ಭಾನುವಾರ, ಏಪ್ರಿಲ್ 27, 2025
HomeCinemaLove Mocktail 2 : ನಿಧಿ ನೆನಪಿನಲ್ಲೇ ಆದಿ ಪಯಣ : ಅಭಿಮಾನಿಗಳನ್ನು ಸೆಳೆದ...

Love Mocktail 2 : ನಿಧಿ ನೆನಪಿನಲ್ಲೇ ಆದಿ ಪಯಣ : ಅಭಿಮಾನಿಗಳನ್ನು ಸೆಳೆದ ಲವ್ ಮಾಕ್ಟೆಲ್-2 ಟ್ರೇಲರ್

- Advertisement -

ಲವ್ ಮಾಕ್ಟೇಲ್ ಮೂಲಕ ಸ್ಯಾಂಡಲ್ ವುಡ್ ಗೆ ಹೊಸಬಗೆಯ ಸಿನಿಮಾ ಹಾಗೂ ಹೊಸತನವನ್ನು ಕೊಟ್ಟ ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ ಕಚಗುಳಿಯ ಪ್ರೀತಿಯನ್ನು ಭಾವುಕವಾಗಿ ಬೆಳ್ಳಿತೆರೆಗೆ ತರಲು ಸಿದ್ಧವಾಗಿದ್ದಾರೆ. ಅದರ ಫಲವಾಗಿ ಲವ್ ಮಾಕ್ಟೆಲ್ ಸಿಕ್ವೆನ್ಸ್ 2 (Love Mocktail 2) ತೆರೆಗೆ ಬರಲು ಸಿದ್ಧವಾಗಿದೆ. 2020 ರಲ್ಲಿ ಮೋಡಿ ಮಾಡಿದ ಲವ್‌ಮಾಕ್ಟೆಲ್ ಈಗ‌ ಮತ್ತೊಮ್ಮೆ ಎರಡನೇ ಭಾಗದಲ್ಲಿ ತೆರೆ ಕಾಣಲು ಸಿದ್ಧವಾಗಿದ್ದು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಕೊರೋನಾ ಎಫೆಕ್ಟ್ ನಡುವೆ ರಿಲೀಸ್ ಡೇಟ್ ಹೊಯ್ದಾಟದಲ್ಲಿರೋದರಿಂದ ಸದ್ಯ ಅಭಿಮಾನಿಗಳು ಟ್ರೇಲರ್ ಗೆ ಸಮಾಧಾನಪಟ್ಟುಕೊಳ್ಳುವಂತಾಗಿದೆ. ಸದ್ಯ ರಿಲೀಸ್ ಆಗಿರೋ ಟ್ರೇಲರ್ ಸಖತ್ ಟ್ರೆಂಡ್ ಆಗಿದ್ದು ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣಾ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ರಚೇಲ್ ಡೇವಿಡ್ ನಟಿಸಿರೋ ಸಿನಿಮಾ ಸದ್ಯ ತೆರೆಗೆ ಬರಲು ಸಿದ್ಧವಾಗಿದೆ.

ಮೊದಲ ಭಾಗದಲ್ಲಿ ಆದಿ ( ಡಾರ್ಲಿಂಗ್ ಕೃಷ್ಣಾ) ಹಾಗೂ ನಿಧಿ( ಮಿಲನಾ ನಾಗರಾಜ್ ) ಮದುವೆ ಆಗಿರುತ್ತೆ. ಆದರೆ ನಿಧಿ ಕ್ಯಾನ್ಸರ್ ನಿಂದ ಸಾಯುತ್ತಾರೆ. ಇದಾದ ಬಳಿಕ ಈಗ ಆದಿ ಹೊಸ ಹೊಸ ಜನರೊಂದಿಗೆ ಬೆರೆತಿದ್ದು ಹಲವರೊಂದಿಗೆ ಮುಖಾಮುಖಿಯಾಗಿದ್ದಾರೆ. ಟ್ರೇಲರ್ ಉದ್ದಕ್ಕೂ ಆದಿ‌ ನಿಧಿಯನ್ನು ನೆನಪಿಸಿಕೊಂಡು ಕೊರಗುವುದು. ತನ್ನ ಬದುಕೇ ನಿಧಿ ನೆನಪಿನೊಂದಿಗೆ ಬೆಸೆದುಕೊಂಡಿದೆ ಎಂದು ಹಳಹಳಿಸುವುದು ಎಲ್ಲವೂ ಇದೆ. ಇನ್ನು ಒಂದನೇ ಪಾರ್ಟ್ ನಲ್ಲಿ ಗಮನ ಸೆಳೆದಿದ್ದ ಅಮೃತಾ ಅಯ್ಯಂಗಾರ್ ಪಾರ್ಟ್ 2 ರಲ್ಲೂ ಕಾಣಿಸಿಕೊಂಡಿದ್ದಾರೆ.

ಆದಿ ಲೈಫ್ ಗೆ ಹೊಸ ಹುಡುಗಿ ಎಂಟ್ರಿಯಾಗುತ್ತಾ? ಆದಿ ಮತ್ತೆ ಮದುವೆ ಆಗ್ತಾರಾ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಈ ಟ್ರೇಲರ್ ನಲ್ಲಿ ಉತ್ತರ ಸಿಕ್ಕಿಲ್ಲ. ಅಷ್ಟೇ ಅಲ್ಲ ಆದಿ ಸ್ನೇಹಿತ ಈ ಕೇಸ್ ಅಷ್ಟು ಸುಲಭವಿಲ್ಲ ಎಂದು ಹೇಳಿರೋದು ಕೂಡ ಈ ಟ್ವಿಸ್ಟ್ ಗೆ ಬಲ ತುಂಬಿದೆ. ಲವ್ ಮಾಕ್ಟೆಲ್ ಸಿನಿಮಾದ ಬಳಿಕ ಚಾರ್ಮ್ ಹೆಚ್ಚಿಸಿಕೊಂಡ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ನಿಜ ಬದುಕಿನಲ್ಲೂ ಒಂದಾಗಿದ್ದು ಕಳೆದ ಫೆ.14 ರಂದು ಹೊಸಬದುಕಿಗೆ ಕಾಲಿರಿಸಿದ್ದರು. ಸದ್ಯ ಎರಡನೇ ಸಿನಿಮಾದ ಮೂಲಕ ಈ ಜೋಡಿ ಸ್ಯಾ‌ಂಡಲ್ ವುಡ್ ಗಮನ ಸೆಳೆದಿದೆ.

ಇದನ್ನೂ ಓದಿ : ಅನೀರಿಕ್ಷಿತವಾದ ಅವಕಾಶವೊಂದು ಒದಗಿ ಬಂತು : ಮನದಾಳದ ಮಾತು ಹಂಚಿಕೊಂಡ ಮೇಘನಾ ಸರ್ಜಾ

ಇದನ್ನೂ ಓದಿ : ಕೆಜಿಎಫ್-2 ರಿಲೀಸ್ ಗೂ ಮುನ್ನ ಬಸ್ರೂರಿನಲ್ಲಿ ಕ್ರಿಕೆಟ್‌ ಆಡಿದ ಯಶ್ : ಹೇಗಿತ್ತು ಗೊತ್ತಾ ರಾಕಿಂಗ್‌ ಸ್ಟಾರ್‌ ಬ್ಯಾಟಿಂಗ್‌

( Darling Krishna and Milana Nagaraj starring Love Mocktail 2 trailer is out )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular