ಭಾನುವಾರ, ಏಪ್ರಿಲ್ 27, 2025
HomeCinemaD56 Movie : ನಟ ದರ್ಶನ್‌ ಅಭಿನಯದ 'D56' ಸಿನಿಮಾದಲ್ಲಿ ಯಾರಾರು ನಟಿಸಲಿದ್ದಾರೆ ಗೊತ್ತಾ ?

D56 Movie : ನಟ ದರ್ಶನ್‌ ಅಭಿನಯದ ‘D56’ ಸಿನಿಮಾದಲ್ಲಿ ಯಾರಾರು ನಟಿಸಲಿದ್ದಾರೆ ಗೊತ್ತಾ ?

- Advertisement -

ಸ್ಯಾಂಡಲ್‌ವುಡ್‌ ನಟ ದರ್ಶನ್ ಹುಟ್ಟುಹಬ್ಬಕ್ಕೆ ‘D56’ ಟೀಂನಿಂದ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಸಿಗಲಿದೆ. ಅಂದು ಸಿನಿಮಾ ಟೈಟಲ್ ಅನೌನ್ಸ್ ಮಾಡುವುದಾಗಿ ಈಗಾಗಲೇ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್ ಪೋಸ್ಟ್ ಮೂಲಕ ಕನ್ಫರ್ಮ್ ಮಾಡಿದ್ದಾರೆ. ‘D56’ ಸಿನಿಮಾದಲ್ಲಿ (D56 Movie) ದರ್ಶನ್ ಜೊತೆಗೆ ನಾಯಕಿಯಾಗಿ ರಾಧನಾ ರಾಮ್ ನಟಿಸುತ್ತಿರುವುದು ಬಿಟ್ಟರೆ ಬೇರೆ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಆದರೆ ‘D56’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರೇ ನಟಿಸುತ್ತಿದ್ದಾರೆ. ಒಬ್ಬೊಬ್ಬರಾಗಿ ಶೂಟಿಂಗ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ಇನ್ನು ‘ರಾಬರ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡ್ತಿದೆ. ಸದ್ದಿಲ್ಲದೇ 3 ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ.

‘ಕ್ರಾಂತಿ’ ಸಕ್ಸಸ್ ಸಂಭ್ರಮದಲ್ಲೇ ‘D56’ ಸಿನಿಮಾ ಬರ್ತಿರೋದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಜೊತೆಗೆ ಸೂಪರ್ ಹಿಟ್ ‘ರಾಬರ್ಟ್’ ಟೀಂ ಜೊತೆ ದರ್ಶನ್ ಮತ್ತೊಮ್ಮೆ ಕೈ ಜೋಡಿಸಿರೋದು ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ನಾಯಕಿಯಾಗಿ ರಾಧನಾ ರಾಮ್ ನಟಿಸಿದರೆ ತೆಲುಗಿನ ಜಗಪತಿ ಬಾಬು ಖಡಕ್ ರೋಲ್‌ನಲ್ಲಿ ಅಬ್ಬರಿಸಲಿದ್ದಾರೆ. ಈ ಹಿಂದೆ ‘ರಾಬರ್ಟ್’ ಸಿನಿಮಾದಲ್ಲಿ ವಿಲನ್ ನಾನಭಾಯ್ ಆಗಿ ಅವರು ಕಾಣಿಸಿಕೊಂಡಿದ್ದರು. ಇನ್ನು ಕಾಮಿಡಿ ಅಧ್ಯಕ್ಷ ಶರಣ್ ಕೂಡ ‘D56’ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ. ಶರಣ್ ಈ ಹಿಂದೆ ಕೂಡ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಇನ್ನು ನಟ, ನಿರ್ದೇಶಕ ಕುಮಾರ್ ಗೋವಿಂದ್ ಕೂಡ ‘D56’ ತಂಡದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಶರಣ್ ಹಾಗೂ ಕುಮಾರ್ ಗೋವಿಂದ್ ‘D56’ ಸೆಟ್‌ನಿಂದ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ್ದರು.

ಇಂಟ್ರೆಸ್ಟಿಂಗ್ ಅಂದರೆ ಶರಣ್ ತಂಗಿ ಶೃತಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಣ್ಣ ತಂಗಿ ಇಬ್ಬರು ದರ್ಶನ್ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಇನ್ನು ‘ರಾಬರ್ಟ್’ ಸಿನಿಮಾವನ್ನು ಸೊಗಸಾಗಿ ಸೆರೆಹಿಡಿದು ಭೇಷ್ ಎನ್ನಿಸಿಕೊಂಡಿದ್ದ ಸುಧಾಕರ್ ಈ ಸಿನಿಮಾದ ಛಾಯಾಗ್ರಹಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಹಾಗೂ ವಿ. ಹರಿಕೃಷ್ಣ ಬದಲು ಈ ಬಾರಿ ‘D56’ ಸಿನಿಮಾಕ್ಕೆ ಬೇರೆ ಯಾರಾದರೂ ಸಂಗೀತ ಸಂಯೋಜನೆ ಮಾಡಬಹುದು ಎನ್ನಲಾಗ್ತಿದೆ.

ಇದನ್ನೂ ಓದಿ : “ದರ್ಶನ್ 56” ಕುರಿತು ಹೊಸ ಅಪ್‌ಡೇಟ್ ಕೊಟ್ಟ ರಾಕ್‌ಲೈನ್

ಇದನ್ನೂ ಓದಿ : ನಟ ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟು : ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದಿದ್ರು ಪವರ್ ಸ್ಟಾರ್!

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಆದೇಶದಿಂದ ‘ಕಾಂತಾರ’ ಸಿನಿತಂಡ ನಿರಾಳ

ಹಂಪಿಯಲ್ಲಿ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ‘D56’ ಸಿನಿಮಾಕ್ಕೆ ಕಥೆ ಚಿತ್ರಕಥೆ ಬರೆಯಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. 70ರ ದಶಕದ ಕಥೆಯನ್ನು ಸಿನಿಮಾದಲ್ಲಿ ಹೇಳುತ್ತಿದ್ದಾರಂತೆ. ‘ಗುರು ಶಿಷ್ಯರು’ ಸಿನಿಮಾ ನಿರ್ದೇಶಕ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ಸೇರಿ ಲಾಕ್‌ಡೌನ್ ಸಮಯದಲ್ಲಿ ಈ ಕಥೆಯನ್ನು ಸಿದ್ಧಪಡಿಸಿದ್ದರು. ಒಟ್ಟಿನಲ್ಲಿ ‘D56’ ಕಥೆ ಬಗ್ಗೆ ಭಾರೀ ನಿರೀಕ್ಷೆ ಇದೆ. ರಾಬರ್ಟ್ ಸಿನಿಮಾದಲ್ಲಿ ಸ್ನೇಹಿತನನ್ನು ಬಹಳ ವಿಭಿನ್ನವಾಗಿ ತೋರಿಸಿ ನಿರ್ದೇಶಕ ತರುಣ್ ಸುಧೀರ್ ಗೆದ್ದಿದ್ದರು. ಈ ಬಾರಿ ಕೂಡ ಅಂಥದ್ದೇ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ದರ್ಶನ್ ಲುಕ್ ಬಗ್ಗೆ ರಹಸ್ಯ ಕಾಪಾಡಿಕೊಂಡಿದೆ ಸಿನಿತಂಡ. ದರ್ಶನ್ ಹುಟ್ಟುಹಬ್ಬದ ದಿನ ಪೋಸ್ಟರ್‌ನಲ್ಲಿ ಟೈಟಲ್ ಜೊತೆಗೆ ದರ್ಶನ್ ಲುಕ್ ರಿವೀಲ್ ಆಗಲಿದೆ. ರಾಕ್‌ಲೈನ್‌ ವೆಂಕಟೇಶ್ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

D56 Movie : Do you know who is going to act in the movie ‘D56’ starring actor Darshan?

RELATED ARTICLES

Most Popular