MBBS Exam postponed : ಅಂತಿಮ ಎಂಬಿಬಿಎಸ್ ಪರೀಕ್ಷೆ ಮುಂದೂಡಿ: ವಿವಿಗೆ ಸಚಿವ ಡಾ. ಸುಧಾಕರ್ ಪತ್ರ

ಬೆಂಗಳೂರು : ಕೊರೋನಾದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆನ್ಲೈನ್ ಆಫ್ ಲೈನ್ ಕ್ಲಾಸ್ ಗಳ ಮಧ್ಯೆ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ಅರ್ಧದಷ್ಟು ಪಠ್ಯವು ಮುಗಿಯದೇ ಇದ್ದರೂ ಪರೀಕ್ಷೆ ಎದುರಿಸುವ ಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು. ಇದಕ್ಕೆ ಇಂಜಿನಿಯರಿಂಗ್, ಮೆಡಿಕಲ್ ಹೀಗೆ ಯಾವ ವಿದ್ಯಾರ್ಥಿಗಳು ಹೊರತಲ್ಲ. ಈಗ ಅಂತಿಮ ಎಂಬಿಬಿಎಸ್ ವಿದ್ಯಾರ್ಥಿಗಳ ಪರದಾಟಕ್ಕೆ ( MBBS Exam postponed ) ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಂದಿಸಿದ್ದಾರೆ.

ಅಂತಿಮ ವರ್ಷದ ಎಂಬಿಬಿಎಸ್‌ ಪರೀಕ್ಷೆಗಳು ಮುಂದೂಡಿಕೆ ಮಾಡುವಂತೆ ಕೋರಿ ಡಾ.ಸುಧಾಕರ್ ರಾಜೀವಗಾಂಧಿ ಆರೋಗ್ಯ ವಿವಿಗೆ ಪತ್ರ ಬರೆದಿದ್ದಾರೆ. ನಿಗದಿಯಂತೆ ಫೆ.22ರಿಂದ ಅಂತಿಮ ವರ್ಷದ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೋನಾ ಎಫೆಕ್ಟ್ ನಿಂದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೇ ನಿಂದ ತರಗತಿ ಆರಂಭವಾಗಿದೆ. ಜುಲೈ ತಿಂಗಳವರೆಗೂ ಕೋವಿಡ್ ಹಿನ್ನೆಲೆ ಆನ್ ಲೈನ್ ಪಾಠ ಆಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ನಿಗದಿತ ಪ್ರಮಾಣದಲ್ಲಿ ಮುಗಿದಿಲ್ಲ.

ಅಲ್ಲದೇ ಅನುಭವದ ದೃಷ್ಟಿಯಿಂದಲೂ ವಿದ್ಯಾರ್ಥಿಗಳಿಗೆ ಕಲಿಯಲು ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿಲ್ಲ. ಅಲ್ಲದೇ ಅಂತಿಮ ವರ್ಷದ ವಿದ್ಯಾರ್ಥಿಗಳು 2 ತಿಂಗಳು‌ ಕೋವಿಡ್ ಕರ್ತವ್ಯ ನಿರ್ವಹಿಸಿದ್ದಾರೆ. ಇದರ ಮಧ್ಯೆ ಮತ್ತೆ ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದು ಕೂಡ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರಭಾವ ಬೀರಿದೆ.
ಈ ಎಲ್ಲ ಬೆಳವಣಿಗೆಗಳಿಂದ ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷಾ ತಯಾರಿ ಸಮಯ ಕಡಿಮೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆಗೆ ಅಚ್ಚುಕಟ್ಟಾಗಿ ತಯಾರಾಗಲು ಅಗತ್ಯವಿರುಷ್ಟು ಕಾಲಾವಕಾಶ ಸಿಕ್ಕಿಲ್ಲ.

ಹೀಗಾಗಿ ಅಂತಿಮ ಎಂಬಿಬಿಎಸ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಾಲಾವಕಾಶ ಒದಗಿಸಿ, ನಂತರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವಂತೆ ಡಾ.ಸುಧಾಕರ್ ತಮ್ಮ ಪತ್ರದಲ್ಲಿ ಸೂಚನೆ ನೀಡಿದ್ದಾರೆ. ಫೆ.22 ರಿಂದ ಪರೀಕ್ಷೆ ನಡೆಯಬೇಕಿರೋದರಿಂದ ವಿದ್ಯಾರ್ಥಿಗಳು ಒತ್ತಡದಲ್ಲಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಚಿವ ‌ಡಾ.ಸುಧಾಕರ್ ಪತ್ರದ ಮೂಲಕ ಪರೀಕ್ಷೆ ಮುಂದೂಡಿಕೆಗೆ ಸುಧಾಕರ್ ಸೂಚನೆ ನೀಡಿದ್ದಾರೆ. ಖುದ್ದು ಸಚಿವರೇ ವಿದ್ಯಾರ್ಥಿಗಳ ಸಮಸ್ಯೆ ಅರಿತು ವಿವಿಗೆ ಪತ್ರ ಬರೆದಿರೋದರಿಂದ ಸಚಿವರ ಮನವಿಗೆ ವಿವಿ ಸ್ಪಂದಿಸುವ ಭರವಸೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಕಾಲಾವಕಾಶ ಸಿಕ್ಕಿದರೇ ಸಾಕಪ್ಪಾ ಅಂತ ಕಾಯ್ತಿದ್ದಾರೆ.

ಇದನ್ನೂ ಓದಿ :  ಉಚಿತವಾಗಿ ಮಸಾಲೆ ದೋಸೆ ಕೊಡುತ್ತೆ ಈ ಹೋಟೆಲ್‌, ಇಡೀ ದೋಸೆ ತಿಂದ್ರೆ ಸಿಗುತ್ತೆ 71 ಸಾವಿರ ರೂಪಾಯಿ ಕ್ಯಾಶ್ ಪ್ರೈಸ್

ಇದನ್ನೂ ಓದಿ : ಶಿಕ್ಷಣ ಮತ್ತು ನೀರಾವರಿಗೆ ಭರ್ಜರಿ ಅನುದಾನ ನೀಡಿದ ನಿರ್ಮಲಾ ಸೀತಾರಾಮನ್‌

(Final Year MBBS exam postponed, Karnataka health minister Dr. K.Sudhakar Letter to University)

Comments are closed.