Madhuban Sunny Leone :ಯಾಕೋ ಏನೋ ಗೊತ್ತಿಲ್ಲ.. ಬಾಲಿವುಡ್ ಇತ್ತೀಚಿಗೆ ಕುಖ್ಯಾತಿಯ ಮೂಲಕವೇ ಹೆಚ್ಚು ಸುದ್ದಿಗೆ ಬರ್ತಾ ಇದೆ. ಡ್ರಗ್ ಕೇಸ್, ಇಡಿ ಕೇಸ್, ಪನಾಮ ಪೇಪರ್ಸ್ ಹೀಗೆ ಒಂದಿಲ್ಲೊಂದು ಹಗರಣ ಇಲ್ಲವೇ ವಿವಾದಗಳು ಯಾಕೋ ಬಾಲಿವುಡ್ನ ಬೆನ್ನು ಬಿಡೋವಂತೆ ಕಾಣುತ್ತಿಲ್ಲ. ಈ ಬಾರಿ ಬಾಲಿವುಡ್ ನಟಿ ಸನ್ನಿ ಲಿಯೋನ್ ( Sunny Leone ) ತಮ್ಮ ಹೊಸ ಹಾಡು ಮಧುಬನ್ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಯುಟ್ಯೂಬ್ನಲ್ಲಿ ಸನ್ನಿ ಲಿಯೋನ್ರ ಈ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಹಿಂದೂ ಧರ್ಮೀಯರ ಕಣ್ಣು ಕೆಂಪಗಾಗಿದೆ. ಈ ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ನೆಟ್ಟಿಗರು ಈ ಹಾಡು ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಯುಟ್ಯೂಬ್ನಿಂದ ಈ ಹಾಡನ್ನು ಕೂಡಲೇ ತೆಗೆದು ಹಾಕುವಂತೆ ವಿರೋಧಗಳು ಕೇಳಿ ಬಂದಿವೆ.
ಡಿಸೆಂಬರ್ 22ರಂದು ಈ ಮ್ಯೂಸಿಕ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ನಟಿ ಸನ್ನಿ ಲಿಯೋನ್ ಹಾಡಿನ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದರು. ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಂತೆಯೇ ಹಾಡು ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಸನ್ನಿ ಲಿಯೋನ್ರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಹಾಡನ್ನು ಅಶ್ಲೀಲ ಎಂದು ಕರೆದಿರುವ ನೆಟ್ಟಿಗರು ಬಾಯ್ಕಾಟ್ ಮಧುಬನ್ ಎಂದು ಅಭಿಯಾನ ನಡೆಸಿದ್ದಾರೆ.
ನಾಚೇ ಮಧುಬನ್ ಮೆ ರಾಧಿಕಾ ಎಂಬ ಹಾಡು ಇದಾಗಿದ್ದು ಇದರಲ್ಲಿ ಸನ್ನಿ ರಾಧಿಕಾ ಅಥವಾ ರಾಧೆಯ ಪಾತ್ರದಲ್ಲಿ ನೃತ್ಯ ಮಾಡಿದ್ದಾರೆ. ರಾಧೆಯ ಪಾತ್ರದಲ್ಲಿ ಸನ್ನಿ ಲಿಯೋನ್ರ ನೃತ್ಯ ಸಾಕಷ್ಟು ಆಕ್ಷೇಪಾರ್ಹವಾಗಿದೆ. ಇದನ್ನು ನೋಡಿದ ನೆಟ್ಟಿಗರು ನಿಮಗೆ ರಾಧೆ – ಶ್ರೀಕೃಷ್ಣರ ಬಗ್ಗೆ ತಿಳಿದಿದೆಯೇ..? ಇಂತಹ ಹಾಡನ್ನು ನೀವು ಮಾಡುವ ಬಗ್ಗೆ ಆಲೋಚನೆ ಮಾಡೋಕೆ ಆದರೂ ಹೇಗೆ ಸಾಧ್ಯ..? ಹಿಂದೂ ದೇವರನ್ನು ಈ ರೀತಿ ಅವಮಾನಿಸೋದನ್ನು ನಿಲ್ಲಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸನ್ನಿ ಲಿಯೋನ್ರ ಮಧುಬನ್ ಹಾಡು ಸರೆಗಮ ಮ್ಯೂಸಿಕ್ ಯುಟ್ಯೂಬ್ನಲ್ಲಿ ಬಿಡುಗಡೆಯಾಗಿದೆ . ಈ ಹಾಡನ್ನು ಕನ್ನಿಕಾ ಕಪೂರ್ ಹಾಗೂ ಅರಿಂದಮ್ ಚಕ್ರವರ್ತಿ ಹಾಡಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು ಸನ್ನಿ ಲಿಯೋನ್ರನ್ನು ಕೇಂದ್ರೀಕರಿಸಿದ ಚಿತ್ರೀಕರಿಸಲಾಗಿದೆ. 1960ರ ಕೊಹಿನೂರ್ ಸಿನಿಮಾದ ಮೊಹಮ್ಮದ್ ರಫಿ ಅವರ ಮಧುಬನ್ ಮೇ ರಾಧಿಕಾ ನಾಚೆ ಎಂಬ ಹಾಡಿನ ರಿಮಿಕ್ಸ್ ಇದಾಗಿದೆ.
ಇದನ್ನು ಓದಿ :KGF vs Vikrant Rona : ಕೆಜಿಎಫ್ ಮೀರಿಸುತ್ತಾ ವಿಕ್ರಾಂತ್ ರೋಣ: ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ?!
ಇದನ್ನೂ ಓದಿ : Meghana Raj special Demand : ಮಗನಿಗಾಗಿ ಚಿರುವನ್ನು ವಾಪಸ್ ಕೊಡಿ: ಮೇಘನಾ ರಾಜ್ ವಿಶೇಷ ಬೇಡಿಕೆ ಸಲ್ಲಿಸಿದ್ದ್ಯಾರಿಗೆ ಗೊತ್ತಾ?!
Controversy arose over Sunny Leone Madhuban song, accused of hurting religious sentiments