಟು ಮಂದಿಗೆ ಪ್ರೇಕ್ಷಕರಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಿತ್ತು. ಇದರಿಂದಾಗಿ ಚಿತ್ರರಂಗದ ಸ್ಟಾರ್ ನಟರು ರಾಜ್ಯ ಸರಕಾರದ ವಿರುದ್ದ ಸಿಡಿದೆದ್ದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಿನಿಆ ಥಿಯೇಟರ್ ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದರ ಬೆನ್ನಲ್ಲೇ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಹೊರಡಿಸಲಿದೆ. ಥಿಯೇಟರ್ ನ್ನು ಪ್ರತೀ ಶೋ ನಂತರದಲ್ಲಿ ಸ್ಯಾನಿಟೈಸ್ ಮಾಡಲು ಸೂಚನೆಯನ್ನು ನೀಡಲಾಗುತ್ತದೆ. ಥಿಯೇಟರ್ ಗಳಲ್ಲಿ ಪ್ರೇಕ್ಷಕರು ಆರೋಗ್ಯ ಸೇತು ಆ್ಯಪ್ ಬಳಕೆಗೆ ಒತ್ತು ನೀಡಬೇಕು. ಸಿನಿಮಾ ಥಿಯೇಟರ್ ನ ಒಳಗೆ ಹೊರಗೆ ಪ್ರವೇಶಿಸುವವರು ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ ಮಾಡುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಬೇಕು.
ಎಲ್ಲಾ ಪ್ರೇಕ್ಷಕರು ಫೇಸ್ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಹೊರಡಿಸುವ ಸಾಧ್ಯತೆಯಿದೆ. ರಾಜ್ಯ ಸರಕಾರದ ಹೊಸ ನಿಯಮದಿಂದಾಗಿ ಸಿನಿಮಾ ನಟ, ನಟಿಯರು, ನಿರ್ಮಾಪಕರು, ಥಿಯೇಟರ್ ಮಾಲೀಕರು ಕೂಡ ಖುಷಿಯಾಗಿದ್ದಾರೆ.