ಸೋಮವಾರ, ಏಪ್ರಿಲ್ 28, 2025
HomeCinemaವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೆಚ್ಚಿಸಿದ ಡಿ ಬಾಸ್ : ಸೆಟ್ಟೇರಲಿದೆ ದರ್ಶನ್‌ ತೂಗುದೀಪ್ ಪ್ಯಾನ್ ಇಂಡಿಯಾ...

ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೆಚ್ಚಿಸಿದ ಡಿ ಬಾಸ್ : ಸೆಟ್ಟೇರಲಿದೆ ದರ್ಶನ್‌ ತೂಗುದೀಪ್ ಪ್ಯಾನ್ ಇಂಡಿಯಾ ಸಿನಿಮಾ

- Advertisement -

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ತೆರೆಗೆ ಮೇಲೆ‌ಬಂದಿಲ್ಲ. ಹೀಗಾಗಿ ದಚ್ಚು ಅಭಿಮಾನಿಗಳು ತಮ್ಮ ಡಿ ಬಾಸ್ ದರ್ಶನ್ ಕ್ಕೆ ಕಾಯ್ತಿದ್ದಾರೆ. ಸದ್ಯ ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿರೋ ದರ್ಶನ್ ಈಗ ಅಭಿಮಾನಿಗಳಿಗೆ ಡಬ್ಬಲ್ ಸಿಹಿಸುದ್ದಿ‌ ನೀಡಿದ್ದು, ಕ್ರಾಂತಿ ಶೂಟಿಂಗ್ ಮುಕ್ತಾಯದ ಹಂತ ತಲುಪಿರೋದರ ಜೊತೆಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ತಮ್ಮ ಮತ್ತೊಂದು ಸಿನಿಮಾ ಸೆಟ್ಟೇರಲಿದೆ (Darshan Thoogudeepa Pan India Movie)ಎಂಬ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನೀರಿಕ್ಷಿತ ಸಿನಿಮಾ ಕ್ರಾಂತಿ ಸಿನಿಮಾ ಶೂಟಿಂಗ್ ನಡೆದಿದೆ. ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯದ ಹಂತ ತಲುಪಿದ್ದು, ಜುಲೈ ಅಂತ್ಯದ ವೇಳೆಗೆ ಚಿತ್ರತಂಡ ಕುಂಬಳಕಾಯಿ ಒಡೆಯಲಿದೆ ಎನ್ನಲಾಗ್ತಿದೆ. ಇದರ ಮಧ್ಯೆಯೇ ಅಭಿಮಾನಿಗಳಿಗೆ ದರ್ಶನ್ ಬಿಗ್ ಗುಡ್ ನ್ಯೂಸ್ ನೀಡಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ದಚ್ಚು ನಟನೆಯ 56 ನೇ ಸಿನಿಮಾ ಸೆಟ್ಟೇರಲಿದೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

ಈಗಾಗಲೇ ಡಿ ಬಾಸ್ 56 ನೇ ಸಿನಿಮಾದ ಸ್ಕ್ರಿಪ್ಟ್ ಕೆಲಸ ಕೂಡ ಮುಗಿದಿದ್ದು, ಚಿತ್ರತಂಡ ಸಿನಿಮಾ ಲಾಂಚ್ ಗೆ ಸಿದ್ಧವಾಗಿದೆ ಎಂಬುದನ್ನು ಸಿನಿಮಾದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಖಚಿತಪಡಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭಮುಹೂರ್ತದಂದು ಡಿ ಬಾಸ್ 56 ನೇ ಸಿನಿಮಾ ಸೆಟ್ಟೆರಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆದಿದೆ. ಈಗಾಗಲೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಪೋಸ್ಟರ್ ಸಿನಿಮಾದ ಮೇಲಿನ ನೀರಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದು, ಪ್ಯಾನ್ಇಂಡಿಯಾ ಸ್ವರೂಪದಲ್ಲಿ ಸಿನಿಮಾ ಮೂಡಿಬರಲಿದೆ. ಇದಕ್ಕಾಗಿ ತರುಣ್ ಸುಧೀರ್ ತುಂಬ ಶೃದ್ಧೆಯಿಂದ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಿದ್ದಾರಂತೆ. ಇದಕ್ಕೂ ಮೊದಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ದರ್ಶನ್ ಕಾಮಿನೇಶನ್ ನಲ್ಲಿ ರಾಜ ವೀರ ಮದಕರಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರದಿಂದ ಸಿನಿಮಾವನ್ನು ಕೈಗೆತ್ತಿಕೊಳ್ಳಲಾಗಿಲ್ಲ. ಇದರ ಬದಲಾಗಿ ರಾಕ್ ಲೈನ್ ಹಾಗೂ ದರ್ಶನ್ ಕಾಮಿನೇಶನ್ ನಲ್ಲಿ ಡಿ 56 ಸಿನಿಮಾ ನಿರ್ಮಾಣವಾಗಲಿದೆ.

ಇನ್ನೂ ಕ್ರಾಂತಿ ಸಿನಿಮಾ ಕೂಡ ಸಖತ್ ಕುತೂಹಲ ಮೂಡಿಸಿದ್ದು, ಕಳೆದ ಎರಡು ವರ್ಷದಿಂದ ದರ್ಶನ್ ರನ್ನು ತೆರೆ ಮೇಲೆ ನೋಡದ ಅಭಿಮಾನಿಗಳು ಕುತೂಹಲದಿಂದ ಕ್ರಾಂತಿಗಾಗಿ ಕಾಯ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆಯಂತೆ.

ಇದನ್ನೂ ಓದಿ : Book My Show ಆ್ಯಪ್ ಗೆ ಬಿತ್ತು ಬ್ರೇಕ್ : ಟಿಕೇಟ್ ಬುಕ್ಕಿಂಗ್ ಬರಲಿದೆ ಗೌರ್ಮೆಂಟ್ ಆ್ಯಪ್

ಇದನ್ನೂ ಓದಿ : Actress Pooja Hegde : ಭೀಸ್ಟ್ ಸಿನಿಮಾ ಸೋಲಿನ ಬೆನ್ನಲ್ಲೇ ನಟಿ ಪೂಜಾ ಹೆಗ್ಡೆಗೆ ಶಾಕ್‌ : ಸಹಾಯಕರ ವೆಚ್ಚ ವಾಪಾಸ್‌ ಮಾಡಿ ಎಂದ ನಿರ್ಮಾಪಕ

D Boss Darshan Thoogudeepa Pan India Movie Shooting Start Varamaha Lakshmi Festival

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular