role of Aryavardhan : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಎಲ್ಲರ ಮನೆ ಮಾತಾಗಿರುವ ಧಾರಾವಾಹಿ ಜೊತೆ ಜೊತೆಯಲಿ ಸಧ್ಯ ತನ್ನ ನಾಯಕನ ಹುಡುಕಾಟದಲ್ಲಿದೆ. ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದ ಅನಿರುದ್ಧ ಸೀರಿಯಲ್ ತಂಡದ ಜೊತೆಯಲ್ಲಿ ಕಿರಿಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಮಾತ್ರವಲ್ಲದೇ 2 ವರ್ಷಗಳ ಕಾಲ ಯಾವುದೇ ಚಾನೆಲ್ಗಳಲ್ಲಿ ಅವರಿಗೆ ಧಾರವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಅವಕಾಶ ನೀಡಬಾರದು ಎಂದೂ ತೀರ್ಮಾನವಾಗಿದೆ.

ನಾನು ಮತ್ತೆ ಧಾರವಾಹಿಗೆ ಬರ್ತೇನೆ ಎಂದು ಅನಿರುದ್ಧ ಹೇಳಿದ್ದರೂ ಸಹ ಆರೂರು ಜಗದೀಶ್ ಮಾತ್ರ ತಮ್ಮ ನಿರ್ಧಾರದಲ್ಲಿ ಎಳ್ಳಷ್ಟು ಬದಲಾವಣೆ ಮಾಡಿಲ್ಲ. ಅಲ್ಲದೇ ಹೇಗಾದರೂ ಮಾಡಿ ಅನಿರುದ್ಧ ಇಲ್ಲದೆಯೂ ಈ ಧಾರವಾಹಿ ಟಾಪ್ ಸ್ಥಾನದಲ್ಲಿ ಇರುತ್ತೆ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಅನಿರುದ್ಧಗೆ ಹೋಲಿಕೆಯಾಗುವಂತಹ ವ್ಯಕ್ತಿಯನ್ನೇ ಆರ್ಯವರ್ಧನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂದು ಧಾರವಾಹಿ ತಂಡ ಯೋಚಿಸುತ್ತಿದೆ.

ಈಗಾಗಲೇ ನಿರ್ದೇಶಕ ಅನೂಪ್ ಭಂಡಾರಿಗೆ ಜೊತೆ ಜೊತೆಯಲಿ ಧಾರವಾಹಿ ತಂಡ ಕರೆ ಮಾಡಿತ್ತು. ಆದರೆ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ನಿರತರಾಗಿರುವ ಅನೂಪ್ ಭಂಡಾರಿ ಧಾರವಾಹಿಯಲ್ಲಿ ನಟಿಸಲು ತಮಗೆ ಸಮಯಾವಕಾಶವಿಲ್ಲ ಎಂದು ಹೇಳಿ ಈ ಆಫರ್ ತಿರಸ್ಕರಿಸಿದ್ದರು. ಸ್ವತಃ ಅನೂಪ್ ಭಂಡಾರಿ ಈ ಬಗ್ಗೆ ಮಾಹಿತಿ ಕೂಡ ಹಂಚಿಕೊಂಡಿದ್ದರು.

ಈ ಎಲ್ಲದರ ನಡುವೆ ಇದೀಗ ಜೊತೆ ಜೊತೆಯಲಿ ಧಾರವಾಹಿ ಮುಖ್ಯ ಪಾತ್ರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೆಸರು ಕೇಳಿ ಬರ್ತಿದೆ. ಧಾರವಾಹಿ ತಂಡ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿ ಇರುವುದು ನೆಟ್ಟಿಗರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನೆಟ್ಟಿಗರೇ ಈ ಹೆಸರನ್ನು ಹೇಳ್ತಿದ್ದಾರೆ. ಅಲ್ಲದೇ ಸಿ.ಟಿ ರವಿ ಆರ್ಯವರ್ಧನ್ರಂತೆಯೇ ತಯಾರಾಗಿರುವ ಹಳೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸಿ.ಟಿ ರವಿ ಆರ್ಯವರ್ಧನ್ರಂತೆಯೇ ಗಡ್ಡ,ಮೀಸೆ ಹೊಂದಿರೋದ್ರಿಂದ ಅವರನ್ನೇಕೆ ನೀವು ಸಂಪರ್ಕಿಸಬಾರದು ಅಂತಾ ಧಾರಾವಾಹಿ ತಂಡಕ್ಕೆ ನೆಟ್ಟಿಗರು ಸಲಹೆ ನೀಡಿದ್ದಾರೆ.
ಇದನ್ನು ಓದಿ : iPhone 14 launch date : ಬಿಡುಗಡೆಯಾಗಲಿದೆ ಐಫೋನ್ 14, ಬೆಲೆ ಎಷ್ಟು ಏನಿದರ ವೈಶಿಷ್ಟ್ಯತೆ
ಇದನ್ನೂ ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ
CT Ravi’s name has been heard for the role of Aryavardhan