ಪತಿ ಕಳೆದುಕೊಂಡು ಅಕ್ಷರಶಃ ಕುಸಿದುಹೋಗಿದ್ದ ಮೇಘನಾ ಮುಖದಲ್ಲಿ ಜ್ಯೂನಿಯರ್ ಚಿರು ಮಂದಹಾಸ ಮೂಡಿಸಿದ್ದಾನೆ. ಮಗನ ತೊಟ್ಟಿಲು ಶಾಸ್ತ್ರದಂದು ತಾವು ಎದುರಿಸಿದ ದುಃಖದ ಕ್ಷಣಗಳ ಕುರಿತು ಮಾತನಾಡಿದ ಮೇಘನಾ ಪ್ರೀತಿಯ ಪತಿ ನೆನೆದು ಕಣ್ಣೀರಿಟ್ಟಿದ್ದಾರೆ.

ಚಿರು ಸಿನಿಮಾ ಸ್ಟಾರ್ ಎನ್ನೋದಕ್ಕಿಂತ ಅವರ ವ್ಯಕ್ತಿತ್ವವೇ ಒಂದು ಸ್ಟಾರ್ ಗಿರಿ ತಂದುಕೊಟ್ಟಿತ್ತು. ಸದಾ ಎಲ್ಲರನ್ನು ನಗಿಸುತ್ತ, ಪ್ರೀತಿಸುತ್ತ ಇರುತ್ತಿದ್ದರು. ಚಿರು ಅಂದ್ರೇನೇ ಸೆಲಿಬ್ರೇಟಿ ಎಂದ ಮೇಘನಾ, ಚಿರು ಎಲ್ಲೂ ಹೋಗಿಲ್ಲ ಮಗನ ರೂಪದಲ್ಲಿ ನನ್ನೊಂದಿಗಿದ್ದಾರೆ ಎಂದರು.

ಚಿರು ಸದಾ ನನ್ನೊಂದಿಗೆ ಮಾತನಾಡುತ್ತಾ ನಾನು ಯಾವಾಗಲೂ ನಿನ್ನೊಂದಿಗೆ ಇರ್ತೆನೆ… ಏನಾದ್ರು ಆದ್ರೂ ಫಿನಿಕ್ಸ್ಪಕ್ಷಿ ತರ ಎದ್ದು ಬರ್ತೆನೇ. ನಾನೊಂತರಾ ಬೂದಿ ಮುಚ್ಚಿದ ಕೆಂಡದ ತರ. ಸದಾ ನಿನ್ನೊಂದಿಗೆ ಇತ್ತೇನೆ ಎಂದಿದ್ದರು.ಬಹುಷಃ ಈ ದಿನ ಬರುತ್ತೆ ಅಂತ ನಾವ್ಯಾರು ಅಂದುಕೊಂಡಿರಲಿಲ್ಲ. ಆದರೇ ಈಗ ಅವರ ಮಗನ ಮುಖ ನೋಡಿದ್ರೇ ಚಿರು ಮಾತು ನಿಜವಾಗಿದೆ ಅನ್ನಿಸುತ್ತದೆ.

ಚಿರು ಮಗ ಸೇಮ್ ಚಿರು ತರನೇ ಇದ್ದಾನೆ. ಹೀಗಾಗಿ ಚಿರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅವರಿಲ್ಲದೇ ಹೋದ್ರೂ ಮಗನ ಮುಖ ನೋಡುತ್ತಿದ್ದಂತೆ ಅವರು ನನ್ನೊಂದಿಗೆ ಇದ್ದಾರೆ ಎಂಬ ಸಮಾಧಾನ ಆಗುತ್ತದೆ ಎಂದು ಮೇಘನಾ ಭಾವುಕರಾದ್ರು.
ಎಲ್ಲರೂ ನಾನು ಸ್ಟ್ರಾಂಗ್ ಅಂತಾರೆ. ಆದರೇ ನಾನು ಸ್ಟ್ರಾಂಗ್ ಅಥವಾ ವೀಕ್ ಗೊತ್ತಿಲ್ಲ. ಆದರೇ ಶೋ ಹ್ಯಾಸ್ ಟೂ ಕಂಟಿನ್ಯೂ ಸೋ ನಾನು ಮಗನ ಮುಖ ನೋಡಿ ಎಲ್ಲವನ್ನು ಎದುರಿಸುತ್ತಿದ್ದೇನೆ ಎಂದಿದ್ದಾರೆ.

ನನ್ನ ಬದುಕಿನಲ್ಲಿ ಕಳೆದ ಕೆಳ ತಿಂಗಳಲ್ಲಿ ನಡೆದ ಘಟನೆಗಳನ್ನು ನಾನು ಉಲ್ಲೇಖಿಸುವುದಿಲ್ಲ. ಆದರೇ ಆ ವೇಳೆ ನನ್ನನ್ನು ಹಾಗೂ ಚಿರುವನ್ನು ತಮ್ಮ ಮನೆಮಗನಂತೆ ಕಂಡು ನಮ್ಮ ದುಃಖದಲ್ಲಿ ಪಾಲುದಾರರಾದ ಮಾಧ್ಯಮದ ಜನತೆಗೆ ಹಾಗೂ ಕರ್ನಾಟಕದ ಜನತೆಗೆ ಹಾಗೂ ಅಭಿಮಾನಿಗಳಿಗೆ ಮೇಘನಾ ಇದೇ ವೇಳೆ ಧನ್ಯವಾದ ಕೂಡ ಹೇಳಿದ್ದಾರೆ.