Book My Show ಆ್ಯಪ್ ಗೆ ಬಿತ್ತು ಬ್ರೇಕ್ : ಟಿಕೇಟ್ ಬುಕ್ಕಿಂಗ್ ಬರಲಿದೆ ಗೌರ್ಮೆಂಟ್ ಆ್ಯಪ್

ನಿಮ್ಮ ಮೊಬೈಲ್ ನಲ್ಲೇ ಬೆರಳಂಚಿನಲ್ಲೇ, ನಿಮ್ಮ ಇಷ್ಟದ ಮೂವಿಯನ್ನು ಬುಕ್ ಮಾಡೋ ಸೌಲಭ್ಯ ಒದಗಿಸಿ ಜನರ ಮೆಚ್ಚುಗೆ ಗಳಿಸಿದ್ದ ಬುಕ್ ಮೈ ಶೋ (Book My Show) ಅ್ಯಪ್ ಗೆ ಆಂಧ್ರಪ್ರದೇಶ ಸರ್ಕಾರ ಗೇಟ್ ಪಾಸ್ ನೀಡಿದೆ. ದೇಶದ 60% ಜನ ಬಳಸುತ್ತಿರುವ ಈ ಅ್ಯಪ್ ಆಂಧ್ರದಲ್ಲಿ ಗೇಟ್ ಪಾಸ್ ಸಿಕ್ಕಿರೋದು ಬುಕ್ ಮೈ ಶೋ ಆ್ಯಪ್ ಗೆ ಶಾಕ್ ನೀಡಿದಂತಾಗಿದೆ. ಆಂಧ್ರಪ್ರದೇಶದಲ್ಲಿ ಇನ್ಮುಂದೆ ನೀವು ಬುಕ್ ಮೈ ಶೋ ಆ್ಯಪ್ ಮೂಲಕ ನಿಮ್ಮ ಸಿನಿಮಾ ಬುಕ್ ಮಾಡುವ ಅವಕಾಶವಿಲ್ಲ. ಈ ಅವಕಾಶಕ್ಕೆ ಸ್ವತಃ ಸಿಎಂ ಜಗನ್ ಮೋಹನ್ ರೆಡ್ಡಿ ಕಡಿವಾಣ ಹಾಕಿದ್ದಾರೆ.

ಮಾತ್ರವಲ್ಲ ಆಂಧ್ರದಲ್ಲಿ ಇನ್ಮುಂದೇ ಸಿನಿಮಾ‌ ಟಿಕೇಟ್ ಬುಕ್ ಮಾಡಲು ಸರ್ಕಾರವೇ ಹೊಸತೊಂದು ಆ್ಯಪ್ ಪರಿಚಯಿಸುತ್ತಿದೆ. ಆಂಧ್ರದಲ್ಲಿ ಬುಕ್ ಮೈ ಶೋಗೆ ತಿರುಗೇಟು ನೀಡುವ ಉದ್ದೇಶದಿಂದಲೇ ಈ ಆ್ಯಪ್ ನ್ನು ಸರ್ಕಾರ ಅಭಿವೃದ್ಧಿ ಪಡಿಸಿದೆ. ಯುವರ್ ಸ್ಕೀನ್ ಎಂದು ಹೆಸರಿಡಲಾಗಿರುವ ಈ ಆ್ಯಪ್ ಮೂಲಕ ಹೇಗೆ ಸಿನಿಮಾ ಬುಕ್ ಮಾಡಬಹುದು ಎಂಬುದರ ಬಗ್ಗೆ ಅಧಿಕಾರಿಗಳೇ ಜನರಿಗೆ ವಿವರಿಸಿದ್ದಾರೆ. ಅಲ್ಲದೇ ಸದ್ಯದಲ್ಲೇ ಈ ಅ್ಯಪ್ ಸಂಪೂರ್ಣವಾಗಿ ಜನರಿಗೆ ಲಭ್ಯವಾಗಲಿದ್ದು, ಆಗ ಬುಕ್ ಮೈ ಶೋ ಆ್ಯಪ್ ಸಂಪೂರ್ಣವಾಗಿ ತನ್ನ ಬೇಡಿಕೆ ಕಳೆದುಕೊಳ್ಳಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

ಆದರೆ ಆಂಧ್ರ ಸರಕಾರ ಈ ಅ್ಯಪ್ ನ್ನು ಬುಕ್ ಮೈ ಶೋಗೆ ಕಡಿವಾಣ ಹಾಕೋ ಉದ್ದೇಶದಿಂದ ತಂದಿಲ್ಲ. ಬದಲಾಗಿ ಚಿತ್ರರಂಗದ ಆದಾಯ ವೆಚ್ಚದ ಮೇಲೆ ಕಣ್ಣಿಡೋ ಉದ್ದೇಶದಿಂದ ತಂದಿದೆ. ತೆಲುಗು ಚಿತ್ರರಂಗದ ಆದಾಯ ಹಾಗೂ ತೆರಿಗೆ ಕಳ್ಳತನದ ಮೇಲೆ‌ನಿಗಾ ಇಡಲು ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಆಂಧ್ರದಲ್ಲಿ ಸದ್ಯ ಸಿನಿಮಾ‌ ಟಿಕೇಟ್ ದರ ನಿರ್ಣಯಿಸುವ ಹಕ್ಕನ್ನು ರಾಜ್ಯ ಸರ್ಕಾರ ತನ್ನ ಬಳಿಯೇ ಉಳಿಸಿಕೊಂಡಿದೆ.ಹೀಗಾಗಿ ಸಿನಿಮಾಗಳ ಟಿಕೇಟ್ ದರವನ್ನು ಸರ್ಕಾರವೇ ನಿರ್ಧರಿಸಲಿದೆ.

ಇನ್ನು ಮೂಲಗಳ ಮಾಹಿತಿ ಪ್ರಕಾರ ಆಂಧ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಯುವರ್ ಸ್ಕ್ರಿನ್ ಆ್ಯಪ್ ನಲ್ಲಿ ಸಿನಿಮಾಕ್ಕೆ ಅತ್ಯಂತ ಕಡಿಮೆ ಶುಲ್ಕವಿರಲಿದೆ ಎನ್ನಲಾಗ್ತಿದೆ. ಅಲ್ಲದೇ ಯುವರ್ ಸ್ಕ್ರಿನ್ ಅ್ಯಪ್ ಹಾಗೂ ವೆಬ್ ಸೈಟ್ ನ್ನು ಆಂಧ್ರಪ್ರದೇಶ ಟಿವಿ ಮತ್ತು ಚಿತ್ರಮಂದಿರ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸಿದ್ದು,ಅಪ್ಲಿಕೇಶನ್ ಲಾಂಚ್ ಗೆ ಸಿದ್ಧತೆ ನಡೆದಿದೆ.

ಈ ಅಪ್ಲಿಕೇಶನ್ ಮೂಲಕ ರಾಜ್ಯದ ಯಾವುದೇ ಚಿತ್ರಮಂದಿರದ ಟಿಕೇಟ್ ಬುಕ್ ಮಾಡಬಹುದಾಗಿದ್ದು, ಟಿಕೆಟ್ ಬುಕ್ ಮಾಡಲು ಕೇವಲ 1.90 ರೂಪಾಯಿ ಸೇವಾ ಶುಲ್ಕ ವಿಧಿಸಲಿದೆ. ಅಲ್ಲದೇ ಆನ್ ಲೈನ್ ನಿಂದ ಮಾರಾಟವಾದ ಟಿಕೆಟ್ ಹಣವನ್ನು ಅದೇ ದಿನ ಚಿತ್ರಮಂದಿರಗಳ ಮಾಲೀಕರ ಖಾತೆಗೆ ವರ್ಗಾಯಿಸಲಿದೆ. ಇದುವರೆಗೂ ಬುಕ್ ಮೈ ಶೋ ಅ್ಯಪ್ ಒಂದೊಂದು ಟಿಕೇಟ್ ಬುಕ್ಕಿಂಗ್ ಗೆ 22 ರಿಂದ 28 ರೂಪಾಯಿ ತೆರಿಗೆ ನೀಡಬೇಕಾಗುತ್ತಿತ್ತು.

ಇದನ್ನೂ ಓದಿ : Actress Pooja Hegde : ಭೀಸ್ಟ್ ಸಿನಿಮಾ ಸೋಲಿನ ಬೆನ್ನಲ್ಲೇ ನಟಿ ಪೂಜಾ ಹೆಗ್ಡೆಗೆ ಶಾಕ್‌ : ಸಹಾಯಕರ ವೆಚ್ಚ ವಾಪಾಸ್‌ ಮಾಡಿ ಎಂದ ನಿರ್ಮಾಪಕ

ಇದನ್ನೂ ಓದಿ : Notice For Jug Jugg Jeeyo :”ಜಗ್ ಜಗ್ ಜೀಯೋ” ಚಿತ್ರಕ್ಕೆ ಕೋರ್ಟಿನಿಂದ ತಡೆ..!!

Book My Show App Stop, Ticket Booking Comes Government App

Comments are closed.