KL Rahul to lead Team India: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಔಟ್; ಟೀಂ ಇಂಡಿಯಾಗೆ ಕೆ.ಎಲ್. ರಾಹುಲ್ ನಾಯಕ

ಮುಂಬೈ: KL Rahul to lead Team India: ಎಡಗೈ ಹೆಬ್ಬೆರಳ ಗಾಯಕ್ಕೊಳಗಾಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ (India Vs Bangladesh test series) ಹೊರಬಿದ್ದಿದ್ದಾರೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಚೇತೇಶ್ವರ್ ಪೂಜಾರ ಅವರಿಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ. ರೋಹಿತ್ ಶರ್ಮಾ ಜಾಗದಲ್ಲಿ ಬಂಗಾಳ ತಂಡದ ಆರಂಭಿಕ ಬ್ಯಾಟ್ಸ್ ಮನ್ ಅಭಿಮನ್ಯು ಈಶ್ವರನ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಗಾಯಾಳು ವೇಗಿ ಮೊಹಮ್ಮದ್ ಶಮಿ ಬದಲು ಸೌರಾಷ್ಟ್ರ ತಂಡದ ನಾಯಕ, ಎಡಗೈ ಮಧ್ಯಮ ವೇಗಿ ಜೈದೇವ್ ಉನಾದ್ಕಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರ ಬದಲು ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಅವರನ್ನು ಟೀಂ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು

ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಡಿಸೆಂಬರ್ 14ರಂದು ಛಟ್ಟೋಗ್ರಾಮ್ ನಲ್ಲಿ ಆರಂಭವಾಗಲಿದೆ.

ಬಾಂಗ್ಲಾದೇಶ ವಿರುದ್ಧದ ಚೆಸ್ಟ್ ಸರಣಿಗೆ ಭಾರತದ ಪರಿಷ್ಕೃತ ತಂಡ:
ಕೆ.ಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜೈದೇವ್ ಉನಾದ್ಕಟ್.

ಭಾರತ Vs ಬಾಂಗ್ಲಾದೇಶ ಟೆಸ್ಟ್ ಸರಣಿಯ ವೇಳಾಪಟ್ಟಿ
ಪ್ರಥಮ ಟೆಸ್ಟ್: ಡಿಸೆಂಬರ್ 14-18; ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೋಗ್ರಾಮ್
ದ್ವಿತೀಯ ಟೆಸ್ಟ್: ಡಿಸೆಂಬರ್ 22-26; ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ, ಢಾಕಾ

ಇದನ್ನೂ ಓದಿ: Karun Nair Emotional tweet : “ಡಿಯರ್ ಕ್ರಿಕೆಟ್.., ನನಗೊಂದು ಚಾನ್ಸ್ ಕೊಡು”.. ರಣಜಿ ತಂಡದಿಂದ ಹೊರ ಬಿದ್ದ ಕರುಣ್ ನಾಯರ್ ಭಾವುಕ ಸಂದೇಶ

KL Rahul to lead Team India: Rohit out from Test series against Bangladesh; KL Rahul to lead Team India

Comments are closed.