ಡಿ ಬಾಸ್ ತನ್ನ ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ದಿನದಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ದರ್ಶನ್ ಅಭಿನಯಿಸುತ್ತಿರುವ 55ನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ‘ಕ್ರಾಂತಿ’ ಎಂದು ಹೆಸರಿಡಲಾಗಿದೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಐದೂ ಭಾಷೆಗಳಲ್ಲಿ ಸಿನಿಮಾದ ಹೆಸರುಳ್ಳ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.
ಇಂದು ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ದರ್ಶನ್‌ರ ಆಂಗ್ರಿ ಲುಕ್‌ನ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಕಾರೊಂದು ವೇಗವಾಗಿ ಹೋಗುತ್ತಿರುವ ಚಿತ್ರವೂ ಇದೆ. ಜೊತೆಗೆ ವಿಮಾನ, ಹೆಲಿಕಾಪ್ಟರ್‌ಗಳ ಚಿತ್ರವೂ ಇದೆ. ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎಂಬುದು ಅರಿವಾಗುತ್ತದೆ.
ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳಿಗೆ ಧಮಾಕಾ: ಗೌರಿ-ಗಣೇಶ್ ಹಬ್ಬಕ್ಕೆ ಬರಲಿದೆ ಅಣ್ಣಾತ್ತೆ ಫರ್ಸ್ಟ್ ಲುಕ್
ದರ್ಶನ್ ಅಭಿನಯಿಸುತ್ತಿರುವ ‘ಕ್ರಾಂತಿ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದು, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ. ದರ್ಶನ್ ನಟಿಸಿದ್ದ ‘ಯಜಮಾನ’ ಚಿತ್ರವನ್ನೂ ಸಹ ಇದೇ ತಂಡ ನಿರ್ಮಾಣ ಮಾಡಿತ್ತು. ವಿ.ಹರಿಕೃಷ್ಣಗೆ ನಿರ್ದೇಶಕರಾಗಿ ಇದು ಎರಡನೇ ಸಿನಿಮಾ. ಸಂಗೀತ ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ.
ಇದನ್ನೂ ಓದಿ: ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿ: ನೀನಾಸಂ ಸತೀಶ್ ಗೆ ಜೊತೆಯಾದ ಪದ್ಮಾವತಿ
ದರ್ಶನ್ ಕೊನೆಯದಾಗಿ ರಾಬರ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು ರಾಬರ್ಟ್ ಸಿನಿಮಾ. . ಈ ಸಿನಿಮಾ ಬಳಿಕ ದರ್ಶನ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಈ ಹಿಂದೆ ಹಿಟ್ ಸಿನಿಮಾ ನೀಡಿದ್ದ ತಂಡದೊಂದಿಗೆ ದರ್ಶನ್ ಮತ್ತೆ ಕೈಜೋಡಿಸಿದ್ದಾರೆ.
(Actor Darshan's new movie has been titled 'Kranti')