ಮಂಗಳವಾರ, ಏಪ್ರಿಲ್ 29, 2025
HomeCinemaDaali Dhananjay Birthday : ಹುಟ್ಟುಹಬ್ಬ ಮಾಡಿಕೊಳ್ಳಲ್ಲ ಎಂದ ಡಾಲಿಧನಂಜಯ್: ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು...

Daali Dhananjay Birthday : ಹುಟ್ಟುಹಬ್ಬ ಮಾಡಿಕೊಳ್ಳಲ್ಲ ಎಂದ ಡಾಲಿಧನಂಜಯ್: ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು ಗೊತ್ತಾ

- Advertisement -

Daali Dhananjay Birthday : ಸ್ಯಾಂಡಲ್‌ವುಡ್‌ ನಟ-ನಟಿಯರ ಹುಟ್ಟುಹಬ್ಬ ಅಂದ್ರೇ ಅದು ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಆದರೆ ಕೊರೋನಾದಿಂದಾಗಿ ಬಹುತೇಕ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಕಳೆದ ಎರಡು ವರ್ಷದಿಂದ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಿಸೋ ಕನಸಿನಲ್ಲಿದ್ದ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ನಿಧನದಿಂದ ಮತ್ತಷ್ಟು ನಿರಾಸೆಯಾಗಿತ್ತು. ಪುನೀತ್ ನಿಧನದ ಹಿನ್ನೆಲೆಯಲ್ಲಿ ಬಹುತೇಕ ನಟರು ಹುಟ್ಟುಹಬ್ಬ ಆಚರಿಸಿ ಕೊಂಡಿಲ್ಲ. ಈಗ ಇದೇ ಹಾದಿಯಲ್ಲಿ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕೂಡ ಸೇರ್ಪಡೆಗೊಂಡಿದ್ದಾರೆ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ನಟ ರಾಕ್ಷಸ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟ ಡಾಲಿ ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರಾಕರಿಸಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನದಿಂದ ಹೊರಬರದೇ ಇರೋ ಡಾಲಿ ಧನಂಜಯ್ ಅದೇ ಕಾರಣಕ್ಕೆ ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ ಎಂದಿದ್ದಾರೆ. ಅಪ್ಪುಗಾಗಿ ಶಿವಣ್ಣನ‌ ಹಾದಿಯಲ್ಲೆ ಸಾಗಲು ನಟ ರಾಕ್ಷಸ ಡಾಲಿ ಧನಂಜಯ್ ನಿರ್ಧರಿಸಿದ್ದಾರೆ.

ಈ ವಿಚಾರವನ್ನು ಅಭಿಮಾನಿಗಳಿಗೆ ವಿಡಿಯೋ ಮೂಲಕ ತಿಳಿಸಿದ ಧನಂಜಯ್, ನಾನು ಈ ಭಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಯಾರು ನನ್ನ ಹುಟ್ಟುಹಬ್ಬಕ್ಕಾಗಿ ಹಣ ಖರ್ಚು ಮಾಡಬೇಡಿ. ಕೇಕ್ ಹಾರಕ್ಕಾಗಿ ಖರ್ಚು ಮಾಡುವ ಹಣವನ್ನೇ ನಿಮ್ಮ ಸುತ್ತಲೂ ಇರುವ ಅಗತ್ಯ ಇರುವವರಿಗೆ ಕೊಟ್ಟು ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸು ತ್ತಿರುವ ನಟ ಧನಂಜಯ್ ಮಂಗಳವಾರ ಅಂದ್ರೆ ಆಗಸ್ಟ್ 23ಕ್ಕೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಹೆಡ್ ಬುಷ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್ ಹಲವು ಸಿನಿಮಾದ ಮೂಲಕ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮನೆಮಾತಾಗಿದ್ದಾರೆ.

ಮೊನ್ನೆಯಷ್ಟೇ ಮಾನ್ಸೂನ್ ರಾಗಾ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಇದರಲ್ಲೂ ಡಾಲಿ ಗಮನ ಸೆಳೆದಿದ್ದಾರೆ. ನಟಿ ರಮ್ಯ ಕೂಡ ಡಾಲಿ ಧನಂಜಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದು ಇತ್ತೀಚಿಗೆ ಹೆಡ್ ಬುಷ್ ಸೆಟ್ ಗೂ ರಮ್ಯ ಭೇಟಿ ಕೊಟ್ಟಿದ್ದರು. ನಟನೆಯ ಜೊತೆಗೆ ಮಾನವೀಯತೆಯಲ್ಲೂ ಮಾದರಿಯಾಗ್ತಿರೋ ಡಾಲಿ ಧನಂಜಯ್ ಈಗ ಹಿರಿಯ ನಟರ ಹಾದಿಯನ್ನೇ ತುಳಿದು ಗಮನ ಸೆಳೆದಿದ್ದಾರೆ.

https://youtu.be/Yz4f6Ze4BMw

ಇದನ್ನೂ ಓದಿ : Boycott Liger Vijay Deverakonda : ಲೈಗರ್ ಗೂ ಬಾಯ್ಕಾಟ್ ಬಿಸಿ : ಅಮೀರ್ ಖಾನ್ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ ವಿಜಯ್ ದೇವರಕೊಂಡ

ಇದನ್ನೂ ಓದಿ : Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

Daali Dhananjay Birthday he will not celebrate his birthday Do you know what is the message given to the fans

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular