Withdrawal of Cow hug day: ʼಗೋವನ್ನು ಅಪ್ಪಿಕೋʼ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ : ಅಷ್ಟಕ್ಕೂ ಕಾರಣವೇನು ಗೊತ್ತಾ ?

ನವದೆಹಲಿ : (Withdrawal of Cow hug day) ಪ್ರೇಮಿಗಳ ದಿನವನ್ನು ಹಸುಗಳನ್ನು ಅಪ್ಪಿಕೋ ದಿನವನ್ನಾಗಿ ಆಚರಿಸುವಂತೆ ಪ್ರಾಣಿ ಕಲ್ಯಾಣ ಮಂಡಳಿ ಆದೇಶಿಸಿತ್ತು. ಆದರೆ ಕೌವ್ ಹಗ್ ಡೇ ಆಚರಣೆಗೆ ಎಲ್ಲೆಡೆಯಿಂದಲೂ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿತ್ತು. ಇನ್ನೂ ಹಲವು ಹಸುಗಳು ಕಾಲಿನಿಂದ ಒದೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಹಸುಗಳ ಅಪ್ಪಿಕೋ ದಿನಾಚರಣೆಯನ್ನು ಹಿಂಪಡೆಯಲಾಗಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ ಫೆ. 14 ರಂದು ಹಸುವನ್ನು ತಬ್ಬಿಕೊಳ್ಳುವ ದಿನ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ ಕೆ ದತ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೌ ಹಗ್‌ ಡೇ ಆಚರಣೆಗೆ ಎಲ್ಲೆಡೆಯಿಂದಲೂ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿದ್ದವು. ಇನ್ನೂ ಹಲವು ಹಸುಗಳು ಕಾಲಿನಿಂದ ಒದೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಈ ಹಿನ್ನಲೆಯಲ್ಲಿ ಇದೀಗ ಪ್ರಾಣಿ ಕಲ್ಯಾಣ ಮಂಡಳಿ ಕೌ ಹಗ್‌ ಡೇ ಮನವಿಯನ್ನು ಹಿಂಪಡೆದಿದೆ.

ಭಾರತೀಯ ಸಂಸ್ಕೃತಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಹಸು ಬೆನ್ನೆಲುಬಾಗಿದೆ ಹಾಗೂ ಹಸು ನಮ್ಮ ಜೀವನಕ್ಕೆ ನೆರವಾಗುವ ಜಾನುವಾರು ಸಂಪತ್ತು ಹಾಗೂ ಜೀವವೈವಿಧ್ಯತೆಯನ್ನು ಪ್ರತಿನಿಧಿಸುವ ಪ್ರಾಣಿಯಾಗಿದೆ. ಹಸು ಮನುಕುಲವನ್ನು ತಾಯಿಯಂತೆ ಪೋಷಣೆಯ ಪ್ರಕೃತಿ ಹೊಂದಿರುವುದರಿಂದ ಕಾಮಧೇನು ಹಾಗೂ ಗೋಮಾತೆ ಎಂದು ಕರೆಸಿಕೊಳ್ಳುತ್ತದೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ : Lithium storage in kashmir: ಭಾರತದ ಮೊದಲ ಲಿಥಿಯಂ ನಿಕ್ಷೇಪ ಕಾಶ್ಮೀರದಲ್ಲಿ ಪತ್ತೆ

ಇದನ್ನೂ ಓದಿ : Cow Hug Day: ಹಸುಗಳ ಅಪ್ಪುಗೆಯಿಂದ ನಿವಾರಣೆಯಾಗುತ್ತೆ ಮಾನಸಿಕ ಒತ್ತಡ

ಇದನ್ನೂ ಓದಿ : Mandatory covid test cancelled: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆ ರದ್ದು

ಪಶ್ಚಿಮದ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಅಳಿವಿನ ಅಂಚಿನಲ್ಲಿದೆ. ಪಶ್ಚಿಮದ ನಾಗರಿಕತೆ ನಮ್ಮ ಭೌತಿಕ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುವಂತೆ ಮಾಡಿದೆ ಎಂದು ಮಂಡಳಿ ಹೇಳಿದೆ. ಪ್ರಾಣಿ ಮಂಡಳಿಯ ಪ್ರಕಾರ, ಹಸುವಿನಿಂದ ಸಿಗುವ ಅಪಾರ ಪ್ರಯೋಜನಗಳಿಂದಾಗಿ ಅದನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಹಾಗೂ ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ.

Withdrawal of Cow hug day: ‘Hug the cow’ Animal Welfare Board: Do you know the reason?

Comments are closed.