ಬೆಂಗಳೂರು: Darshan Controversy: ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಾಗುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಿಂದೂ ಧರ್ಮೀಯರ ನೆಚ್ಚಿನ ಲಕ್ಷ್ಮೀ ದೇವತೆಯ ಬಗ್ಗೆ ದರ್ಶನ್ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ ನಟ ದರ್ಶನ್, ಅದೃಷ್ಟದೇವತೆ ಯಾವಾಗಲೋ ಒಂದು ಬಾರಿ ಬಾಗಿಲು ತಟ್ಟುತ್ತಾಳಂತೆ. ಅವಳನ್ನು ಕರೆದುಕೊಂಡು ಹೋಗಿ ಬಟ್ಟೆ ತೆಗೆಸಿ ಬೆಡ್ ರೂಂನಲ್ಲಿ ಕೂರಿಸಿಕೊಳ್ಳಬೇಕು. ಬಟ್ಟೆ ಕೊಟ್ಟರೆ ತಾನೇ ಇನ್ನೊಂದು ಮನೆಗೆ ಹೋಗ್ತಾಳೆ, ಅದೇ ರೀತಿ ನಿರ್ಮಾಪಕರು ಸಿಗುವುದೇ ಅಪರೂಪ. ಅವರು ಸಿಕ್ಕರೆ ಸದುಪಯೋಗಪಡಿಸಬೇಕು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅವರ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
No filter pic.twitter.com/tliTlJ87Or
— ಟ್ರೋಲ್ ಹೈಕ್ಳು (@TrollHaiklu) December 8, 2022
ಇದನ್ನೂ ಓದಿ: Kantara Hindi in Netflix : ನೆಟ್‌ಫ್ಲಿಕ್ಸ್‌ನಲ್ಲಿ “ಕಾಂತಾರ” ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ ?
ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ 2023ರಲ್ಲಿ ತೆರೆ ಕಾಣಲಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ. ಕ್ರಾಂತಿ ಸಿನಿಮಾದ ಧರಣಿ ಹಾಡನ್ನು ಇತ್ತೀಚೆಗಷ್ಟೆ ರಿಲೀಸ್ ಮಾಡಲಾಗಿತ್ತು. ಹಾಡಿಗೆ ಸಾಕಷ್ಟು ಮೆಚ್ಚುಗೆ ಕೂಡಾ ಸಿಕ್ಕಿದೆ. ಮೈಸೂರಿನಲ್ಲಿ ಕ್ರಾಂತಿ ಸಿನಿಮಾದ ಹಾಡನ್ನು ರಿಲೀಸ್ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರನ್ನು ವೇದಿಕೆಗೆ ಆಹ್ವಾನಿಸಿದ್ದ ನಟ ದರ್ಶನ್ ಅವರ ಕೈಯಿಂದಲೇ ಹಾಡನ್ನು ರಿಲೀಸ್ ಮಾಡಿದ್ದರು. ಈ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಅವರು ಈ ಹೇಳಿಕೆಯನ್ನು ನೀಡಿದ್ದರು.
ಸದ್ಯ ನಟ ದರ್ಶನ್ ಅವರ ವಿವಾದಿತ ಹೇಳಿಕೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ಹಲವಾರು ಮಂದಿ ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಕ್ರಾಂತಿ ಸಿನಿಮಾ ಬ್ಯಾನ್ ಮಾಡುವಂತೆ ಅಭಿಯಾನ ಕೂಡಾ ಆರಂಭವಾಗಿದೆ. ಆದರೆ ಇದೇ ವಿಚಾರದಲ್ಲಿ ಪರ- ವಿರೋಧದ ಮಾತುಗಳೂ ಕೇಳಿಬರುತ್ತಿವೆ. ದರ್ಶನ್ ಅದೃಷ್ಟ ದೇವತೆಯನ್ನು ಅವಮಾನ ಮಾಡಿರುವುದು ತಪ್ಪು. ಹಿಂದೂ ದೇವತೆಗೆ ಅವಮಾನ ಮಾಡುವ ಮೂಲಕ ನಮ್ಮ ಭಾವನೆಗೆ ಅವರು ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದರ್ಶನ್ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅವರು ನಿರ್ಮಾಪಕರನ್ನು ಅದೃಷ್ಟದೇವತೆಗೆ ಹೋಲಿಸಿದ್ದಾರೆ. ಇದರಲ್ಲಿ ತಪ್ಪು ಹುಡುಕುವ ಕೆಲಸ ಬೇಡ ಎಂದು ಇನ್ನು ಕೆಲವರು ದರ್ಶನ್ ಪರ ಬ್ಯಾಟಿಂಗ್ ಬೀಸಿದ್ದಾರೆ.
ಈ ಹಿಂದೆಯೂ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ವಿಚಾರಗಳಲ್ಲಿ ವಿವಾದಿತ ಹೇಳಿಕೆಯನ್ನು ನೀಡಿ ಜನರ ಕೆಂಗಣ್ಣಿಗೆ ನಟ ದರ್ಶನ್ ಗುರಿಯಾಗಿದ್ದರು. ಈ ಬೆನ್ನಲ್ಲೇ ನಾನು ಏನೇ ಮಾತನಾಡಿದರೂ ವಿವಾದ ಆಗುತ್ತೆ. ಹಾಗಾಗಿ ಏನು ಮಾತನಾಡಲೂ ಭಯ ಆಗುತ್ತೆ ಎಂದಿದ್ದರು. ಆದರೆ ಇದೀಗ ಕ್ರಾಂತಿ ಸಿನಿಮಾದ ಬಿಡುಗಡೆ ಮುನ್ನವೇ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.