Gujarat :ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!

Gujarat :ಶ್ವಾನ ಪ್ರಿಯರಿಗೆ ತಾವು ಪ್ರೀತಿಯಿಂದ ಸಾಕಿದ ನಾಯಿಗಳನ್ನು ಎಷ್ಟು ಮುದ್ದು ಮಾಡಿದರೂ ಕಡಿಮೆ ಅಂತಾನೇ ಅನಿಸುತ್ತೆ. ಪ್ರೀತಿಯಿಂದ ಶ್ವಾನಗಳಿಗೆ ಮುದ್ದು ಮುದ್ದಾಗಿ ಹೆಸರು ಇಡೋದು ಉಂಟು. ಶ್ವಾನದ ಹೆಸರಿಟ್ಟು ಕರೆದಾಗ ಅದು ನಮ್ಮೆಡೆಗೆ ಓಡಿ ಬರೋದನ್ನ ನೋಡೋದೇ ಒಂದು ಆನಂದ. ಆದರೆ ಇಲ್ಲೊಂದು ಗ್ರಾಮದಲ್ಲಿ ಶ್ವಾನದ ಹೆಸರಿನ ಕಾರಣಕ್ಕೆ ದೊಡ್ಡ ಅಪರಾಧವೊಂದು ನಡೆದು ಹೋಗಿದೆ..!


ಹೌದು..! ಗುಜರಾತ್​​ನ ಹಳ್ಳಿಯೊಂದರಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ತಮ್ಮ ನಾಯಿ ಮರಿಗೆ ತನ್ನ ಹೆಂಡತಿಯ ಹೆಸರನ್ನು ಇಟ್ಟಿದ್ದಾರೆ ಎಂದು ಕೋಪಗೊಂಡ ವ್ಯಕ್ತಿಯು ಆಕೆಗೆ ಬೆಂಕಿ ಹಚ್ಚಿದ್ದಾರೆ..! ಇದರಿಂದ ಶ್ವಾನವನ್ನು ಸಾಕಿದ್ದ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಹಿಳೆ ತನ್ನ ನಾಯಿಗೆ ಸೋನು ಎಂದು ಕರೆಯುತ್ತಿದ್ದರು. ಇಂದು ನೆರೆಮನೆಯಾತನ ಪತ್ನಿಯ ಪೆಟ್​ ನೇಮ್​ ಕೂಡ ಆಗಿತ್ತು.


ಸುಟ್ಟ ಗಾಯಗಳಿಂದ ಬಳಲುತ್ತಿರುವ 35 ವರ್ಷದ ನೀತಾಬೆನ್​ ಸರ್ವಯ್ಯ ಎಂಬ ಹೆಸರಿನ ಮಹಿಳೆಯು ಭಾವನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ನೀತಾಬೆನ್​ ಸರ್ವಯ್ಯ ಅವರ ಪತಿ ಹಾಗೂ ಇಬ್ಬರು ಮಕ್ಕಳು ಹೊರಹೋಗಿದ್ದರು. ನೀತಾಬೆನ್​ ತನ್ನ ಕಿರಿಯ ಪುತ್ರನೊಂದಿಗೆ ಮನೆಯಲ್ಲೇ ಇದ್ದರು. ಇದೇ ವೇಳೆಗೆ ಸರಿಯಾಗಿ ಸುರಭಾಯ್​ ಭಾರವಾಡ್​ ಹಾಗೂ ಇತರೆ ಐವರು ನೀತಾಬೆನ್​ ಮನೆಗೆ ನುಗ್ಗಿದ್ದಾರೆ. ನೀತಾಬೆನ್​​ ತನ್ನ ನಾಯಿಗೆ ಸೋನು ಎಂದು ಹೆಸರಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಸುರಭಾಯ್​ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಉದ್ದೇಶಪೂರ್ವಕಾಗಿಯೇ ನೀವು ನನ್ನ ಪತ್ನಿಯ ಅಡ್ಡ ಹೆಸರನ್ನು ನಾಯಿಗೆ ಇಟ್ಟಿದ್ದೀರಾ ಎಂದು ಸುರಭಾಯ್​ ಭಾರವಾಡ್​​ ಆರೋಪಿಸಿದ್ದರು ಎಂದು ಸರ್ವಯ್ಯ ಪೊಲೀಸರಿಗೆ ಹೇಳಿದ್ದಾರೆ.


ಪೊಲೀಸರಿಗೆ ಹೇಳಿಕೆ ನೀಡಿರುವ ನೀತಾ ಬೆನ್​ ಸರ್ವಯ್ಯ ಮನೆಗೆ ನುಗ್ಗಿದ್ದ ಭರ್ವಾಡ್​ ನನ್ನನ್ನು ನಿಂದಿಸಿದರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ನಾನು ಅಡುಗೆ ಮನೆಗೆ ತೆರಳುತ್ತಿದ್ದಂತೆಯೇ ಮೂವರು ನನ್ನನ್ನು ಹಿಂಬಾಲಿಸಿದರು. ಅದರಲ್ಲಿ ಒಬ್ಬರು ನನ್ನ ಮೈ ಮೇಲೆ ಕಂಟೈನರ್​ನಲ್ಲಿದ್ದ ಸೀಮೆ ಎಣ್ಣೆ ಸುರಿದರು ಹಾಗೂ ಬೆಂಕಿ ಕಡ್ಡಿ ಗೀರಿ ಎಸ್ಕೇಪ್​ ಆಗಿದ್ದಾರೆ ಎಂದು ಹೇಳಿದ್ದಾರೆ .


ಅದೇ ಸಮಯಕ್ಕೆ ಸರಿಯಾಗಿ ಬಂದ ಪತಿ ಹಾಗೂ ನೆರೆಹೊರೆಯವರು ಸೇರಿ ಬೆಂಕಿಯನ್ನು ನಂದಿಸಿ ನೀತಾಬೆನ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ.

Gujarat Woman Named Puppy Sonu. Then Neighbour Allegedly Set Her On Fire

ಇದನ್ನು ಓದಿ : Meghana Raj special Demand : ಮಗನಿಗಾಗಿ ಚಿರುವನ್ನು ವಾಪಸ್ ಕೊಡಿ: ಮೇಘನಾ ರಾಜ್ ವಿಶೇಷ ಬೇಡಿಕೆ ಸಲ್ಲಿಸಿದ್ದ್ಯಾರಿಗೆ ಗೊತ್ತಾ?!

ಇದನ್ನೂ ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!

Comments are closed.