ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (13-11-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ, ಪ್ರೀತಿ ಯೋಗ , ವನಿಜ ಕರಣ, ನವೆಂಬರ್ 13 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 5 ಗಂಟೆ 26 ನಿಮಿಷದಿಂದ 6 ಗಂಟೆ 51 ನಿಮಿಷದವರೆಗೆ ಇದೆ.

ಈ ಸಮಯ ಅದ್ಭುತವಾದ ಸಮಯ. ಇಂದು ಲಕ್ಷ್ಮಿ ತ್ರಯೋದಶಿ, ಧನ್ವಂತರಿ ಜಯಂತಿ, ಯಮ ದೀಪ ಜಯಂತಿ ಆದ್ದರಿಂದ ಇಂದು ಪ್ರತಿಯೊಬ್ಬರು ಮನೆ ಬಾಗಿಲ ಹೊರಗೆ ದೀಪವನ್ನು ಹಚ್ಚಬೇಕು. ಈ ದೀಪ ಅಪಮೃತ್ಯು ದೋಷವನ್ನು ನಿವಾರಿಸುತ್ತದೆ. ಇಂದು ಮಾಡುವ ಒಂದೇ ಒಂದು ದೀಪದ ದಾನ ಲಕ್ಷ ದೀಪಗಳನ್ನು ದಾನ ಮಾಡುವುದಕ್ಕೆ ಸಮ. ಇಂದು ಹಚ್ಚುವ ಒಂದು ದೀಪ ಲಕ್ಷ ದೀಪಗಳನ್ನು ಹಚ್ಚುವುದಕ್ಕೆ ಸಮ. ನಮಗೆ ಗೊತ್ತೋ ಗೊತ್ತಿಲ್ಲದೆಯೋ ದುಷ್ಟಶಕ್ತಿಗಳ ಪ್ರಭಾವ, ದುಷ್ಟ ಗ್ರಹಗಳ ಪ್ರಭಾವದಿಂದ, ಪ್ರಚೋದನೆಯಿಂದ, ನಮಗೆ ಪೂರ್ಣ ಆಯಸ್ಸು ಇದ್ದರೂ, ಪೂರ್ಣ ಗೆಲುವು ಇದ್ದರೂ, ಅಪಮೃತ್ಯು ಉಂಟಾಗುತ್ತದೆ. ಆದ್ದರಿಂದ ಇಂದು ಸಂಜೆ ಯಮ ದೀಪವನ್ನು ಹಚ್ಚಿ.

ಇಂದಿನಿಂದ 5ದಿನಗಳ ವರೆಗೆ ಮನೆಯ ದೀಪವನ್ನು ಹಚ್ಚಿ. ಯಾವುದೇ ರೀತಿಯ ಭೂತ ಪ್ರೇತ ವಾಮಾಚಾರಗಳ ಪ್ರಭಾವ ಇದ್ದರೆ ಅದು ನಿವಾರಣೆಯಾಗುತ್ತದೆ. ಇಂದು ತ್ರಯೋದಶಿ, ನಾಳೆ ಚತುರ್ದಶಿ, ನಂತರ ದೀಪಾವಳಿ ನರಕ ಚತುರ್ದಶಿ, ನಂತರ ಬಲಿಪಾಡ್ಯಮಿ ಆನಂತರ ದ್ವಿತೀಯ, ಇಂದಿನಿಂದ ದ್ವಿತೀಯ ದ ವರೆಗೂ 5ದಿನಗಳ ಕಾಲ ಅಂದರೆ ಶುಕ್ರವಾರದಿಂದ ಮಂಗಳವಾರದವರೆಗೆ ಹೊಸ್ತಿಲಿನ ಹೊರಗಡೆ ದೀಪ ಹಚ್ಚಿ. ಯಮ ಬಂದು ಆ ದೀಪಗಳನ್ನು ನೋಡಿ ಯಾರಿಗಾದರು ದೋಷವಿದ್ದರೆ ಅದು ನಿವಾರಣೆಯಾಗಲಿ ಎಂದು ವರ ನೀಡಿ ಹೋಗುತ್ತಾನೆ ಆದ್ದರಿಂದ ಪ್ರತಿಯೊಬ್ಬರು ಈ ದೀಪವನ್ನು ಹಚ್ಚಿ.

ಮೇಷರಾಶಿ : ಕುಜ ಸ್ವಲ್ಪ ವಕ್ರವಾಗಿರುವುದರಿಂದ ದುಡುಕಬೇಡಿ, ಮಾಡುವ ಕೆಲಸ ಕಾರ್ಯಗಳಲ್ಲಿ ನಿಧಾನ ವಿರಲಿ.

ವೃಷಭ ರಾಶಿ : ಗರ್ಭಿಣಿಯರಿಗೆ, ಪುಟ್ಟಮಕ್ಕಳಿಗೆ, ತುಂಬ ಆತುರಗಾರರಿಗೆ ಪೆಟ್ಟು, ಗುರು ಮತ್ತು ಶುಕ್ರ ನೀಚನಾಗಿರುವುದರಿಂದ ನಂದಾದೀಪವನ್ನು ಹಚ್ಚಿಕೊಳ್ಳಿ.

ಮಿಥುನ ರಾಶಿ : ಯಾರೂ ಕಷ್ಟದಿಂದ ಭೂಮಿ ವಾಹನಗಳನ್ನ ಮಾರುತ್ತಿದ್ದರೆ ಅದನ್ನು ಅರ್ಧ ಬೆಲೆಗೆ ತೆಗೆದುಕೊಳ್ಳಲು ಹೋಗಬೇಡಿ ಅದು ನಿಮಗೆ ಉಳಿಯುವುದಿಲ್ಲ. ಬೇರೆಯವರ ಕಷ್ಟವನ್ನು ದುರುಪಯೋಗಪಡಿಸಿಕೊಳ್ಳಬೇಡಿ.

ಕರ್ಕಾಟಕ ರಾಶಿ : ಭೂಮಿ ಮನೆ ಹಣಕಾಸು ವ್ಯವಹಾರ ಹಬ್ಬದ ಸಂಭ್ರಮ. ಯಶಸ್ಸು ಕೀರ್ತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸೋದರರ ವಿಚಾರದಲ್ಲಿ ವೈಮನಸ್ಸು ಕಿರಿಕಿರಿ ಇರುತ್ತದೆ.

ಸಿಂಹ ರಾಶಿ : ಚೆನ್ನಾಗಿದೆ ಗತ್ತು ತೂಕದ ದಿನ, ಶಾರ್ಟ್ ಕಟ್ ನಲ್ಲಿ ಭೂಮಿ ಮನೆ ವಾಹನಗಳನ್ನು ಮಾಡಿಕೊಳ್ಳುತ್ತಿದ್ದರೆ ದೀಪಾವಳಿಯ ದಿನ ಮಾಡಿಕೊಂಡರೆ ಒಳ್ಳೆಯದು.

ಕನ್ಯಾ ರಾಶಿ : ನಿಮ್ಮ ಮನೆಯಲ್ಲಿ ಇಂದು ಧನ್ವಂತರಿ ತ್ರಯೋದಶಿ, ಇಂದಿನಿಂದಲೇ ಮನೆಯಲ್ಲಿ ಹಬ್ಬದ ಸಡಗರ ಸಂಭ್ರಮ ಶುರು ಆಗುತ್ತದೆ, ಮುಂದಕ್ಕೆ ಹೆಜ್ಜೆ ಇಡಿ.

ತುಲಾ ರಾಶಿ : ಚೆನ್ನಾಗಿದೆ, ವಿಶೇಷವಾದ ದಿನ, ಸೋದರವರ್ಗದಲ್ಲಿ ಸಂಗಾತಿಯ ವಿಚಾರದಲ್ಲಿ, ಸಂಗಾತಿಯ ಸೋದರ ವರ್ಗದ ವಿಚಾರದಲ್ಲಿ ಕಲಹದ ಒತ್ತಡ.

ವೃಶ್ಚಿಕ ರಾಶಿ : ಮನೆಯಲ್ಲಿ ಸಡಗರ ಸಂಭ್ರಮದ ಛಾಯೆ ತುಂಬಾ ದಿನಗಳ ನಂತರ ಅತಿಥಿಗಳ ಆಗಮನ, ಈ ದೀಪಾವಳಿ ಸಂಭ್ರಮ ಅದೃಷ್ಟವನ್ನು ತಂದುಕೊಡುವಂತಹ ದಿನ.

ಧನಸ್ಸು ರಾಶಿ : ಯೋಗಕಾರಕ ದಿನ, ವಿಜ್ಞಾನಿಗಳಿಗೆ, ಸ್ಪೋರ್ಟ್ಸ್ ಮನ್ ಗಳಿಗೆ, ಮಿಲಿಟರಿ, ಡಿಫೆನ್ಸ್, ರಕ್ಷಣಾ ಇಲಾಖೆಗೆ ಅದ್ಭುತವಾದ ದಿನ ಯಶಸ್ಸು ಕಟ್ಟಿಟ್ಟ ಬುತ್ತಿ.

ಮಕರ ರಾಶಿ : ಅತಿಯಾದ ಬಲ ಇರುವುದರಿಂದ ಅದನ್ನು ನಮ್ಮವರ ಮೇಲೆ ಪ್ರಯೋಗಿಸಲು ಹೋಗಬೇಡಿ ಬಡಿಸಿ ಕೊಳ್ಳುತ್ತೀರಾ ಎಚ್ಚರಿಕೆ. ದೊಡ್ಡಪ್ಪ ಚಿಕ್ಕಪ್ಪ ತಾತಾ ಅಣ್ಣಾ ಮುಂತಾದ ಹಿರಿಯರ ಜತೆಗೆ ಬಲಪ್ರಯೋಗಿಸಲು ಹೋಗಬೇಡಿ.

ಕುಂಭ ರಾಶಿ : ಒತ್ತಡದ ದಿನ ನಿಭಾಯಿಸುತ್ತೀರಾ, ಎಂತಹ ಭಾರವಿದ್ದರು ಅದನ್ನು ಜಯಿಸಿ ಕೊಂಡುಬರುವಂಥ ಶಕ್ತಿ ನಿಮಗಿದೆ.

ಮೀನ ರಾಶಿ : ಹೊಸದಾಗಿ ಮದುವೆಯಾಗಿರುವವರ ಮನೆಯಲ್ಲಿ ಸಡಗರ ಸಂಭ್ರಮ, ಅದಕ್ಕೆ ಹುಳಿ ಹಿಂಡುವಂತಹ ಪ್ರಮೇಯ ಕೂಡ ಬರುತ್ತದೆ.

Comments are closed.