ನಟ ದರ್ಶನ್‌ ಅಭಿನಯದ ಕ್ರಾಂತಿ 100 ಕೋಟಿ ರೂ. ಕ್ಲಬ್ ಸೇರಿದ 4ನೇ ಸಿನಿಮಾ

ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ (Darshan – Kranti Movie) ದರ್ಶನ್ ಅಭಿನಯದ ಕ್ರಾಂತಿ , ಬಿಡುಗಡೆಯ ನಂತರವೂ ಸರಿಯಾದ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜನವರಿ 26) ಥಿಯೇಟರ್‌ಗಳಿಗೆ ಅಪ್ಪಳಿಸಿರುವ ಈ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಅಧಿಕೃತವಾಗಿ ರೂ 100 ಕೋಟಿ ಒಟ್ಟು ಸಂಗ್ರಹವನ್ನು ದಾಟಿದೆ. ಇದರಲ್ಲಿ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಸೇರಿವೆ. ಅವುಗಳು ಭಾರಿ ಬೆಲೆಗೆ ಮಾರಾಟವಾಗಿದ್ದು, ಥಿಯೇಟರ್ ವ್ಯವಹಾರದಿಂದ ಗಳಿಸಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಕೂಡ ಮೊದಲ ಬಾರಿ ಡಿಸೆಂಟ್ ಕಲೆಕ್ಷನ್ ಮಾಡಿದೆ. ಶುಕ್ರವಾರ (ಜನವರಿ 27) ಒಂದು ದಿನ ಬಿಟ್ಟು ಉಳಿದು ಮೂರು ದಿನಗಳಲ್ಲಿ ಕಲೆಕ್ಷನ್ ಅದ್ಭುತ ಅಂತ ವಿತರಕರು ಹೇಳುತ್ತಿದ್ದಾರೆ. ಈಗಾಗಲೇ ‘ಕ್ರಾಂತಿ’ ಸಿನಿಮಾದ ನಾಲ್ಕು ದಿನಗಳ ಕಲೆಕ್ಷನ್ ಹೊರಬಿದ್ದಿದೆ. ನಾಲ್ಕೇ ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ‘ಕ್ರಾಂತಿ’ 100 ಕೋಟಿ ರೂ. ಕ್ಲಬ್ ಸೇರಿದ್ದು ಟ್ರೆಂಡಿಂಗ್ ಆಗುತ್ತಿದೆ.

ಗಣರಾಜ್ಯೋತ್ಸವದಂದು (ಜನವರಿ 26) ತೆರೆಕಂಡಿದ್ದ ‘ಕ್ರಾಂತಿ’ ಸಿನಿಮಾ ನಾಲ್ಕು ದಿನ ಕಲೆಕ್ಷನ್ ಚೆನ್ನಾಗಿದೆ. ವೀಕೆಂಡ್‌ನಲ್ಲಿ ಬಹುತೇಕ ಸಿನಿಮಂದಿರಗಳು ತುಂಬಿವೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ದರ್ಶನ್ ಸಿನಿಮಾ ‘ಕ್ರಾಂತಿ’ 100 ಕೋಟಿ ರೂ. ಕ್ಲಬ್ ಸೇರಿದೆ. ಇದರಲ್ಲಿ ಥಿಯೇಟರ್‌ನಿಂದ ಬಂದ ಹಣ, ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸೇಲ್ ಆದ ಮೊತ್ತ ಸೇರಿದೆ. ಹೀಗಾಗಿ ‘ಕ್ರಾಂತಿ’ ನಾಲ್ಕು ದಿನಗಳ ಅಂತರದಲ್ಲಿ 103.7 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಕ್ರಾಂತಿ’ ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ‘ಕ್ರಾಂತಿ’ ಪ್ರಸಾರದ ಹಕ್ಕು ಉದಯ ಟಿವಿಗೆ ಸೇಲ್ ಆಗಿದೆ. ಮೂಲಗಳ ಪ್ರಕಾರ, ಉದಯ ಟಿವಿಗೆ 13 ಕೋಟಿ ರೂ. ಸೇಲ್ ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಒಟಿಟಿ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಇವೆಲ್ಲವನ್ನೂ ಸೇರಿ 100 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಸಿನಿಮಾದ ಮತ್ತೊಂದು ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ನಾಲ್ಕು ದಿನಗಳಲ್ಲಿ ‘ಕ್ರಾಂತಿ’ ಸಿನಿಮಾ ಸಿನಿಮಂದಿರದಿಂದಲೇ ದೊಡ್ಡ ಮೊತ್ತ ಕಲೆಹಾಕಿದೆ. ಮೂಲಗಳ ಪ್ರಕಾರ, ನಾಲ್ಕು ದಿನಗಳಲ್ಲಿ ಕ್ರಾಂತಿ ಸಿನಿಮಾ ಸುಮಾರು 83 ಕೋಟಿ ರೂ.ಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ : AI ಪೋಟೋಸ್ ಗೆ ಮನಸೋತ ಸ್ಯಾಂಡಲ್ ವುಡ್: ನಟಿಮಣಿಯರ ಪೋಟೋಸ್ ವೈರಲ್

ಇದನ್ನೂ ಓದಿ : ರಿಲೀಸ್‌ ದಿನ ಅಬ್ಬರಿಸಿದ್ದ ಕ್ರಾಂತಿ ನಂತರ 3 ದಿನಗಳಲ್ಲಿ ಗಳಿಸಿದೆಷ್ಟು ಗೊತ್ತಾ ?

ಇದನ್ನೂ ಓದಿ : Saanya Iyer : ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು

ಮುಂದಿನ ದಿನಗಳಲ್ಲಿ ಈ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಹೊಸ ದಾಖಲೆ ಬರೆಯುತ್ತಾ? ಅನ್ನೋದನ್ನು ನಿರ್ಧರಿಸಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ 100 ಕೋಟಿ ರೂ. ದುಡಿದಿದೆ. ಇದು 100 ಕೋಟಿ ರೂ. ಕ್ಲಬ್ ಸೇರಿದ ದರ್ಶನ್ 4ನೇ ಸಿನಿಮಾ. 2019ರಲ್ಲಿ ತೆರೆಕಂಡಿದ್ದ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’ 100 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗೇ 2021ರಲ್ಲಿ ತೆರೆಕಂಡಿದ್ದ ‘ರಾಬರ್ಟ್’ 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿತ್ತು. ಈಗ ‘ಕ್ರಾಂತಿ’ ಕೂಡ ಅದೇ ದಾರಿ ಹಿಡಿದಿದೆ.

Darshan – Kranti Movie : Actor Darshan’s Kranti made Rs 100 crore. 4th movie to join the club

Comments are closed.