ಉಡುಪಿ ಜಿಲ್ಲೆಯಲ್ಲಿ ವೀಕೆಂಡ್‌ ಕರ್ಪ್ಯೂ ರದ್ದು : ಡಿಸಿ ಕೂರ್ಮರಾವ್‌ ಆದೇಶ

ಉಡುಪಿ : ರಾಜ್ಯ ಸರಕಾರ ನಿರ್ದೇಶನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ತಿಳಿಸಿದ್ದಾರೆ.

ಗಡಿ ಭಾಗದ ಜಿಲ್ಲೆಗಳಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲಾಗಿತ್ತು. ಆದರೆ ವರ್ತಕರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವೀಕೆಂಡ್‌ ಕರ್ಪ್ಯೂ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಹೊಸ ಆದೇಶವನ್ನು ಹೊರಡಿಸಿದ್ದಾರೆ.

ವಾರಾಂತ್ಯದ ಕರ್ಪ್ಯೂ ಹೊರತು ಪಡಿಸಿ ಉಳಿದೆಲ್ಲಾ ಆದೇಶಗಳು ಮುಂದುವರಿಯಲಿದೆ. ಹದಿನೆಂಟು ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಯನ್ನು ಪಡೆಯುವಂತೆ ವಿನಂತಿ ಮಾಡಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಸರ್‌ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ.

ಕೇರಳದಿಂದ ರಾಜ್ಯಕ್ಕೆ ಪ್ರಯಾಣಿಸುವರು ಹಾಗೂ ರಾಜ್ಯದಿಂದ ಕೇರಳಕ್ಕೆ ತೆರಳುವವರು ಕನಿಷ್ಠ ಎರಡು ತಿಂಗಳ ಕಾಲ ತಮ್ಮ ಪ್ರವಾಸವನ್ನು ಮುಂದೂಡಿಕೆ ಮಾಡುವಂತೆ ಅವರು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ವೀಕೆಂಡ್‌ ಕರ್ಪ್ಯೂ ರದ್ದಾದರೂ ಕೂಡ ನೈಟ್‌ ಕರ್ಪ್ಯೂ ಮುಂದುವರಿಕೆಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್‌ ಆರ್ಭಟ : ದ.ಕ ಜಿಲ್ಲೆ ಗಡಿ ಭಾಗದಲ್ಲಿ ಕಟ್ಟೆಚ್ಚರ

ಇದನ್ನೂ ಓದಿ : ಕೊಲ್ಲೂರು ದೇವಳ ಪ್ರವೇಶಕ್ಕಿನ್ನು ಆಧಾರ್‌ ಕಡ್ಡಾಯ : ಕೇರಳ ಭಕ್ತರ ನಿಗಾಕ್ಕೆ ಉಡುಪಿ ಜಿಲ್ಲಾಡಳಿತದ ಹೊಸ ಆದೇಶ

(weekend Curfew Cancel : Udupi DC Kurma Rao Order)

Comments are closed.